ಕಲಬುರಗಿ/ಜೇವರ್ಗಿ:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಗಿಂತ ಮುಂಚೆ ಪ್ರಚಾರ ಕಾರ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಾ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂಪಾಯಿ ನಿರುದ್ಯೋಗ ಭತ್ತೆ ನೀಡುವುದಾಗಿ ಘೋಷಿಸಿತು ಆದರೆ ಸರ್ಕಾರ ಇದೀಗ 2022 ಹಾಗೂ 23ನೇ ಸಾಲಿನಲ್ಲಿ ಪಾಸಾದ ಪದವೀಧರ ವಿದ್ಯಾರ್ಥಿಗಳಿಗೆ ಮೂರು ಸಾವಿರ ನಿರುದ್ಯೋಗ ಭತ್ಯೆ ಕೊಡುವುದಾಗಿ ಘೋಷಿಸಿದೆ ಈ ಪ್ರಣಾಳಿಕೆ ಅವೈಜ್ಞಾನಿಕವಾಗಿದ್ದು ಹಾಗೂ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಒರೆಸುವ ತಂತ್ರ ಇದಾಗಿದೆ ಈ ಪ್ರಣಾಳಿಕೆಗೆ ತಮ್ಮ ಅಸಮಾಧಾನವಿದೆ ಹತ್ತು ಹದಿನೈದು ವರ್ಷಗಳಿಂದ ಪದವಿ ಮುಗಿಸಿದ ಪದವೀಧರರಿಗೆ ವಂಚಿಸಿದಂತಾಗುತ್ತದೆ ಆದ್ದರಿಂದ ಸರ್ಕಾರ ಕೂಲಂಕುಶವಾಗಿ ಪರಿಶೀಲಿಸಿ ಈ ಯೋಜನೆ ಜಾರಿಗೆ ತಂದರೆ ರಾಜ್ಯದ ಎಲ್ಲಾ ವಯಸ್ಸಿನ ನಿರುದ್ಯೋಗಿ ಪದವೀಧರರಿಗೆ ಅನುಕೂಲವಾಗಬಹುದು ಆದ್ದರಿಂದ ಸರ್ಕಾರ ತಮ್ಮ ನಿಯಮಗಳಲ್ಲಿ ಬದಲಾವಣೆಯನ್ನು ತಂದು ನಿರುದ್ಯೋಗಿ ಪದವೀಧರರ ಬಾಳಿಗೆ ಬೆಳಕಾಗಬೇಕು ಎಂದು ಗ್ರಾಮೀಣ ಅಭಿವೃದ್ಧಿ ಹೋರಾಟಗಾರ ಯಲ್ಲಾಲಿಂಗ ಎಸ್ ದಂಡಗುಲ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
