ಕಲಬುರ್ಗಿ/ಜೇವರ್ಗಿ:ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಹಾಗೂ ಏಕಾಏಕಿ ವಿದ್ಯುತ್ ದರ ಹೆಚ್ಚಳ ಖಂಡಿಸಿ ಜೇವರ್ಗಿ ತಾಲೂಕ ಬಿಜೆಪಿ ಮಂಡಲ ವತಿಯಿಂದ ನಿನ್ನೆ ಪ್ರತಿಭಟನೆ ಮಾಡುವ ಮೂಲಕ ತಾಲೂಕ ದಂಡಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ ಕ್ರಮಗಳನ್ನು ಖಂಡಿಸಿ ಗ್ಯಾರೆಂಟಿಗಳಿಗೆ ಕೊಡುತ್ತೇವೆ ಎಂದು ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಕಲಿಸಬೇಕಾಗಿದೆ ಎಂದು ಪ್ರತಿಭಟನಕಾರರು ಹೇಳಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ನಾಯಕರು, ಬಿಜೆಪಿಯ ಜಿಲ್ಲಾ ಅದ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿ ರವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಮಾಡವ ಮೂಲಕ, ಪಕ್ಷದ ಹಿರಿಯ ಮುಖಂಡರಾದ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅದ್ಯಕ್ಷರಾದ ಧರ್ಮಣ್ಣ ದೊಡ್ಡಮನಿ ,ಮಂಡಲದ ಅಧ್ಯಕ್ಷರಾದ ಆರ್ ಭೀಮರಾವ್, ಹಿರಿಯರಾದ ಹಳ್ಳೆಪ್ಪ ಆಚಾರ್ಯ ಜೋಶಿ ,ಎಸ್ ಸಿ ಮೋರ್ಚಾ ಮರೆಪ್ಪ ಬಡಿಗೇರ,ಗುರುರಾಜ ಸುಲಹಳ್ಳಿ ,ಎಸ್ ಸಿ ಮೋರ್ಚಾ ತಾಲೂಕ ಅದ್ಯಕ್ಷರಾದ ಭಾಗಣ್ಣ ಯಲಗೋಡ ,ಗಿರಿಜಾ ಶಂಕರ ರಾಮನಗೊಳ ,ಗುರು ಸಿಕೇದ್ , ಮಲ್ಲಣ್ಣ ಕುಲಕರ್ಣಿ ,ಪ್ರ.ಕಾ ಗಳಾದ ಭಾಗೇಶ ಹೋತಿನಮಡು ,ಸುರೇಶ ಹಳ್ಳಿ ,ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ ಪಾಟೀಲ ನೇದಲಗಿ , ಸಂಗನಗೌಡ ರದ್ದೇವಾಡಗಿ, ಸಂತೋಷ ಮಲ್ಲಬಾದ್, ವಿಶ್ವರಾಜ ಬಡಿಗೇರ, ಸುರೇಶ ಹಿಪ್ಪರಗಿ, ಅನಿಲ ದೊಡ್ಡಮನಿ, ಸಾಗರ ಬಡಿಗೇರ, ಸೇರಿದಂತೆ ಅನೇಕ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಕಲಬುರ್ಗಿ