ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಹಾರಾಜಪೇಟೆ ಗ್ರಾಮದಲ್ಲಿ ಸಿಡಿಲು ಬಡಿದು ನಾಗರಾಜ ಮುತ್ನಾಳ ಎಂಬ ಕುರಿಗಾಹಿ ಯುವಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಿನ್ನೆ ಶಾಸಕರಾದ ಮಾನೆ ಶ್ರೀನಿವಾಸ ಅವರು ಮೃತ ಯುವಕನ ಕುಟುಂಬಕ್ಕೆ ಸರ್ಕಾರದ ₹ 5 ಲಕ್ಷ ಪರಿಹಾರ ವಿತರಿಸಿದರು.
ಮೃತ ಯುವಕನ ತಂದೆ ಲಕ್ಕಪ್ಪ ಅವರಿಗೆ ಪರಿಹಾರ ವಿತರಿಸಿ,ಘಟನೆಗೆ ವಿಷಾದ ವ್ಯಕ್ತಪಡಿಸಿ ಸಾಂತ್ವನ ಹೇಳಿದರು. ಜೊತೆಗಿರುವುದಾಗಿ ಧೈರ್ಯ ತುಂಬಿದರು.
ವರದಿ-ರವಿ ಓಲೆಕಾರ್
