ರಾಯಚೂರು ಜಿಲ್ಲೆ ಎಂದಾಕ್ಷಣ ತಟ್ಟನೆ ನೆನಪಾಗುವುದು ರಣಬಿಸಿಲು.
ರಾಜ್ಯದಲ್ಲಿ ಅತ್ಯಧಿಕ ತಾಪಮಾನ ದಾಖಲಾಗುವ ಈ ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ಜಾನುವಾರುಗಳು ಮತ್ತು ಸಣ್ಣ ಮಕ್ಕಳು ಬಿಸಿಲಿಗೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.ರಣ ಬಿಸಿಲು ಎಂದಾಕ್ಷಣ ನೆನಪಾಗೋದು ಯಾದಗಿರಿ,ಕಲಬುರ್ಗಿ,ಕೊಪ್ಪಳ ಮತ್ತು ರಾಯಚೂರು ಜಿಲ್ಲೆ ಸೇರಿದಂತೆ ಹಲವಾರು ತಾಲೂಕುಗಳು ರಣ ಬಿಸಿಲಿನಲ್ಲಿ ಜನರು ಕುದಿಯುತ್ತಿದ್ದು ಬೆಳಗ್ಗೆ ಏಳು,ಎಂಟು ಗಂಟೆಯಿಂದಲೇ ಸೂರ್ಯ ನೆತ್ತಿ ಸುಡುತ್ತಿದ್ದು 12 ಮತ್ತು1 ಗಂಟೆಗೆ ಬಿಸಿಲು ಮತ್ತಷ್ಟು ಹೆಚ್ಚಾಗುತ್ತಿದ್ದು ಬಿಸಿಲಿನಿಂದ ಜನಜೀವನ ಮತ್ತು ಜಾನುವಾರುಗಳು ಮತ್ತು ಪುಟ್ಟ ಮಕ್ಕಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತಿದ್ದರೆ,ಈ ತಾಪಮಾನದಿಂದ ತಂಪಾಗಲು ಸಾರ್ವಜನಿಕರು ಹಲವು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ ಹೀಗಾಗಿ ಮಾರುಕಟ್ಟೆಯಲ್ಲಿ ಮಜ್ಜಿಗೆ,ಐಸ್ ಕ್ರೀಮ್, ಕಲ್ಲಂಗಡಿ ಹಣ್ಣು ಮತ್ತು ಹಣ್ಣಿನ ಜ್ಯೂಸ್ ಎಳೆನೀರು ಇನ್ನು ಮುಂತಾದ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದ್ದು ಆದರೆ ಪುಟ್ಟ ಮಕ್ಕಳು ಈ ಬಿಸಿಲಿನ ತಾಪ ಮಾನದಿಂದ ತಪ್ಪಿಸಿಕೊಳ್ಳಲು ಕೆರೆ ಮತ್ತು ಬಾವಿ ಮೊರೆ ಹೋಗಿದ್ದಾರೆ ಎಂದು ಹೇಳಬಹುದು ಆದರೆ ಒಂದು ವಿಪರ್ಯಾಸ ಅಂದರೆ ಇತ್ತೀಚಿನ ದಿನಗಳಲ್ಲಿ ಕೆರೆ ಮತ್ತು ಬಾವಿಗಳು ಊಳು ತೆಗಿಯಯಲಾರದೆ ಸ್ವಚ್ಛತೆ ಕಾಪಾಡದೆ,ನೀರಿನ ಮಟ್ಟ ಕಾಪಾಡದೆ ಮುಚ್ಚಿ ಹೋಗುತ್ತಿವೆ ಅಂತಾನೆ ಹೇಳಬಹುದು,ಮುಂದಿನ ದಿನಗಳಲ್ಲಿ ಕೆರೆ ಬಾವಿಗಳನ್ನು ಸ್ವಚ್ಛವಾಗಿ ಇಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ವರದಿ:ಪುನೀತಕುಮಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.