ವಿಧಾನ ಸಭೆ ಚುನಾವಣೆ ಮುಗಿದು ಒಂದು ತಿಂಗಳು ಹತ್ತಿರ ಬಂತು ಇತ್ತ ಕಡೆ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವಲ್ಲಿ ಹರಸಾಹಸ ಪಟ್ಟು ಸರ್ಕಾರ ರಚನೆ ಮಾಡಿದೆ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವುಕುಮಾರ ನಡುವೆ ಜಿದ್ದಾ ಜಿದ್ದಿ ನಡೆದಿತ್ತು ಇದರಿಂದ ದೆಹಲಿ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ದೆಹಲಿ ಕಾಂಗ್ರೆಸ್ ನಾಯಕರಾದ ಸುರ್ಜೆವಾಲ ಮತ್ತು ಕೆ ಸಿ ವೇಣುಗೋಪಾಲ ಅವರಿಗೂ ಕೂಡ ತಲೆನೋವನ್ನೇ ತಂದಿತ್ತು ಆದರೂ ಎಲ್ಲರ ಜೊತೆ ಚರ್ಚೆಸಿ ಸಭೆ ನಡೆಸಿ ಇಬ್ಬರಿಗೂ ಸಂಧಾನ ಮಾಡುವಲ್ಲಿ ಯಶಸ್ವಿ ಆದರೂ ಇವಾಗ ಸರ್ಕಾರ ರಚನೆ ಯಾಗಿ ಖಾತೆಗಳನ್ನು ಕೂಡ ಕೊಟ್ಟಿದ್ದು ಆಗಿದೆ ಆದರೆ ಇನ್ನೂ ವಿರೋಧ ಪಕ್ಷದಲ್ಲಿ ಇನ್ನೂ ವಿರೋಧ ಪಕ್ಷದ ನಾಯಕ ಮತ್ತು ಅಧ್ಯಕ್ಷರ ಸ್ಥಾನ ಗುರುತಿಸುವಲ್ಲಿ ಕೇಂದ್ರ ಬಿಜೆಪಿ ಸರಕಾರ ಯಾಕೆ ಹಿಂದೇಟು ಹಾಕ್ತ ಇದೆ ಅಂತ ಇನ್ನೂ ತಿಳಿಯದ ಸಂಗತಿ ಆಗಿದೆ ಆದರೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಕೇಳಿ ಬರ್ತಾ ಇದೆ ಅಂತನೇ ಹೇಳಬಹುದು
ಆದರೆ ಬಹುತೇಕ ಜನರು ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಮಾಡಬೇಕು ಅಂತ ಕೂಗು ಹೆಚ್ಚಾಗಿದ್ದು ಆದರೆ ವಿಪಕ್ಷ ನಾಯಕನ ಆಯ್ಕೆಗೆ ಬಹುತೇಕ ಲಿಂಗಾಯತರಿಗೆ ಮಣೆ ಹಾಕುತ್ತಾ ಬಿಜೆಪಿ? ಕೇಂದ್ರ ಸರಕಾರ ಇನ್ನೂ ಕಾದು ನೋಡಬೇಕಿದೆ ಸದನದಲ್ಲಿ ವಿರೋಧ ಪಕ್ಷದ ನಾಯಕನಿಗೆ ಸಿಎಂ ಸಿದ್ದರಾಮಯ್ಯ ಸರಕಾರಕ್ಕೆ ತಿರುಗೇಟು ನೀಡಲು ಮತ್ತೆ ಸರಕಾರವನ್ನು ಕಟ್ಟಿಹಾಕವಂತ ನಾಯಕನನ್ನು ಬಿಜೆಪಿ ಹುಡುಕುತ್ತಾ ಅಥವಾ ಹಿಂದೂ ಫೈರ್ ಬ್ರಾಂಡ್ ಎಂದೇ ಹೆಸರುವಾಸಿಯಾಗಿರುವ ಶ್ರೀ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ವಿಪಕ್ಷ ನಾಯಕ ಮಾಡುತ್ತಾ? ಎನ್ನುವ ಕುತೂಹಲ ಮೂಡಿದೆ ಮತ್ತು ಬಿಜೆಪಿ ಅಧ್ಯಕ್ಷರ ಸ್ಥಾನಕ್ಕೂ ಕೂಡ ಬಹಳ ಕಸರತ್ತು ಮುಂದುವರೆದಿದ್ದು ಸಿಟಿ ರವಿ,ವಿಜೇಯಂದ್ರ, ಅಶ್ವಥ್ ನಾರಾಯಣ,ಅಶೋಕ್ ಇನ್ನೂ ಮುಂತಾದವರ ಹೆಸರು ಮುಂಚೂಣಿಯಲ್ಲಿ ಇದೆ ಅಂತ ಕಂಡುಬದಿದೆ
ಆದರೆ ಲಿಂಗಸೂಗೂರಿನ ಯುವಕರು ಮತ್ತು ಚಿಕ್ಕಹೆಸರೂರಿನ ಗ್ರಾಮದ ಬಿಜೆಪಿ ಮುಖಂಡರು ಮಲ್ಲಿಕಾರ್ಜುನ ಹಟ್ಟಿ,
ಗ್ರಾಂ ಪಂಚಾಯತ್ ಸದಸ್ಯರಾದ ಮೌನೇಶ್ ಮಾವಿನಭಾವಿ,
ಬೂತ ಅಧ್ಯಕ್ಷರಾದ ವಿಜಯ ಮಲಿಪಾಟೀಲ್ ಮತ್ತು
ಕುಮಾರ ಮೇಟಿ ಹಾಗೂ ಶರಣ ಬಸವ ಮಾಲಿಪಾಟೀಲ್ ಅವರು ವಿಪಕ್ಷ ನಾಯಕ ಶ್ರೀ ಬಸನಗೌಡ ಪಾಟೀಲ್ ಯತ್ನಾಳ ಅವರನ್ನೇ ಮಾಡಬೇಕು ಎಂದು ಕರುನಾಡ ಕಂದ ಪತ್ರಿಕೆಗೆ ತಿಳಿಸಿದರು.
ವರದಿ:ಪುನೀತ ಕುಮಾರ