ಕಲಬುರ್ಗಿ:ಜೇವರ್ಗಿ ತಾಲೂಕಿನ ಯಾಳವಾರ ಕ್ರಾಸ್ ದಿಂದ-ಇಜೇರಿವರಗೆ ಹೋಗುವ ರಸ್ತೆ ತುಂಬಾ ಕಳಪೆ ಮಟ್ಟದ್ದಾಗಿದೆ ಹಾಗೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ನೋವು ಹಂಚಿಕೊಂಡರು ಜೇವರ್ಗಿಯಿಂದ- ಯಡ್ರಾಮಿಗೆ ತೆರಳುವ ಗ್ರಾಮೀಣ ಮುಖ್ಯ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ,
ಕಳೆದ ಎರಡು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ಗ್ರಾಮದ ರಸ್ತೆ ದುರಸ್ತಿ ಮಾಡಲಾಗಿತ್ತು. ಆದರೆ ಈ ರಸ್ತೆ ಸಂಪೂರ್ಣವಾಗಿ ಕಳಪೆ ಮಟ್ಟದ ಕಾಮಗಾರಿಯಾಗಿದ್ದು ಸಂಪೂರ್ಣ ಹಾಳಾಗಿದ್ದು ಈ ಭಾಗದ ಗ್ರಾಮಸ್ಥರು ಶಾಸಕ ಅಜೇಯ್ ಸಿಂಗ್ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
2021/22 ನೇ ಸಾಲಿನ ಈ ರಸ್ತೆಯ ಎರಡು ಬದಿಯಲ್ಲಿ ಗಿಡ,ಜಾಲಿಮರಗಳನ್ನು ಕಡಿಯಲು ಟೆಂಡರ್ ಕರೆಯಲಾಗಿತ್ತು ಮತ್ತೆ ರಸ್ತೆ ದುರಸ್ತಿಗೊಳಿಸುವ ಸಲುವಾಗಿ ಈ ಭಾಗದ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕ ಅಜಯ್ ಸಿಂಗ್ ಅವರಿಗೆ ಒತ್ತಾಯಿಸಿದ್ದಾರೆ.
ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ,ಮದರಿ, ಯನಗುಂಟಾ,ನರಿಬೋಳ,ಮಲ್ಲಾ (ಕೆ.), ಬಿರಾಳ (ಬಿ),ಬಿರಾಳ(ಕೆ),ಹೋತಿನಮಡಿ, ಹೊನ್ನಾಳ,ರಾಂಪೂರ,ಕಾಸರಭೋಸಗಾ, ಮುತ್ತಿಕೊಡವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಎಸ್.ಎಚ್.ಡಿ.ಪಿ 2008 ರಲ್ಲಿ ಕಾಮಗಾರಿ ಸಂಪೂರ್ಣ ಮಾಡಲಾಗಿತ್ತು ಆದರೆ ಈ ರಸ್ತೆಗಳು ಸುಧಾರಣೆಗೊಂಡಿಲ್ಲ ಎಂದು ಬಿರಾಳ.ಕೆ. ಗ್ರಾಮದ ಪರಮೇಶ್ವರ್ ಬಿರಾಳ ಆರೋಪ ಮಾಡಿದರು.
ವರದಿ-ರಾಜಶೇಖರ ಮಾಲಿ ಪಾಟೀಲ್