ಲಿಂಗಸೂಗೂರು ನಗರದ ಅಂಚೆ ಕಛೇರಿ ಹತ್ತಿರದ ದಕ್ಷ ಕೋಚಿಂಗ್ ಸೆಂಟರ್‌ನಲ್ಲಿ ಇಂದು ನವ ಚೈತನ್ಯ ಫೌಂಡೇಶನ್ ವತಿಯಿಂದ ಬೇಸಿಗೆ ರಜಾ ಅವಧಿಯ 10ನೇ ತರಗತಿ ಕೋಚಿಂಗ್ ಕ್ಲಾಸಸ್ ಮಕ್ಕಳ ಬೀಳ್ಕೊಡುಗೆ ಸಮಾರಂಭ ಅದ್ದೂರಿಯಾಗಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀ ನಾಗರಾಜ ಮಾಂಡ್ರೆ ಅವರು ಮಾತನಾಡಿ ಮಕ್ಕಳಿಗೆ ರಜಾ ಅವಧಿಯಲ್ಲಿ 10ನೇ ತರಗತಿ ಮಕ್ಕಳಿಗೆ ಸೂಕ್ತ ರೀತಿಯ ತರಬೇತಿಗೊಳ್ಳಲು ಇಂತಹ ಕೋಚಿಂಗ್ ತರಗತಿಗಳ ತರಬೇತಿಯಾದಾಗ ಬೋಧನೆಯಿಂದ ತರಗತಿ ವಿಷಯಾಂಶಯದ ಪರಿಪಕ್ವತೆ ಮಕ್ಕಳಲ್ಲಿ ಮೂಡಿ ಜ್ಞಾನಾಭಿವೃದ್ಧಿ ಆಗುವುದರೊಂದಿಗೆ ಪಠ್ಯೇತರ ಚಟುವಟಿಕೆಯ ಆಹ್ಲಾದಕರ ವಾತಾವರಣದಿಂದ ಮಕ್ಕಳಲ್ಲಿ ಕಲಾತ್ಮಕ ಶಿಕ್ಷಣ ಒಡಮೂಡಲು ಸಾಧ್ಯ ಎಂದು ತಿಳಿಸಿದರು.
ನಂತರ ಕಿರಣ್ ಶಿಕ್ಷಕರು ಗುರುದೇವ್ ಕೋಚಿಂಗ್ ಕ್ಲಾಸೆಸ್ ಧಾರವಾಡ ಅವರು ಮಾತನಾಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮತ್ತು ಬೇಸಿಗೆ ರಜಾ ಸದ್ವಿನಿಯೋಗ ಮಾಡಿಕೊಂಡು ಮಕ್ಕಳು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಪಡೆಯಲು ಸಲಹೆ ನೀಡಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷ ಕೋಚಿಂಗ್ ಕ್ಲಾಸೆಸ್ ನ ಮುಖ್ಯಸ್ಥರಾದ ಶ್ರೀ ಸಂಗನಬಸವರಾಜ ಅವರು ಮಾತನಾಡಿ ಮಕ್ಕಳಾದ ನೀವೆಲ್ಲ ಸಾಧನೆ ಮಾಡಬೇಕಾದರೆ ಉತ್ತಮ ಪರಿಶ್ರಮ ಪಟ್ಟಾಗ ಮಾತ್ರ ಎಂತಹ ಎತ್ತರದ ಸಾಧನೆಯನ್ನಾದರೂ ಮಾಡಬಹುದು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶ್ರೀ ನಿರುಪಾದಿ,ಆದನಗೌಡ, ವಿದ್ಯಾರ್ಥಿಗಳಾದ ಸುಶ್ಮಿತಾ ಮತ್ತು ಐಶ್ವರ್ಯ, ಪಲ್ಲವಿ,ವಿನಯ,ಬಸವರಾಜ,ಪ್ರೀತಿ,ಮಧುಶ್ರೀ ಹಾಗೂ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು,ಪಾಲಕರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿ ಯಶಸ್ವಿಗೊಳಿಸಿದರು.