ಸಿಂಧನೂರು: ಜೂ.07. ಸಿಟ್ಟಿನಲ್ಲಿ ಪತಿಯು ಪತ್ನಿಯ ಕುತ್ತಿಗೆ, ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಅಷ್ಟೇ ಅಲ್ಲದೆ ಪತ್ನಿಯ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿರುವ ಘಟನೆ ಜರುಗಿದೆ. ಅಕ್ರಮ ಸಂಬಂಧದ ಅನುಮಾನದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ ಶಿಲ್ಪಾ (27) ಮೃತ ದುರ್ದೈವಿಯಾಗಿದ್ದು, ಗಂಡ ಸಿದ್ದು ಎಂಬ ಹೆಸರಿನ ವ್ಯಕ್ತಿ ಕೊಲೆ ಮಾಡಿದಾತ. ಇವರಿಗೆ ಓರ್ವ ಗಂಡು ಮಗು ಇದೆ. ಪತ್ನಿಯು ಬೇರೆಯವರೊಂದಿಗೆ ಅಕ್ರಮ ಹೊಂದಿದ್ದಾಳೆ ಎಂಬ ಅನುಮಾನದಿಂದ ಈ ಕೊಲೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಮೃತದೇಹವನ್ನು ಸ್ಥಳೀಯ ಸರ್ಕಾರ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ, ಮೃತ ಶಿಲ್ಪಾ ಅವರ ತಾಯಿಯಾದ ಶಾಂತಾಬಾಯಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಈಗಾಗಲೇ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅಕ್ರಮ ಸಂಬಂಧದಿಂದಲೇ ಪತ್ನಿಯನ್ನು ತಾನೇ ಕೊಲೆ ಮಾಡಿರುವುದಾಗಿ ಪತಿ ಸಿದ್ದು ಒಪ್ಪಿಕೊಂಡಿದ್ದಾನೆ ಎಂದು ಪೊಲಿಸ್ ಇನ್ಸ್ಪೆಕ್ಟರ್ ದುರಗಪ್ಪ ಡೊಳ್ಳಿನ ತಿಳಿಸಿದರು.
ವರದಿ// ವೆಂಕಟೇಶ.H ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.