ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯತಿಯಲ್ಲಿ ಶ್ರೀ ಸದ್ಗುರು ಜ್ಞಾನದೇವ ಇವರ ಕೃಪ ಆಶೀರ್ವಾದದಿಂದ,ಶ್ರೀ ಅಮರಯ್ಯ ಸ್ವಾಮಿ ವಟಗಲ್ ಇವರ ಭವ್ಯ ರಂಗ ಸಜ್ಜಕೆಯಲ್ಲಿ ಕನಕಾಂಗಿ ಕಲ್ಯಾಣ
ಅರ್ಥಾತ್:ಅಭಿಮನ್ಯು ವಿಜಯ ಎಂಬ ನಾಟಕ ಪ್ರದರ್ಶಿಸಲಾಯಿತು ಈ ನಾಟಕದಲ್ಲಿ ಶ್ರೀ ಕಣಕಲ ಅಜ್ಜನವರು, ಶ್ರೀ ವರದಾನಿ ಶಾಂಭವಿ ದೇವಿ ಶಕ್ತಿಪೀಠ ಸರ್ಜಾಪುರ ಮತ್ತು ಶ್ರೀ ಶ್ರೀ ಮಾತಾ ನಂದೀಶ್ವರ ಅಮ್ಮನವರು, ಮಾತಾ ಮಾಣಿಕೇಶ್ವರಿ ಮಠ ಲಿಂಗಸೂರು ಇವರು ಜ್ಯೋತಿ ಬೆಳಗಿಸುವ ಮೂಲಕ ನಾಟಕಕ್ಕೆ ಶುಭ ಕೋರಿ ಆಶೀರ್ವದಿಸಿದರು
ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಬಯಲುನಾಟಕ ಬಗ್ಗೆ ಜನರಿಗೆ ಆಸಕ್ತಿ ಕಡಿಮೆ ಆಗುತ್ತಿದ್ದು ಆದರೆ ಹಳ್ಳಿ ಗಳಲ್ಲಿ ಇನ್ನೂ ಜೀವಂತ ಇದೆ ಎಂದರೆ ತಪ್ಪಾಗಲಾರದು, ಯಾವ ನಾಟಕ ಕೂಡ ಕೊನೆಗೆ ಒಳ್ಳೆ ಸಂದೇಶವನ್ನೇ ಕೊಡುತ್ತವೆ ಇಂತಹ ನಾಟಕ ನೋಡುವುದರಿಂದ ಜನರಲ್ಲಿ ಸತ್ಯದಿಂದ ಇರ್ಬೇಕು ಮತ್ತೆ ಏನೇ ಮೋಸ,ವಂಚನೆ, ಸುಳ್ಳು ಹೇಳಿದರು ಕೊನೆಗೆ ಸತ್ಯಕ್ಕೆ ಜಯವೆಂಬುದು ಎಲ್ಲ ನಾಟಕಗಳ ಅರ್ಥವು ಕೂಡ ಒಂದೇ ಎಂದು ತಿಳಿಯಬಹುದು ಪ್ರಮುಖ ವಿಷಯವೆಂದರೆ ಸ್ತ್ರೀಯರಿಗಿಂತ ನಾವೇನು ಕಡಿಮೆ ಇಲ್ಲ, ಸ್ತ್ರೀ ವೇಷ ಧರಿಸಿ ಸ್ತ್ರೀಯರೇ ನಾಚುವಂತೆ ಹಿಂದಿನ ದಿನಗಳಲ್ಲಿ ನಾಟಕ ಪ್ರದರ್ಶನ ಮಾಡಿದ್ದು ಕೂಡ ನಾವು ನೋಡಬಹುದು.ಅದೇ ರೀತಿ ಈ ನಾಟಕದಲ್ಲಿ ಕೂಡ ಗಂಡಸರು ಹೆಣ್ಣಿನ ವಸ್ತ್ರವನ್ನು ಧರಸಿ ಮತ್ತು ಮೇಕಪ್ ಮಾಡಿಕೊಂಡು ಸ್ತ್ರೀಯರೇ ನಾಚುವಂತೆ ನಾಟಕದಲ್ಲಿ ಪಾತ್ರ ಮಾಡಿದ್ದಾರೆ ಎಂದು ಕಂಡುಬದಿದೆ ಈ ನಾಟಕದ ಮುಖ್ಯ ಪಾತ್ರ ಅಭಿಮನ್ಯು ಕೂಡ ಅರ್ಜುನ ಮತ್ತು ಸುಭದ್ರೆಯರ ಮಗ ಶ್ರೀ ಕೃಷ್ಣನ ಸೋದರಳಿಯ ವಿರಾಟರಾಜನ ಮಗಳಾದ ಉತ್ತರೇ ಯನ್ನು ಮದುವೆಯಾದ ಗರ್ಭದಲ್ಲಿರುವಾಗಲೇ ಶ್ರೀ ಕೃಷ್ಣ ತನ್ನ ತಂಗಿ ಸುಭದ್ರಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇಧನೆಯನ್ನು ಕತೆಯಾಗಿ ಹೇಳುವಾಗ ಕೇಳಿ ತಿಳಿದಿದ್ದ ಹೀಗೆ ಅಭಿಮನ್ಯು ಬಗ್ಗೆ ನಾವು ಮಹಾಭಾರತದಲ್ಲಿ ಓದಿ ತಿಳಿಯಬಹುದು ಮತ್ತು ನಾಟಕ ಇನ್ನೊಂದು ಪ್ರದರ್ಶನವಿದ್ದು ಎಲ್ಲರೂ ಬಂದು ನಾಟಕ ನೋಡಿ ಮತ್ತು ನಾಟಕ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಸರ್ಜಾಪುರ ಗ್ರಾಮದವರು ತಿಳಿಸಿದ್ದಾರೆ. ನಾಟಕದಲ್ಲಿ ಎಲ್ಲಾ ಪಾತ್ರದಾರಿಗಳು ಕೂಡ ಆಯಾ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ತಿಳಿದು ಬಂದಿದ್ದು
ಈ ನಾಟಕ ಎರಡು ದಿನ ಪ್ರದರ್ಶನ ವಿದ್ದು ದಿನಾಂಕ 28-5-2023 ರವಿವಾರದಂದು ಒಂದು ಪ್ರದರ್ಶನ ಮುಗಿದಿದ್ದು ಇನ್ನೊಂದು ಪ್ರದರ್ಶನ 31.05.2023 ಬುಧವಾರದಂದು ರಾತ್ರಿ 9:00ಗೆ ಇರುತ್ತದೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಮಲ್ಲಿಕಾರ್ಜುನ ಅಮ್ಮಪುರ ಮತ್ತು ಶ್ರೀ ಗುಂಡಪ್ಪ ನಾಯಕ್ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶ್ರೀ ವೆಂಕೋಬ ಅನ್ವರಿ ಮಾಜಿ ತಾಲೂಕ ಪಂಚಾಯತ್ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಊರಿನ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ವರದಿ:ಪುನೀತಕುಮಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.