ಕೊಪ್ಪಳ/ಕಾರಟಗಿ:ಭೋವಿ ಸಮುದಾಯದ ಶಿವರಾಜ್ ತಂಗಡಗಿಯವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಭೋವಿ ಸಮಾಜದ ಕಾರಟಗಿ ತಾಲೂಕಾ ಅಧ್ಯಕ್ಷ ರವಿಕುಮಾರ್ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಠ ಬಹುಮತ ಪಡೆಯುವಲ್ಲಿ ಭೋವಿ ಸಮುದಾಯವೂ ಮಹತ್ವದ ಪಾತ್ರವಹಿಸಿದೆ.ಶ್ರೀಮಾನ್ಯ ಶಿವರಾಜ ತಂಗಡಗಿಯವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು ಸಮಾಜದ ಕಾರ್ಯದರ್ಶಿಯಾದ ರಮೇಶ್ ಮುಸ್ಟೂರು ಡಗ್ಗಿ ಮಾತನಾಡಿ ಶ್ರೀಮಾನ್ಯ ಶಿವರಾಜ ತಂಗಡಗಿ ಅವರು ಈ ಹಿಂದೆ ಶಾಸಕರಾಗಿ ಸಚಿವರಾಗಿ
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ.
ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಭೋವಿ ಸಮಾಜದಿಂದ ಒತ್ತಾಯ ಮಾಡಲಾಯಿತು ಈ ಬಾರಿ ಶಾಸಕರು
ಸಚಿವರಾದರೆ ಸರ್ಕಾರದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಜನರಿಗೆ ಒದಗಿಸುತ್ತಾರೆ. ನಂತರ ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ 5 ವರ್ಷಗಳ ಕಾಲ ಜಿಲ್ಲೆಯ ಸಂಪೂರ್ಣ ಜವಾಬ್ದಾರಿಯ ಕಾರ್ಯವನ್ನು ನಿರ್ವಹಿಸಲು ಯಶಸ್ವಿಯಾಗಿದ್ದಾರೆ. ಕ್ಷೇತ್ರದಲ್ಲಿ 42,000 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿ ಜನರ ಮನಸ್ಸು ಗೆದ್ದಿದ್ದಾರೆ,ಅವರು ಮಾಡಿದ ಪ್ರಮಾಣಿಕದ ಕೆಲಸಕ್ಕೆ ಕ್ಷೇತ್ರದ ಜನರು ಹೆಚ್ಚು ಮತಗಳಿಂದ ಆಶೀರ್ವಾದ ಮಾಡಿದ್ದಾರೆ ಎಂದರು ಈ ಸಂದರ್ಭದಲ್ಲಿ ಬೋವಿ ಸಮಾಜದ ತಾಲೂಕು ಅಧ್ಯಕ್ಷರಾದ ರವಿಕುಮಾರ, ಉಪಾಧ್ಯಕ್ಷರಾದ ರಮೇಶ್ ನಾಗನಕಲ್, ಗೌರವಾಧ್ಯಕ್ಷರಾದ ಗೂರಪ್ಪ ನಾಗನಕಲ್, ಕಾರ್ಯದರ್ಶಿಯಾದ ರಮೇಶ್ ಮುಷ್ಟೂರ್ ಡಗ್ಗಿ, ನಾಗೇಶ ಭೋವಿ ಸಿಂಗನಾಳ,ಕುಂಟೆಪ್ಪ ಸಿಂಗನಾಳ,ಪಂಪಾಪತಿ ಸೋಮನಾಳ, ನಾಗರಾಜ್ ಚಳ್ಳೂರ,ಸುಧಾಕರ್ ಕಾರಟಗಿ,ಶಿವಕುಮಾರ್ ರಾಮನಗರ, ಚಿರಂಜೀವಿ ಮಲ್ಲಾನಹಳ್ಳಿ,ರಮೇಶ ಮುಕುಂದ,ದೇವರಾಜ್ ಕಾರಟಗಿ,ವೀರೇಶ ಸಿಂಗನಾಳ,ರಮೇಶ್ ರಾಮನಗರ, ಬಸವರಾಜ ಸಿಂಗನಾಳ,ತಾಲೂಕಿನ ತಾಲೂಕು ಘಟಕದ ಬೋವಿ ಸಮಾಜದ ಹಿರಿಯರು ಮುಖಂಡರು ಯುವಕರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.