ರಾಯಚೂರು:ಎನ್.ಎಸ್.ಬೋಸರಾಜು ರವರನ್ನು
ಲಿಂಗಸುಗೂರು ಶಾಸಕ ಮಾನಪ್ಪ.ಡಿ.
ವಜ್ಜಲ್ ರವರು ಬೆಂಗಳೂರಿನಲ್ಲಿ ಭೇಟಿಯಾಗಿ ಹೂ
ಗುಚ್ಛ ನೀಡುವ ಮೂಲಕ
ಅಭಿನಂದಿಸಿ ಶುಭ ಕೋರಿದರು.
ನೂತನ ಸಚಿವರಿಗೆ ಶಾಸಕ
ಮಾನಪ್ಪ ವಜ್ಜಲ್ ಅಭಿನಂದನೆ ಸಲ್ಲಿಸಿ
ರಾಯಚೂರ ಜಿಲ್ಲೆಗೆ ಹೆಚ್ಚಿನ ಮಹತ್ವ ಕೊಟ್ಟು ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಿ ತಕ್ಷಣ ಸ್ಪಂದನೆ ನೀಡಬೇಕಾದದ್ದು ನಮ್ಮ ಕರ್ತವ್ಯ ಎಂದು ಹೇಳಿದರು ಮತ್ತು ಹೊಸ ಹೊಸ ಯೋಜನೆ ಗಳನ್ನು ತಂದು ಹಾಗೂ ಲಿಂಗಸಗೂರು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು
ಲಿಂಗಸುಗೂರು ಶಾಸಕ ಮಾನಪ್ಪ.ಡಿ.
ವಜ್ಜಲ್ ಮನವಿ ಮಾಡಿಕೊಂಡರು. ವರದಿ:ಪುನೀತಕುಮಾರ
