ವಿಜಯನಗರ:ಸಹಾಯಕ ಯೋಜನಾ ವ್ಯವಸ್ಥಾಪಕರಾಗಿದ್ದ (APM) ರವಿಕುಮಾರ್ ರವರು ನೂತನ ವಿಜಯನಗರ ಜಿಲ್ಲೆ ಆದನಂತರ ಯೋಜನಾ ನಿರ್ದೇಶಕರಾಗುತ್ತಾರೆ.
ಇವರು ಮಂಡ್ಯ ಮೂಲದವರಾಗಿದ್ದು, ಸ್ಥಳಿಯ ಸಹೋದ್ಯೋಗಿಗಳ ಕಂಡರೆ ಕೀಳು ಮಟ್ಟದ ಭಾವನೆ,ಅವರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಡುವುದು,ಮಧ್ಯೆ ರಾತ್ರಿಯ ತನಕ ಸಿಬ್ಬಂದಿಯನ್ನು ಕೆಲಸ ಮಾಡಿಸುವುದು,ಏಕವಚನದಲ್ಲಿ ಬೈಯುವುದು ಇವರನ್ನು ಪ್ರಶ್ನೆ ಮಾಡಿದರೆ ಆತನಿಗೆ ಪ್ರಭಾವಿ ರಾಜಕಾರಣಿಗಳ ಉನ್ನತ ಅಧಿಕಾರಿಗಳ ಬೆಂಬಲವಿದೆ ಎಂದು ಹೇಳುತ್ತಿರುವುದು ನೀವು ಏನು ಮಾಡಕ್ಕೆ ಆಗಲ್ಲ ಅಂತ ಎದುರಿಸುವುದು ಎಂದು ಆಗಿನ ಲೆಕ್ಕ ಪರಿಶೋಧಕ ಜನಾರ್ಧನ್ ಇವರು ಸಹಾಯಕ ಯೋಜನ ವ್ಯವಸ್ಥಾಪಕರಾಗಿದ್ದ ರವಿಕುಮಾರ್ ಇವರ ಮೇಲೆ ಆರೋಪ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಮುಂದುವರೆದಾಗ ಆಗಿನ ಜಿಲ್ಲಾಧಿಕಾರಿಯಾಗಿದ್ದ ಪವನ್ ಕುಮಾರ್ ಮಲಿಪಾಟಿ ಅವರಿಗೆ ಸಿಬ್ಬಂದಿ ವರ್ಗದವರು ಲಿಖಿತ ದೂರು ನೀಡಿರುತ್ತಾರೆ.. ನಂತರ ಜಿಲ್ಲಾಧಿಕಾರಿಗಳು ರವಿಕುಮಾರ್ ಅವರಿಗೆ ಒಳ್ಳೆಯ ರೀತಿಯಲ್ಲಿ ಬುದ್ದಿ ಹೇಳಿ ಕಳುಹಿಸಿರುತ್ತಾರೆ.ಆದರೂ ರವಿಕುಮಾರ್ ದರ್ಪ ನಿಲ್ಲದಿದ್ದಾಗ ಹಗರಿಬೊಮ್ಮನಹಳ್ಳಿ ಇಂಜಿನೀಯರ್ ನಡಾಪ್,ಹರಪ್ಪನ ಹಳ್ಳಿ ಸುಮಂತ್,ಹೋಸಪೇಟೆ ಗಣಿಸಾಬ್ ಮತ್ತು ಹೋಸಪೇಟೆ ಗ್ರಾಮೀಣ ಇಂಜಿನಿಯರ್ ಸುಮಂತ್ ಲೆಕ್ಕಪರಿಶೋಧಕ ಜನಾರ್ಧನ್ ಇವರನ್ನು ಏಕಾಏಕಿ ಕೆಲಸದಿಂದ ವಜಗೂಡಿಸಿರುತ್ತಾರೆ ಆದರೂ ಇದುವರೆಗೂ ಯಾವುದೇ ರೀತಿಯಾದಂತ ರಿಲವಿಂಗ್ ಲೆಟರ್ ನೀಡಿರುವುದಿಲ್ಲ ಎಂದು ಜನಾರ್ಧನ್ ಆರೋಪವಾಗಿದೆ.ಇವರೆಲ್ಲರೂ ಕಲ್ಯಾಣ ಕರ್ನಾಟಕಕ್ಕೆ ಸೇರಿದ ಅಭ್ಯರ್ಥಿಗಳಾಗಿರುತ್ತಾರೆ.ಇಷ್ಟಾದರೂ ಕೂಡಾ ಇಂಜಿನಿಯರ್ಸ್ ಗಳಿಗೆ ತನ್ನ ಮೇಲೆ ಯಾರಿಗೂ ದೂರು ನೀಡಬಾರದು ನೀಡಿದರೆ ಪರಿಣಾಮ ನೆಟ್ಟಗಿರದು ಅಂತ ಹೇಳಿ ಇವರ ಜಾಗಕ್ಕೆ ಅಕ್ರಮವಾಗಿ ತನ್ನ ಬಾಮೈದ ಭಾಸ್ಕರ್ ಗೆಳೆಯರಾದ ಮಧುಸೂದನ್, ಶಿವಕುಮಾರ್,ಮಧು,ಅರ್ಜುನ್ ಅವರನ್ನು ನೇಮಿಸಿರುತ್ತಾರೆ.ಇವರು ಬಂದ ಮೇಲಂತೂ. ವಿಜಯನಗರ ನಿರ್ಮಿತಿ ಕೇಂದ್ರ ರವಿಕುಮಾರ್ ಅಕ್ರಮ ಚಟುವಟಿಕೆಗಳ ಅಡ್ಡವಾಗಿ ಒದಾಗಿರುತ್ತದೆ.ಈ ವಿಷಯವಾಗಿ ಈಗಿನ ಜಿಲ್ಲಾಧಿಕಾರಿಗಳಿಗೆ ವಿಜಯನಗರ ಜಿಲ್ಲೆಯ ಹಲವು ಸಂಘಟನೆಗಳು ಮನವಿ ಮಾಡಿದ್ರು,ಗುತ್ತಿಗೆ ನೌಕರ ರವಿಕುಮಾರ್ ಅವಧಿ ಮುಗಿದಿದ್ದರೂ ಜಿಲ್ಲಾಧಿಕಾರಿಗಳು ಈವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.