ದೇಶಕ್ಕೆ ಅಚ್ಚೆದಿನವನ್ನು ತರುತ್ತೇವೆ ಎಂದು ಹೇಳುತ್ತಾ ಕೇಂದ್ರ ಸರ್ಕಾರವು ಯಶಸ್ವಿಯಾಗಿ ಒಂಭತ್ತು ವರ್ಷಗಳನ್ನೇನೋ ಪೂರೈಸಿ ಮುನ್ನುಗುತ್ತಿದೆ ಆದರೆ ಒಂಬತ್ತೂ ವರ್ಷಗಳನ್ನು ಕಳೆದರು ಇನ್ನೂ ಆ ಅಚ್ಚೆ ದಿನ ಯಾವಾಗ ಬರುವುದೆಂದು ದೇಶವಾಸಿಗಳು ಕಾಯುತ್ತಾ ಕುಳಿತಿದ್ದಾರೆ,2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶದ ಜನತೆಗೆ ಹಲವು ಭರವಸೆಯನ್ನು ನೀಡಿದ್ದು ನರೇಂದ್ರ ಮೋದಿಯವರು ಆ ಭರವಸೆಗಳನ್ನು ಈಗ ಮರೆತಿದ್ದಾರೆ ಎಂದೆನಿಸುತ್ತಿದೆ ಹೊರ ದೇಶದಲ್ಲಿರುವ ಕಪ್ಪು ಹಣ ಬೇಕೋ?ಬೇಡವೋ?ಆ ಕಪ್ಪು ಹಣ ಬೇಕಿದ್ದರೆ ನನಗೆ ಒಂದು ಬಾರಿ ಅವಕಾಶ ನೀಡಿ,ಆ ಕಪ್ಪು ಹಣ ಎಷ್ಟಿದೆ ಅಂದರೆ ಭಾರತದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ 15 ರಿಂದ 20 ಲಕ್ಷ ಹಣವನ್ನು ಹಾಕಬಹುದು ಎನ್ನುತ್ತಾ ಮಾನ್ಯ ನರೇಂದ್ರ ಮೋದಿಯವರು ಜನರಲ್ಲಿ ಆಶಾಕಿರಣವನ್ನು ಮೂಡಿಸಿದ್ದರು. ಹಾಗೆ ಹಾಗೆ ಕರ್ನಾಟಕದಲ್ಲಿ ಒಬ್ಬರು ಸ್ವಿಸ್ ಬ್ಯಾಂಕಿನಲ್ಲಿರುವ ಹಣವನ್ನು ತಂದರೆ ದೇಶದಲ್ಲಿರುವ ಎಲ್ಲಾ ರಸ್ತೆಗಳನ್ನು ಚಿನ್ನದ ರಸ್ತೆಗಳನ್ನಾಗಿ ಪರಿವರ್ತಿಸಬಹುದು ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಇದು ಸಾಧ್ಯ ಎಂದು ಭಾಷಣ ಮಾಡಿದ್ದರು,ಆದರೆ ಸನ್ಮಾನ್ಯ ಪ್ರಧಾನಿಯವರು ದೇಶದ ಚುಕ್ಕನೆಯನ್ನು ಹಿಡಿದು ಒಂಬತ್ತು ವರ್ಷ ಕಳೆದರೂ ಇನ್ನೂ ಆ ಕಪ್ಪು ಹಣವನ್ನು ತಂದಿಲ್ಲ ಹಾಗೆ ಭಾಷಣ ಒಂದರಲ್ಲಿ ಮೋದಿಯವರು 2020ಕ್ಕೆ ರೈತರ ಆದಾಯವು ದಿಗುಣಗೊಳ್ಳುತ್ತದೆ ಎಂದು ಹೇಳಿದ್ದರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿಯು ಭರವಸೆ ನೀಡಿದ್ದರು ಈಗ ಇದಕ್ಕೆಲ್ಲ ಉತ್ತರ ನೀಡುವವರು ಯಾರು? ಮತದಾನ ನೀಡಿ ಗೆಲ್ಲಿಸಿದ ತಪ್ಪಿಗೆ ಪ್ರಶ್ನೆ ಮಾಡುವ ಅಧಿಕಾರವನ್ನು ಸಹ ಕಳೆದುಕೊಂಡಿದ್ದೇವೆಯೇ? ಇನ್ನು ಎಷ್ಟು ವರ್ಷ ಇದೆ ನಂಬಿಕೆಯಲ್ಲಿ ಜನರು ಕಾಯಬೇಕು? ಬಹುಶಃ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಸಹ ಇದೇ ಆಶ್ವಾಸನೆಗಳನ್ನು ಮುಂದಿಟ್ಟುಕೊಂಡು ಮತ ಸೆಳೆಯುವ ಮನಸ್ಥಿತಿಯಲ್ಲಿ ಕೇಂದ್ರ ಸರ್ಕಾರವಿದೆ ಎಂದೆನಿಸುತ್ತಿದೆ.ಪ್ರಸ್ತುತ ಮತದಾರರಾದ(ಪ್ರಜೆಗಳು)ನಾವು ಯಾವುದನ್ನು ಸಹ ಊಹಿಸಲು ಸಾಧ್ಯವಿಲ್ಲ. ಪಕ್ಷ ಪಕ್ಷಗಳ ನಡುವಿನ ಕಿತ್ತಾಟದಲ್ಲಿ ಎಲ್ಲಾ ರಾಜಕೀಯ ವ್ಯಕ್ತಿಗಳು ಹಾಗೂ ಮಂತ್ರಿಗಳು ತಮ್ಮ ವೈಯಕ್ತಿಕ ಬೆಳವಣಿಗೆಯನ್ನು ಮಾತ್ರ ನೋಡಿಕೊಳ್ಳುತ್ತಿದ್ದಾರೆ.ರಾಷ್ಟ್ರದ ಜನತೆಯ ಕಷ್ಟಗಳಿಗೆ ಸ್ಪಂದಿಸುವವರು ಯಾರು ಇಲ್ಲ ಇದೆಲ್ಲದರ ನಡುವೆ ನಾವು ಮೋಸ ಹೋಗುತ್ತಿರುವುದಂತೂ ಸತ್ಯ ಹಾಗಾಗಿ ದಯಮಾಡಿ ಭರವಸೆಗಳನ್ನು ಕೇವಲ ಭರವಸೆಗಳಾಗಿ ಉಳಿದುಕೊಳ್ಳುವಂತೆ ಮಾಡದೇ ಅದನ್ನು ಬೇಗ ಚಾಲ್ತಿಗೆ ತರುವ ಕೆಲಸ ಆಗಬೇಕಿದೆ ಇಲ್ಲವಾದರೆ ಮುಂದಿನ ಚುನಾವಣೆಯ ಯುದ್ಧದಲ್ಲಿ ಜನರೇ ನಿಮಗೆ ತಕ್ಕ ಪಾಠ ಕಳಿಸುವುದು ಖಚಿತ.
-ಐಶ್ವರ್ಯ,ಚಟ್ನಹಳ್ಳಿ
ಪತ್ರಿಕೋದ್ಯಮ ವಿದ್ಯಾರ್ಥಿನಿ,
ಮಾನಸ ಗಂಗೋತ್ರಿ,ಮೈಸೂರು.