ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸರಿದ ಮನಸ್ಸುಗಳು ಮತ್ತೆ ಸೇರಬೇಕಿದೆ

ಮನಸ್ಸು ಅದೊಂದು “ಮುಟ್ಟಿದರೆ ಮುನಿ” ಎಂಬ ಪ್ರಭೇದದ ಸಸ್ಯಜೀವಿ ಇದ್ದಂತೆ ಅದಕ್ಕೆ ಒಳ್ಳೆಯ ವಿಚಾರಗಳು ಇದ್ದಾಗ ಒಳ್ಳೆಯ ವಿಚಾರಗಳನ್ನೇ ತುಂಬಬೇಕು ಅಥವಾ ಒಳ್ಳೆಯ ವಿಚಾರವಿರುವ ಮನಸ್ಸುಗಳನ್ನು ಮಾತ್ರ ಹತ್ತಿರ ಬಿಟ್ಟುಕೊಳ್ಳುತ್ತೇ ಹಾಗೂ ಹತ್ತಿರವೂ ಸುಳಿಯುತ್ತೆ ಹಾಗೆಯೇ ಕೆಟ್ಟ ವಿಚಾರಗಳನ್ನು ಹೊತ್ತ ಮನಸ್ಸು ಯಾವತ್ತೂ ಒಳ್ಳೆಯ ವಿಚಾರಗಳನ್ನು ಬಯಸುವುದಿಲ್ಲ ಮತ್ತು ಒಳ್ಳೆಯ ವಿಚಾರಗಳತ್ತ ಅದು ಸುಳಿಯುವುದೂ ಇಲ್ಲ ಹಾಗಾಗಿ ಮನಸ್ಸು ಹೇಗೆ ಇರುತ್ತೋ ಯಾವ ದಾರಿಯಲ್ಲಿ ಸಾಗಿರುತ್ತೋ ಅದೇ ಮಾರ್ಗವನ್ನೇ ಅದು ಬಯಸುತ್ತೆ ಅಂತಹ ಸಮಯದಲ್ಲಿ ಯಾವುದೇ ಮನಸ್ಸಿಗೆ ನಾವು ಒಂದೊಮ್ಮೆ ಜಗತ್ತನ್ನು ಗಮನಿಸಿದಾಗ ಅದೊಂದು ವಿಶಾಲವಾದ ವಿಸ್ಮಯಕರ ಒಂದು ತಾಣ ಏಕೆಂದರೆ ವಿವಿಧ ವೈವಿಧ್ಯತೆಯನ್ನು ಹಾಗೂ ವಿವಿಧ ಮತ್ತು ವಿಭಿನ್ನ ಜೀವರಾಶಿಯನ್ನು ಹೊಂದಿದ ವಿಶೇಷವಾದ ವೈಭವಗಳ ತಾಣವೂ ಹೌದು ಇಂತಹ ವಿವಿಧತೆಯು ಮನಸ್ಸಿಗೂ ಬಹಳ ಹತ್ತಿರವಾಗಿರುತ್ತದೆ ಹೇಗೆಂದರೆ ಪ್ರತಿಯೊಬ್ಬ ಮನುಜನ ಮನಸ್ಸು ಹುಟ್ಟುತ್ತಾ ಬಹಳ ಶುಚಿಯಾಗಿ ಶುಭ್ರವಾಗಿ ಯಾವ ಕಲ್ಮಶವನ್ನು ತುಂಬಿಕೊಳ್ಳದೆ ಘಮಘಮಿಸುವಂತಹ ಸ್ವಾದ ಮತ್ತು ಸೌಂದರ್ಯವನ್ನು ಒಳಗೊಂಡಿರುತ್ತದೆ ಆದರೆ ಮನುಷ್ಯನ ಬೆಳವಣಿಗೆ ಆಗುತ್ತಿದ್ದಂತೆ ಅವನ ವಿಚಾರಗಳು ಬೆಳೆಯುತ್ತಿದ್ದಂತೆ ಸ್ನೇಹ ಸಂಬಂಧಗಳು ಹುಟ್ಟಿಕೊಳ್ಳುತ್ತಿದ್ದಂತೆ ಅವನ ಮನಸ್ಸು ಕೂಡಾ ಬದಲಾಗುತ್ತಾ ಹೋಗುತ್ತದೆ ಅಂದರೆ ನಿಧಾನವಾಗಿ ಸ್ವಾರ್ಥಿಯಾಗುತ್ತಾ ಬದಲಾಗುತ್ತದೆ ನಾನು ನನ್ನದು ನನಗೇ ಸೇರಬೇಕು ಎನ್ನುವಂತಹ ಸ್ವಾರ್ಥಭಾವ ಮೂಡುತ್ತದೆ ಹಾಗೆಯೇ ಯಾರ ಬಗ್ಗೆ ಕಾಳಜಿ ಆಗಲಿ ಕರುಣೆ ಆಗಲಿ ಪ್ರೀತಿ ಭಾವನೆಯೂ ಕಡಿಮೆಯಾಗಿ ಮತ್ತೊಬ್ಬರು ಬೆಳೆಯದಂತೆ ವಿಚಾರಗಳು ಮತ್ತೊಬ್ಬರ ಏಳಿಗೆಯನ್ನು ಸಹಿಸದಂತಹ ಭಾವನೆಗಳು ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದು ಚುಚ್ಚು ಮಾತುಗಳನ್ನು ಆಡುವುದು ಎರೆಡು ಮನಸ್ಸುಗಳ ಮಧ್ಯೆ ಕಲಹ ಸೃಷ್ಟಿಯಾಗುವಂತೆ ಏನೇನೋ ಇಲ್ಲಸಲ್ಲದ ವಿಚಾರಗಳನ್ನು ಬಿತ್ತುವುದು ಮೋಸ ವಂಚನೆ ನಂಬಿಕೆ ದ್ರೋಹ ಹೀಗೆ ಹಿಡಿತವಿಲ್ಲದ ಮನಸ್ಸು ತನ್ನ ಬದಲಾವಣೆಯ ರೀತಿಯೇ ಮತ್ತಷ್ಟು ವಿಭಿನ್ನವಾಗಿ ಬದಲಾಗಿ ಭ್ರಷ್ಟತೆಯೆಡೆಗೆ ಸಾಗುತ್ತದೆ. ಇಂತಹ ವಿವಿಧ ಅನ್ಯತೆಯ ಭಾವದ ಮನಸ್ಸುಗಳನ್ನು ರೂಪಿಸಿಕೊಂಡ ಮನಸ್ಸು ಬಹಳ ವಿಕೃತವಾಗಿಯೂ ರುಪುಗೊಂಡು ಮತ್ತೊಬ್ಬರಿಗೆ ಅನ್ಯಾಯ ಅಸಮಾಧಾನ ಮಾಡುವ ರೀತಿಯಲ್ಲಿ ಸಾಗುತ್ತದೆ ಆಚಾರ ವಿಚಾರ ಬಿಟ್ಟು ಅನಾಚಾರದದೆಡೆಗೆ ಸಾಗಿ ವ್ಯಭಿಚಾರ,ಅತ್ಯಾಚಾರ ಹೀಗೆ ವಿಭಿನ್ನವಾದ ಕೆಟ್ಟ ನಡತೆಯ ದಾರಿಯನ್ನು ಹಿಡಿಯುತ್ತದೆ.ಯಾವುದೋ ಮನಸ್ಸು ಅದು ತನ್ನ ಸಹಜ ಸ್ಥಿತಿಯಲ್ಲಿ ಇರಲಿಲ್ಲವೆಂದರೇ ಅಂದರೇ ಮಾನಸಿಕ ಒತ್ತಡದಿಂದ ಅಥವಾ ಧೈಹಿಕ ಒತ್ತಡದಿಂದ ಕುಗ್ಗಿ ತನ್ನ ಸಹಜ ಸ್ಥಿತಿ ಬದಲಾಗಿ ಏನೇನೋ ಹುಚ್ಚರಂತೆ ಮಾತಾಡೋದು ನಡೆದಾಡೋದು ಹುಚ್ಚರಂತೆ ವಿಚಾರ ಮಾಡೋದು ತನ್ನಷ್ಟಕ್ಕೆ ತಾನೇ ಏನೇನೋ ಮಾತಾನಾಡುತ್ತಾ ನಡೆದಾಡುವುದು ನಗುವುದು ಹೀಗೆ ಇಂತಹ ಅನೇಕ ಲಕ್ಷಣಗಳಿಗೆ ಹಲವಾರು ಚಿಕಿತ್ಸೆಗಳು ಲಭ್ಯವಾಗಿವೆ ಆದರೇ ಒಬ್ಬರ ಮನಸ್ಸನ್ನು ಕದಡಿ ಇನ್ನೊಬ್ಬರ ಮನಸ್ಸಿಗೆ ಧಕ್ಕೆ ಆಗುವಂತಹ ವಿಚಾರಗಳನ್ನು ಮಾಡುವುದು ಮತ್ತೊಬ್ಬರಿಗೆ ಅನ್ಯಾಯ ಮಾಡಲು ಉದ್ದೇಶ ಹೊಂದಿರುವಂತಹ ಹಾಗೆಯೇ ಬೇರೊಬ್ಬರಿಗೆ ಅಥವಾ ನಂಬಿದವರಿಗೆ ಮತ್ತು ನಿಷ್ಠಾವಂತಹ ಮನಸ್ಸುಗಳಿಗೆ ಭಯ ಬೆದರಿಕೆ ಅಸೂಯೆ ತಪ್ಪು ದಾರಿ ತೋರಿಸುವುದು ತಪ್ಪು ನಡತೆ ಕಲಿಸಿಕೊಡುವುದು ಯಾರೋ ಹೇಳಿದ ಮಾತಿಗೆ ಬಲಿಯಾಗಿ ಅದೇ ಸತ್ಯವೆಂದು ಮತ್ತೊಬ್ಬರ ಮಾತಿಗೆ ಬೆಲೆಕೊಟ್ಟು ತನ್ನ ನೈಜ ಮನದ ಸ್ಥಿತಿಯನ್ನು ಹಾಳುಮಾಡಿಕೊಂಡು ಎಲ್ಲರೊಂದಿಗೆ ವ್ಯಕ್ತಿತ್ವವನ್ನೇ ಹಾಳು ಮಾಡಿಕೊಂಡು ಕೊನೆಗೆ ಕೊರಗಿ ಸೊರಗಿ ಬದುಕುವಂತಹ ಮತ್ತು ಏನೂ ಅರಿಯದೇ ಬರೀ ದ್ವೇಷ ಅಸೂಯೆ ಅಹಂಕಾರ ದರ್ಪವನ್ನು ಎದುರಿಗೆ ಬರುವ ಮತ್ತು ಪಕ್ಕದವರ ಬದುಕನ್ನು ಸಹಿಸದೆ ಮನದಲ್ಲೇ ಕೆಡುಕು ಬಯಸುವಂತಹ ಮನಸ್ಸುಗಳನ್ನು ಬದಲಾವಣೆ ಮಾಡಲು ಒಳ್ಳೆಯ ದಾರಿಗೆ ತರಲು ಮೊದಲಿನ ಕಲ್ಮಶವಾದ ಮನಸ್ಸಿನ ಸ್ಥಿತಿಗೆ ತರಲು ಯಾವುದೇ ಚಿಕಿತ್ಸೆಗಳು ಎಲ್ಲೂ ಸಿಗಲು ಸಾಧ್ಯವಿಲ್ಲ ಅದಹೊರತು ಅಂತಹ ಒಳ್ಳೆಯ ಮನಸ್ಸುಗಳನ್ನು ತಿದ್ದಿ ಬುದ್ದಿ ಹೇಳುವಂತಹ ಹಾಗೂ ಅಂತಹ ದುಷ್ಟ ನಡತೆಯ ಮನಸ್ಸನ್ನು ಬದಲಾವಣೆ ಮಾಡಲು ಮತ್ತೊಂದು ಒಳ್ಳೆಯ ಮನಸ್ಸನ್ನು ಹುಡುಕಬೇಕಿದೆ ಮತ್ತು ಅಂತಹ ಒಳ್ಳೆಯ ಮನಸ್ಸಿನ ಅವಶ್ಯಕತೆಯೂ ಬಹಳ ಅವಶ್ಯಕವಾಗಿದೆ.ಆದರೆ ಅದು ಬಹಳ ವಿರಳ ಏಕೆಂದರೆ ನೊಂದ ಮನಸ್ಸನ್ನು ಸಕಾರಾತ್ಮಕ ವಿಚಾರಗಳನ್ನು ತುಂಬಿ ಆ ಮನಸ್ಸನ್ನು ಮೇಲೇತ್ತುವಂತಹ ಮನಸ್ಸು ಬೇಕು ಆದರೇ ನೊಂದ ಮನಸ್ಸಿಗೆ ಮತ್ತಷ್ಟು ಕೆಟ್ಟ ವಿಚಾರಗಳನ್ನು ತುಂಬಿ ನಕಾರಾತ್ಮಕವಾದ ದಾರಿಯಲ್ಲಿ ಸಾಗುವಂತೆ ಮಾಡುವ ಮನಸ್ಸುಗಳು ಬಹಳಷ್ಟಿವೆ ಹಾಗಾಗಿ ಅಂತಹ ಮನಸ್ಸುಗಳನ್ನು ಬಿಟ್ಟು ಅಂತವರ ಸನಿಹ ಮತ್ತು ಸಂಬಂಧ ಬಿಟ್ಟು ಯಾವಾಗಲೂ ಒಳ್ಳೆಯದನ್ನೇ ಬಯಸುವ ಮತ್ತೊಬ್ಬರ ಏಳಿಗೆಯೇ ತಮ್ಮ ಏಳಿಗೆ ಹಾಗೂ ಬದಲಾವಣೆ ಎಂದು ನಂಬಿ ಬದುಕುವ ಬೇರೊಬ್ಬರ ಬದುಕಿಗೆ ಆಸರೆಯಾಗುವ ಸಹಕಾರ ತೋರುವ ಮನಸ್ಸುಗಳನ್ನು ನಾವು ಹಿಂಬಾಲಿಸಬೇಕಿದೆ ಮತ್ತು ಅಂತಹ ಮನಸ್ಸುಗಳನ್ನು ನಾವು ನಮ್ಮ ಬಳಿ ಬಿಟ್ಟುಕೊಳ್ಳಬೇಕಿದೆ ಹೊರತು ಚಾಡಿ ಹೇಳಿ ಮತ್ತೊಬ್ಬರ ಮನಸ್ಸಿಗೆ ಧಕ್ಕೆಯಾಗುವಂತಹ ವಿಚಾರಗಳನ್ನು ತುಂಬುವಂತಹ ಮನಸ್ಸುಗಳನ್ನು ಯಾವತ್ತೂ ನಂಬಬಾರದು ಅಂತಹ ಕೆಟ್ಟ ಮನುಷ್ಯರೊಂದಿಗೆ ಬೆರತಾಗಿನ ದಿನಗಳನ್ನು ಅವಲೋಕಿಸಲು ಸ್ವಲ್ಪ ದಿನ ಅವರನ್ನು ಬಿಟ್ಟು ಬದುಕಿ ಆಗ ತಿಳಿಯುತ್ತದೆ ಮೊದಲಿನ ನಿಮ್ಮ ವ್ಯಕ್ತಿತ್ವಕ್ಕೂ ಮತ್ತು ಅಂತಹ ಕೆಟ್ಟ ಮನುಷ್ಯರನ್ನು ತೊರೆದು ಬದುಕಿದ ದಿನಗಳಲ್ಲಿ ರೂಪಿತಗೊಂಡ ವ್ಯಕ್ತಿತ್ವಕ್ಕೂ ವ್ಯತ್ಯಾಸ ತಿಳಿಯುತ್ತದೆ. ಹಾಗಾಗಿ ಒಳ್ಳೆಯ ಮನಸ್ಸನ್ನು ಹೊಂದಲು ಒಳ್ಳೆಯ ಮಾನವೀಯ ಗುಣಗಳನ್ನು ಪಡೆಯಲು ಒಳ್ಳೆಯ ಮನಸ್ಸಿನ ಮನುಜರೊಂದಿಗೆ ಬೆರೆತು ಅವರ ಗುಣಗಳನ್ನು ಕೂಡ ಅರಿತು ಅಳವಡಿಸಿಕೊಂಡಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಮತ್ತು ಅಂತಹ ವ್ಯಕ್ತಿತ್ವವನ್ನು ಪ್ರತಿಯೊಬ್ಬ ವ್ಯಕ್ತಿಗೆ ನೀಡುವಂತಹ ಮತ್ತು ಸಮಾಜದ ಒಳಿತಿಗಾಗಿ ದುಡಿಯುವಂತಹ ಮತ್ತು ದುಡಿಯಲು ಪ್ರೆರೇಪಿಸಿ ಸಹಕರಿಸಿ ತಾನೂ ಸೇವೆಗಾಗಿ ಕೈ ಜೋಡಿಸಿ ಮುನ್ನೆಡೆಯುವಂತಹ ವ್ಯಕ್ತಿಯ ಅವಶ್ಯಕತೆ ಮುಖ್ಯವಾಗಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿತ್ವ ವಿಕಸನವು ಈ ಜಗತ್ತಿನ ಪ್ರತಿಯೊಬ್ಬ ಮಾನವ ಜೀವಿಗೆ ತುಂಬಾ ಅತ್ಯವಶ್ಯಕವಾಗಿ ಬೇಕಾಗಿದೆ ಮತ್ತು ಯಾವುದೇ ವ್ಯಕ್ತಿಯೊಂದಿಗೆ ಅನವಶ್ಯಕವಾಗಿ
ಬೇರಾವುದೇ ಕಾರಣಕ್ಕೆ ಮನಸ್ತಾಪ ಉಂಟಾದಾಗ ಅದನ್ನು ಸರಿಪಡಿಸಿಕೊಂಡು ತಪ್ಪು ಒಪ್ಪುಗಳಿಗೆ ತಲೆಬಾಗಿ ಒಬ್ಬರನ್ನೊಬ್ಬರು ಅರಿತು ಸರಳ ಭಾವದೊಂದಿಗೆ ಸ್ನೇಹ ಸೌಹಾರ್ಧತೆಯೊಂದಿಗೆ ಬದುಕಬೇಕು ಮತ್ತು ಮುಖ್ಯವಾಗಿ ಇಂತಹ ವಿಚಾರಗಳಲ್ಲಿ ದುರಾದ ಅಥವಾ ಸರಿದು ಹೋದ ಸಂಬಂಧಗಳನ್ನು ಒಟ್ಟುಗೂಡಿಸಿ ಮತ್ತೇ ಸೇರಿಸುವಂತಹ ಮನುಷ್ಯತ್ವ ಪ್ರತಿಯೊಬ್ಬ ಮನವ ಜೀವಿಯಲ್ಲಿ ಕಾಣುವುದು ಕೂಡ ಅವಶ್ಯಕವಾಗಿದೆ.

  • ಹನುಮಂತ ದಾಸರ ಹೊಗರನಾಳ
    ಯುವ ಬರಹಗಾರರು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ