ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಮೇ 28)ರಂದು ನೂತನ ಸಂಸತ್ ಭವನವನ್ನು ಉದ್ಘಾಟಿಸಿದರು. ನವಭಾರತದ ನವಸಂಕಲ್ಪ ಎಂಬಂತೆ ಹೊಸ ಸಂಸದ ಭವನದಲ್ಲಿ ಅನೇಕ ಐತಿಹಾಸಿಕ ಪ್ರತಿಮೆಗಳ ಜೊತೆಗೆ ಮಸ್ಕಿ ಕೂಡಾ ರಾರಾಜಿಸುತ್ತಿದೆ ಇತಿಹಾಸದಲ್ಲಿ ಗೊಂದಲದ ಗೂಡಾಗಿದ್ದ ಚಕ್ರವರ್ತಿ ಅಶೋಕನ ಇತಿಹಾಸಕ್ಕೆ ತೆರೆ ಎಳೆದು ಗೊಂದಲ ನಿವಾರಿಸಿದ ಕೀರ್ತಿ ಈ ಮಾಸಂಗಿಪುರಕ್ಕಿದೆ. ಚಕ್ರವರ್ತಿ ಅಶೋಕ ಮತ್ತು ದೇವನಾಂಪ್ರಿಯ ಬೇರೆ ಬೇರೆ ಎಂಬ ಅಭಿಪ್ರಾಯವಿತ್ತು ಆದರೆ ೧೯೧೫ರಲ್ಲಿ ಶ್ರೀ ಸಿ.ಬೀಡನ್ ರವರು ಮಸ್ಕಿ ಶಿಲಾಶಾಸನ ಪತ್ತೆ ಹಚ್ಚಿದ ನಂತರ ಇಡೀ ಜಗತ್ತಿಗೆ ತಿಳಿದದ್ದು ಚಕ್ರವರ್ತಿ ಅಶೋಕನೇ ದೇವನಾಂಪ್ರಿಯನೆಂದು ಮಸ್ಕಿ ಶಿಲಾಶಾಸನ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವ ಪಡೆದಿದೆ ಇಂತಹ ಐತಿಹಾಸಿಕ ನಗರ ಧಾರ್ಮಿಕವಾಗಿಯೂ ಎರಡನೇ ಶ್ರೀಶೈಲವೆಂದು ಪ್ರಸಿದ್ದಿಪಡೆದಿದೆ ಹಾಗೂ ದಸರಾದಲ್ಲಿ ಮಹಿಳೆಯರೆ ಶ್ರೀ ಭ್ರಮರಾಂಭದೇವಿಯ ರಥವನ್ನು ಎಳೆಯುವುದರ ಮುಖಾಂತರ ಹೊಸ ಇತಿಹಾಸವನ್ನು ಸೃಷ್ಟಿಸಿದೆ ಅಲ್ಲದೆ ಬೆಟ್ಟದ ಶ್ರೀ ಮಲ್ಲಿಕಾರ್ಜುನ ದೇವಾಲಯದ ಹೊರಗೋಡೆಯ ಮೇಲೆ ಕೆತ್ತಲ್ಪಟ್ಟ ಗಂಡಭೇರುಂಡ ಶಿಲೆಯ ಚಿತ್ರವನ್ನೆ ಇಂದಿನ ಕರ್ನಾಟಕ ರಾಜ್ಯ ಅಧಿಕೃತ ಲಾಂಛನವಾಗಿ ಬಳಸಿಕೊಳ್ಳುತ್ತಿರುವುದು ಇನ್ನೊಂದು ವಿಶೆಷ. ಹೀಗೆ ಅನೇಕ ವಿಶೇಷತೆಗಳಿಂದ ಕೂಡಿರುವ ಅಂದಿನ ಮಾಸಂಗಿಪುರವೇ ಇಂದಿನ ಮಸ್ಕಿ ಐತಿಹಾಸಿಕ ನಗರವನ ರಾಜ್ಯ ಸರ್ಕಾರ ತಾಲೂಕೆಂದು ಘೋಷಿಸಿ ಮಸ್ಕಿಯ ಹಿರಿಮೆ ಹೆಚ್ಚಿಸಿದೆ ಹೀಗೆ ಹಲವು ಹಿರಿಮೆ ಗರಿಮೆಗಳನ್ನೊಂದಿರುವ ಹೆಮ್ಮೆಯ ಮಸ್ಕಿಗೆ ಭಾರತ ಸರ್ಕಾರ ಹೊಸ ಸಂಸದಭವನದಲ್ಲಿ ಮಸ್ಕಿಯ ಹೆಸರು ಪುಟದಲ್ಲಿ ಅಚ್ಚೊತ್ತಿ ಗೌರವಸಲ್ಲಿಸಿರುವುದು ವಿಶೇಷವಾಗಿದೆ. ಹೊಸ ಸಂಸದ ಭವನದಲ್ಲಿ ವಾದ-ಪ್ರತಿವಾದ ಮುಂದಿನ ದಿನಮಾನಗಳಲ್ಲಿ ನಡೆದರು. ಅದು ಪ್ರಜಾಪ್ರಭುತ್ವದಲ್ಲಿ ಸಹಜವೇ ಅವೆಲ್ಲವೂ ಅಭಿವೃದ್ಧಿಗೆ ಪೂರಕವಾಗಿರಲಿ,ದೇಶದ ಒಳಿಗೆ ಮಾರಕ ಆಗೋದು ಬೇಡ ಅನ್ನೋದಷ್ಟೇ ಎಲ್ಲರ ಆಶಯ.
ವರದಿ:ವೆಂಕಟೇಶ.H.ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.