ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶಾಲೆಗಳು ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಲ್ಲ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಗಿಡ್ನಹಳ್ಳಿಯಲ್ಲಿ 2012 ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಲಪತಿಗೌಡ ಅವರು ಮಾತನಾಡುತ್ತಾ ಶಾಲೆಗಳು ಕೇವಲ ಶಿಕ್ಷಣಕಷ್ಟೇ ಸೀಮಿತವಾಗಿಲ್ಲ ಅವು ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಸಂಸ್ಕಾರ,ಬದ್ದತೆ,ಸಾಮಾಜಿಕ ಕಳಕಳಿ,ಶಿಸ್ತು ಇವೆಲ್ಲವನ್ನೂ ಕಲಿಸಿ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ವಿಕಸನ ಕೇಂದ್ರಗಳಾಗಿವೆ ಇವೆಲ್ಲವನ್ನೂ ನಾವು ಹಳೆಯ ವಿದ್ಯಾರ್ಥಿಗಳ ಇಂತಹ ಅಪರೂಪದ ಕಾರ್ಯಕ್ರಮಗಳಲ್ಲಿ ಕಾಣಬಹುದು ಗುರುಗಳು ನೀಡಿದ ಶಿಕ್ಷಣ ಸನ್ಮಾರ್ಗ ಕಡೆಯವರೆಗೂ ಜೊತೆಯಲ್ಲಿ ಇರುತ್ತದೆ ಯಾರು ಅದನ್ನ ಕದಿಯಲು ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ಅವರ ಋಣವನ್ನು ತೀರಿಸಲು ಗುರುವಂದನಾ ಕಾರ್ಯಕ್ರಮವನ್ನು ಮಾಡಿ ಗುರುಗಳನ್ನು ಸತ್ಕಾರ ಮಾಡಿದ್ದೀರಿ ಇದರಿಂದ ನುಮಗೆ ಸಾರ್ಥಕ ಭಾವನೆ ದೊರೆಯಲಿ ಎಂದು ಹರಸಿದರು ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯಿನಿ ಮಂಜುಳಾ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಸಹಕಾರ ಹಾಗೂ ಕೊಡುಗೆ ಅಪಾರವಾದದ್ದು ಆ ನಿಟ್ಟಿನಲ್ಲಿ ನೀವು ಇಂತಹ ಕಾರ್ಯಕ್ರಮದ ಮೂಲಕ ಶಾಲೆಗಳಿಗೆ ಕೊಡುಗೆ ನೀಡುತ್ತಿದ್ದು ಶಾಲೆಗೂ ನಿಮಗೂ ಇರುವ ಅವಿನಾವ ಬಂಧವನ್ನು ನಿರೂಪಿಸುತ್ತದೆ ಎಂದರು.
ಪ್ರೌಢಶಾಲೆ ಗಿಡ್ನಹಳ್ಳಿಯಲ್ಲಿ ಕಾರ್ಯನಿರ್ವಹಿಸಿ ಬೇರೆಡೆಗೆ ವರ್ಗಾವಣೆ ಹಾಗೂ ನಿವೃತ್ತಿಯಾಗಿರುವ ಶಿಕ್ಷಕರ ಪೈಕಿ ರಾಣಾ ಪ್ರತಾಪ್ ಅವರು ಮಾತನಾಡಿ ಶಾಲೆಯಿಂದ ವಿದ್ಯಾರ್ಥಿಗಳು ಹೊರ ಹೋದ ಬಳಿಕ ಸನ್ಮಾರ್ಗದಲ್ಲಿ ನಡೆದು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ರೈತ ದೇಶದ ಬೆನ್ನೆಲುಬು ಆಗಿದ್ದು ಅಂತಹ ಕುಟುಂಬಗಳಿಂದ ಬಂದ ನೀವು ಶೈಕ್ಷಣಿಕವಾಗಿ ಪ್ರಗತಿ ಹೊಂದುವುದು ಬಹಳ ಅವಶ್ಯಕ. ಕನ್ನಡದ ಜೊತೆಗೆ ವಿಜ್ಞಾನ,ಸಮಾಜ, ರಾಜಕೀಯ ವಿಷಯಗಳಲ್ಲೂ ವಿದ್ಯಾರ್ಥಿಗಳು ಗಮನಾರ್ಹ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು ಇದೇ ವೇಳೆಯಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡರು.
ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಯುವ ಸಾಹಿತಿ ಮಂಜುನಾಥ್ ಮಾತನಾಡಿ ನಾವು ಎಷ್ಟೇ ಬೆಳೆದು ನಮ್ಮ ಬದುಕನ್ನು ರೂಪಿಸಿಕೊಂಡರು ಅದಕ್ಕೆ ಪ್ರಮುಖ ಕಾರಣ ಶಿಕ್ಷಕರು ಅವರನ್ನು ನಾವು ಎಂದಿಗೂ ಮರೆಯುವಂತಿಲ್ಲ ನಾವು ಕಲಿತ ಶಾಲೆಯ ಬಗ್ಗೆ ನಮ್ಮ ಶಾಲೆ ನಮ್ಮ ಹೆಮ್ಮೆ ಎಂಬ ಗೌರವಯುತ ಸ್ಥಾನ ಎಂದಿಗೂ ಮೀಸಲಿಡಬೇಕು ಸುಮಾರು ವರ್ಷಗಳ ಬಳಿಕ ಗುರುಗಳು ಹಾಗೂ ಸಹಪಾಠಿಗಳನ್ನು ಒಂದೆಡೆ ಸೇರಿಸಿ ಈ ರೀತಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಭಾರತೀಯ ಸಂಸ್ಕೃತಿಯಲ್ಲಿ ಗುರುಶಿಷ್ಯರ ಪರಂಪರೆಗೆ ತನ್ನದೆ ಆದ ಮಹತ್ವವಿದೆ. ಪ್ರಾಚೀನ ಕಾಲದಿಂದಲೂ ಗುರುವಿಗೆ ಶ್ರೇಷ್ಠ ಸ್ಥಾನವಿದೆ ಅಂತಹ ಪರಂಪರೆ ನಿರಂತರವಾಗಿ ಮುಂದುವರಿಯಬೇಕು ತಮಗೆ ಅಕ್ಷರ ಜ್ಞಾನ ಕೊಟ್ಟ ಗುರುಗಳನ್ನು ಕರೆಸಿ ಗೌರಯುತವಾಗಿ ಸತ್ಕರಿಸಿದ್ದು ನಮ್ಮೆಲ್ಲರ ಸೌಭಾಗ್ಯ ಹಾಗೂ ನಾವು ನಮ್ಮ ಕರ್ತವ್ಯವನ್ನು ಸಮರ್ಪಕವಾಗಿ ಮಾಡಿದ್ದೇವೆ ಎಂದು ಅನಿಸುತ್ತೆ ಏಕೆಂದರೆ ನಾವೆಲ್ಲರೂ ಇಂದು ಒಂದೊಂದು ಸ್ಥಾನದಲ್ಲಿ ಇದ್ದು ಸೇವೆ ಸಲ್ಲಿಸುತ್ತಿದ್ದೇವೆ ಇದಕ್ಕೆ ಕಾರಣ ನಮ್ಮ ಶಿಕ್ಷಕರು,ಅದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ಮಂಜುನಾಥ್ ಅಭಿಪ್ರಾಯ ಪಟ್ಟರು.
ಇದೇ ವೇಳೆಯಲ್ಲಿ 2012 ನೇ ಸಾಲಿನ ವಿದ್ಯಾರ್ಥಿಗಳ ತಂಡದಿಂದ ಶಾಲೆಗೆ ನೂತನ ಯುಪಿಎಸ್ ಕೊಡುಗೆ ನೀಡಿದರು‌ ಹಳೆಯ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಸ್ಮರಣಿಕೆ ನೀಡಿ ಧನ್ಯವಾದ ತಿಳಿಸಿದರು ವಿಶೇಷವಾಗಿ ಬರೋಬ್ಬರಿ 12 ವರ್ಷಗಳ ನಂತರ ಎದುರಾದ ಸ್ನೇಹಿತರು ಒಬ್ಬೊರನ್ನೊಬ್ಬರು ಕಂಡು ಆಶ್ಚರ್ಯಪಟ್ಟರು ಮಾತ್ರವಲ್ಲದೆ ಪ್ರತಿಯೊಬ್ಬರು ತಮ್ಮ ಬಾಲ್ಯದ ನೆನಪು, ಶಾಲಾ ದಿನಗಳ ತುಂತಾಟ,ಜೀವನದಲ್ಲಿ ಎದುರಿಸಿದ ಸವಾಲಗಳನ್ನು ಮೆಟ್ಟಿ ನಿಂತು ಯಶಸ್ಸು ಕಂಡಿದ್ದರ ಬಗ್ಗೆ ಅನುಭವ ಹಂಚಿಕೊಂಡರು ಜತೆಗೆ ಈ ವೇಳೆ ಹಲವರು ಕಣ್ಣೀರು ಸುರಿಸಿದ ಘಟನೆಯೂ ನಡೆಯಿತು. ಪ್ರತಿ ವರ್ಷ ಇಂತಹದ್ದೊಂದು ವಿಶೇಷ ಕಾರ್ಯಕ್ರಮ ಮಾಡಬೇಕೆನ್ನುವ ನಿರ್ಧಾರ ಮಾಡಿದರು ಬಳಿಕ ಹಿರಿಯ ವಿದ್ಯಾರ್ಥಿಗಳೆಲ್ಲರೂ ತಮ್ಮ ಶಿಕ್ಷಕರೊಂದಿಗೆ ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಂಡರು ಎಲ್ಲರಿಗೂ ವಿಶೇಷ ಅಡುಗೆ ಮಾಡಿಸಲಾಗಿತ್ತು ಇಡೀ ದಿನ ತಮ್ಮ ಸಹಪಾಠಿಗಳೊಂದಿಗೆ ಹಳೆಯ ಶಾಲಾ ನೆನಪುಗಳನ್ನು ನೆನಸಿಕೊಂಡು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಹಳೆಯ ಶಿಕ್ಷಕರಾದ ಮುನಿರಾಜು,ಶಾರದಾ,ವಾಸುದೇವ್ ಮೂರ್ತಿ,ಆನಂದ್,ನಾಗರಾಜು ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ