ಕಾನೂನು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿರುವ,ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಎ.ನಾರಾಯಣ ಸ್ವಾಮಿರವರ ನೇಮಕಾತಿ ಅಕ್ರಮದಿಂದ ಕೂಡಿರುವ ಕುರಿತಾಗಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿಸಲಾಗಿದೆ.
• ಡಾ.ಎ ನಾರಾಯಣ ಸ್ವಾಮಿರವರು ಸಮಾಜಶಾಸ್ತ್ರದ ಉಪನ್ಯಾಸಕರಾಗಿ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ನೇಮಕಗೊಂಡಿರುತ್ತಾರೆ.
• ನಂತರ ಸಮಾಜಶಾಸ್ತ್ರದ ಉಪನ್ಯಾಸಕರಾಗಿ ಹುದ್ದೆಯನ್ನು ನಿರ್ವಹಿಸುತ್ತಲೇ ಕಾಲೇಜಿಗೆ ಹೋಗದೆ (ಪಾಠ ಪ್ರವಚನ ಕೇಳದೆ) ಕಾನೂನು ಪದವಿಯನ್ನು ( LL.B ) ಪಡೆದಿರುತ್ತಾರೆ ನಂತರ 2012 ರಲ್ಲಿ ದೂರ ಶಿಕ್ಷಣ ವಿಭಾಗದ ಅಣ್ಣ ಮಲೈ ವಿಶ್ವವಿದ್ಯಾಲಯದಲ್ಲಿ LLM ಸ್ನಾತಕೋತರ ಪದವಿ ಪಡೆದಿರುತ್ತಾರೆ ನಂತರ ಕಾನೂನು ವಿಶ್ವವಿದ್ಯಾಲಯದ ನೇಮಕಾತಿ ಮಾನದಂಡಗಳ ಪ್ರಕಾರವಾಗಲಿ ಹಾಗೂ UGC ಮಾನದಂಡಗಳ ಪ್ರಕಾರವಾಗಲಿ ನೇಮಕವಾಗದೆ ಕಾನೂನು ವಿಭಾಗದ ಸಹಾಯಕ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸಿರುತ್ತಾರೆ ಇದು ಇವರ ಒಂದು ಕರ್ತವ್ಯ ಲೋಪವಾಗಿರುತ್ತದೆ.
• ಸಹಾಯಕ ಪ್ರಾದ್ಯಾಪಕರಾಗಿದ್ದರೂ ಸಹ ಇವರನ್ನು ಪ್ರಭಾರ ಪ್ರಾಂಶುಪಾಲರಾಗಿ ನೇಮಕ ಮಾಡಿರುವುದು UGC ಮಾರ್ಗ ಸೂಚಿ ಉಲಂಘನೆ ಯಾಗಿರುವುದು ಕಂಡುಬಂದಿರುತ್ತದೆ. (ಸಹಾಯಕ ಪ್ರಾಧ್ಯಾಪಕರಿಗೆ ಪ್ರಾಂಶುಪಾಲರಾಗಲು ಅರ್ಹರಿರುವುದಿಲ್ಲ / ಪ್ರಾಂಶುಪಾಲರಾಗಿ ನೇಮಕವಾಗಲು 15 ವರ್ಷಗಳ ಕಾಲ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸಬೇಕಾಗಿರುತ್ತದೆ.) ಇದಕ್ಕೆ ಸಂಬಂಧಪಟ್ಟಂತೆ,
• ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ,ವಿದ್ಯಾಮಂಡಳಿಯ ಕುಲಸಚಿವರ ನೋಟಿಸ್ INCHARGE PRINCIPAL ಆಗಲು ಅರ್ಹತೆ ಇಲ್ಲವೆಂದು ತಿಳಿಸಲಾಗಿದೆ ಆದರೂ ಇವರು ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ ಇದು ಇವರು ಸರ್ಕಾರಕ್ಕೆ ಮಾಡಿರುವ ವಂಚನೆಯಾಗಿರುತ್ತದೆ.
• ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ಡಾ.ಎ.ನಾರಾಯಣ ಸ್ವಾಮಿ ರವರನ್ನು ಪ್ರಭಾರ ಪ್ರಾಂಶುಪಾಲ ಹುದ್ದೆಯಿಂದ ಕೆಳಗಿಳಿಸಿ ಈ ಕುರಿತಂತೆ ಸೂಕ್ತವಾಗಿ ತನಿಖೆ ನೆಡೆಸಿ ಕಾನೂನು ರೀತಿಯ ಕ್ರಮಕೈಗೊಂಡು,UGC ಮಾರ್ಗಸೂಚಿಯ ಪ್ರಕಾರ ವಿದ್ಯೋದಯ ಕಾನೂನು ಕಾಲೇಜಿಗೆ ಅರ್ಹ ಪ್ರಾಂಶುಪಾಲರನ್ನು ನೇಮಿಸಬೇಕಾಗಿ ಮನವಿ ಯನ್ನು ಮಾನ್ಯ ಲೋಕಾಯುಕ್ತರಲ್ಲಿ ಮಾಡಲಾಗಿರುತ್ತದೆ.
• Prof. Dr. C. BASAVARAJU, Hon’ble Vice Chancellor, Karnataka State Law University ರವರಿಗೆ ಈ ಮೇಲಿನ ಎಲ್ಲಾ ಅಂಶಗಳು ಗೊತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದಿರುವುದು ಇವರ ಕರ್ತವ್ಯಲೋಪವಾಗಿರುತ್ತದೆ ಇವರ ಮೇಲೂ ಸಹ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿರುತ್ತದೆ.
-ಕರುನಾಡ ಕಂದ