2023ನೇ ಸಾಲಿನ ಅರಣ್ಯ,ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ವತಿಯಿಂದ ನೀಡಲಾಗುವ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಯನ್ನು ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ತಮ್ಮ ತಂದೆ ತಾಯಿಗಳ ಸಮಾಧಿ ಮೇಲಿಟ್ಟು ಪ್ರಶಸ್ತಿಯನ್ನು ತಂದೆ ತಾಯಿಗಳಿಗೆ ಅರ್ಪಣೆ ಮಾಡಿದರು.
ಸಿಂಧನೂರಿನ ಮಲ್ಲಾಪೂರ ಗ್ರಾಮದ ಅಮರೇಗೌಡ ಅವರು 2014ರಲ್ಲಿ ತಮ್ಮ ತಂದೆತಾಯಿಗಳನ್ನು ಕಳೆದುಕೊಂಡು ತುಂಬಾ ದುಃಖಿತರಾಗಿದ್ದರು ಅವರು ಸ್ಮರಣಾರ್ಥವಾಗಿ ಸಸಿಗಳನ್ನು ನೆಟ್ಟು ಪೋಷಿಸಬೇಕೆಂದು ನಿರ್ದಾರ ಮಾಡಿದರು ಆಗಿನಿಂದ ಇಲ್ಲಿಯವರೆಗೆ ಪ್ರತಿ ದಿನ ಪ್ರತಿ ವರ್ಷ ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದರಲ್ಲೇ ತಂದೆ ತಾಯಿಗಳನ್ನ ನೆನೆಯುತ್ತಿದ್ದಾರೆ.ಅವರ ಆರ್ಶೀವಾದದಿಂದ ಈ ವರ್ಷ ರಾಜ ಪರಿಸರ ಪ್ರಶಸ್ತಿ ಲಭಿಸಿತು. ಈ ಶುಭ ವಿಚಾರದೊಂದಿಗೆ ಖುಷಿಯಾಗಿ ತನ್ನ ತಂದೆತಾಯಿಗಳಿಗೆ ಈ ಪ್ರಶಸ್ತಿಯನ್ನು ಅರ್ಪಿಸಬೇಕೆಂದು ತಂದೆ ತಾಯಿಗಳ ಸಮಾದಿಗೆ ಪೂಜೆ ಸಲ್ಲಿಸಿ ಈ ಪ್ರಶಸ್ತಿ ಇಟ್ಟು ನಮಸ್ಕರಿಸಿ ಅರ್ಪಣೆ ಮಾಡಿದರು. ಈ ಒಂದು ಪ್ರಶಸ್ತಿಯನ್ನು ನನ್ನ ತಂದೆತಾಯಿಗಳಿಗೆ ಎಲ್ಲ ಪರಿಸರ ಪ್ರೇಮಿಗಳಿಗೆ,ವನಸಿರಿ ಫೌಂಡೇಶನ್ ಸದಸ್ಯರಿಗೆ ಇವತ್ತು ಈ ಒಂದು ಅರ್ಪಿಸುತ್ತಿದ್ದೇನೆ ಮತ್ತು ಈ ಪ್ರಶಸ್ತಿಯ 1ಲಕ್ಷ ರೂಪಾಯಿಗಳನ್ನು ಇದೇ ಪರಿಸರ ಸೇವೆಗೆ ಮೀಸಲಿಡುತ್ತೇನೆ ಎಂದು ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.