ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸ ಮತ್ತು ಎಲ್ಲರ ಪ್ರೋತ್ಸಾಹ ಈ ಉತ್ತಮ ಫಲಿತಾಂಶಕ್ಕೆ ಕಾರಣ:ವಿಧ್ಯಾರ್ಥಿನಿ ಕುಮಾರಿ ಶಿವಾನಿ

ಯಾದಗಿರಿ/ಶಹಾಪುರ:ನಗರದ ಶಾ ಮಗನಲಾಲ್ ಚಮನಾಜಿ ಜೈನ್ ಶಾಲೆಯಲ್ಲಿ 2022-23 ರ ಸಾಲಿನಲ್ಲಿ ಸಿ.ಬಿ.ಎಸ್.ಇ 10ನೇ ವರ್ಗದ ವಾರ್ಷಿಕ ಪರಿಕ್ಷೆಯಲ್ಲಿ ಶಾಲೆಗೆ ಪ್ರತಿಶತ 100ರಷ್ಟು ಫಲಿತಾಂಶ ಬಂದಿದ್ದು ಹಾಗೂ ವೈಯಕ್ತಿಕವಾಗಿ 94.02 ಪ್ರತಿಶತ ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಕುಮಾರಿ ಶಿವಾನಿ ಹಾಗೂ ಅವರ ಪಾಲಕರು ಭೇಟಿ ನೀಡಿ ತಮ್ಮ‌ಮಗಳ ಯಶಸ್ಸಿಗೆ ಕಾರಣೀಭೂತರಾದ ಶಾಲೆಯ ಅಧ್ಯಕ್ಷರಾದ ಶ್ರೀ ಮಾಂಗೀಲಾಲ್ ಜೈನ್ ಮತ್ತು ಮುಖ್ಯ ಶಿಕ್ಷಕರಾದ ಶ್ರೀ ವಂಶಿಕೃಷ್ಣ ಅವರಿಗೆ ಮತ್ತು ಶಾಲೆಯ ಸಮಸ್ತ ಶಿಕ್ಷಕ ವೃಂದಕ್ಕೆ ಸಿಹಿ ಹಂಚಿ ಗೌರವ ಸಮರ್ಪಿಸಿದರು ವಿದ್ಯಾರ್ಥಿನಿಯ ಸಾಧನೆಗೆ ಪಾಲಕರು ಹರ್ಷ ವ್ಯಕ್ತ ಪಡಿಸಿ ನಮ್ಮ ಮಗಳು ಈ ಶಾಲೆಗೆ ಬಂದು ಸುಮಾರು 12 ವರ್ಷಗಳು ಕಳೆದಿವೆ ಶಾಲೆಯೊಂದಿಗಿನ ಒಡನಾಟ ಉತ್ತಮವಾಗಿದ್ದು ಪ್ರತೀ ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ ಮುಖ್ಯವಾಗಿರುತ್ತದೆ ಅದು ಈ ಶಾಲೆಯಲ್ಲಿ ಈ ವಿಷಯದ ಬಗೆಗೆ ವಿಶೇಷ ಕಾಳಜಿ ಇದೆ. ಮುಂದಿನ ದಿನಗಳಲ್ಲಿ ಶಾಲೆಯಿಂದ ಇದೇ ತರಹದ ಫಲಿತಾಂಶ ಬರಲಿ ಎಂದು ಹಾರೈಸಿದರು ಶಾಲೆಯ ಅಧ್ಯಕ್ಷರು ಕುಮಾರಿ ಶಿವಾನಿ ಹಾಗೂ ಅವರ ಪಾಲಕರಿಗೆ ಗೌರವ ಸಮರ್ಪಿಸುತ್ತ ವಿದ್ಯಾರ್ಥಿನಿಯ ಮುಂದಿನ ಜೀವನ ಸಂತಸದಿಂದ ಇರಲಿ ಅವಳ ಕನಸು ನೆರವೇರಲಿ ಎಂದು ಶುಭ ಹಾರೈಸಿದರು. ಕುಮಾರಿ ಶಿವಾನಿ ಮಾತನಾಡಿ ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸ ಮತ್ತು ಎಲ್ಲರ ಪ್ರೋತ್ಸಾಹ ಈ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದ್ದು ಎಂದು ತನ್ನ ಅನಿಸಿಕೆಯನ್ನು ಹಂಚಿಕೊಂಡಳು.
ಅದೇ ರೀತಿ ಶಾಲೆಯ ಮುಖ್ಯ ಗುರುಗಳು ಮಾತನಾಡಿ ಕಠಿಣ ಪರಿಶ್ರಮ ನಿರಂತರ ಅಧ್ಯಯನ ಮಾತ್ರ ನಮ್ಮನ್ನು ಯಶಸ್ಸಿನ ಗುರಿಯತ್ತ ಕೊಂಡೊಯ್ಯುತ್ತವೆ ಎಂದರು. 9ನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಅಕ್ಷತಾ ಹಾಗೂ ಅಮೂಲ್ಯ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ