ಯಾದಗಿರಿ:ಶಹಾಪುರ ನಗರದ ಪರಮಪೂಜ್ಯ ಶ್ರೀ ಸೂಗುರೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆದ ಶ್ರೀ ಹೀರೇಮಠ ಕುಂಬಾರ ಓಣಿಯಲ್ಲಿ ಯೋಗಾ ಮತ್ತು ಸಸಿ ನೆಡುವ ಕಾರ್ಯಕ್ರಮ ಜರಗಿತು.
ಯೋಗ ದಿನಾಚರಣೆಯ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಯಾದಗಿರಿ ಜಿಲ್ಲೆ ಅವರ ನೇತೃತ್ವದಲ್ಲಿ ಹಾಗೂ ಜ್ಞಾನ ಯೋಗ ವಿಜ್ಞಾನ ತರಬೇತಿ ಕೇಂದ್ರ ಶಹಾಪುರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಶಹಾಪುರ,ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ,ವೀರಶೈವ ಲಿಂಗಾಯತ ಶಹಾಪುರ ಎಬಿವಿಪಿ ಶಹಾಪುರ,ಐಎಂಎ ಶಹಾಪುರ,ಕಿರಾಣಿ ವರ್ತಕರ ಸಂಘ ಶಹಾಪುರ,ಲಯನ್ ಕ್ಲಬ್ ಶಹಾಪುರ ಅವರ ಸಹಯೋಗದೊಂದಿಗೆ ಇಂದು ಕಾರ್ಯಕ್ರಮ ನಡೆಯಿತು.
ಪರಿಸರ ಸಂರಕ್ಷಣೆ,ಆರೋಗ್ಯವಾದ ಜೀವನ ಜೀವಿಸುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ದೇಶದ ರಕ್ಷಣೆ ಕೂಡ ನಮ್ಮೆಲ್ಲರ ಹೊಣೆ ಯೋಗಾ ಪರಿಚಯಿಸಿದ್ದು ನಮ್ಮ ಭಾರತ ದೇಶ ಇದರ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದು ಪರಮ ಪೂಜ್ಯ ಶ್ರೀ ಸೂಗುರೇಶ್ವರ ಶಿವಾಚಾರ್ಯರು ನುಡಿದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆ ನಡೆದುಬಂದ ದಾರಿ ಮತ್ತು ಸಮಾಜಕ್ಕೆ ಈ ಸಂಸ್ಥೆಯ ಕೊಡುಗೆ ಯೋಗಕ್ಕೆ ನಾವು ನೀಡಬೇಕಾದ ಮಹತ್ವ ಬಗ್ಗೆ ಸಂಸ್ಥೆಯ ರವಿ ಹೀರಮಠ ಅವರು ಸಂಪೂರ್ಣ ಮಾಹಿತಿ ನೀಡಿದರು.
ವಿಶೇಷವಾಗಿ ನಮ್ಮ ಶಹಾಪುರದ ಪ್ರತಿಭೆಗಳು ಹಾಗೂ ಅಂತಾರಾಷ್ಟ್ರೀಯ ಯೋಗ ಪಟುಗಳು ಮಹೇಶ್,ಸಂಗಮೇಶ, ಮೊಹಮ್ಮದ ಆಫೀಜ್ ಅವರು ಭಾಗವಹಿಸಿ ತಮ್ಮ ಯೋಗಾಸನದ ಮಾಡುವುದು ತೋರಿಸಿದರು.
ಈ ಸಭೆಗೆ ಆಗಮಿಸಿದ್ದ ಶ್ರೀ ಗುರುಬಸ್ಸಯ್ಯ ಗದ್ದುಗೆ ಡಾ|| ಚಂದ್ರಶೇಖರ ಸುಬೇದಾರ್, ಶಿವರಾಜ ದೇಶಮುಖ,ಚಂದ್ರಶೇಖರ ಆನೆಗುಂದಿ,ಬಸವರಾಜ ಗೋಗಿ,ಸಂಸ್ಥೆಯ ಸಾದ್ವಿ ವಾಣಿಶ್ರೀ,ಪ್ರಜಾಪಿತ ಬ್ರಹ್ಮಕುಮಾರಿ ಸಹೋದರಿ,ಶ್ರೀಮತಿ ಗಂಗಾ ತುಂಬಗಿ,ಶಾರದಾ ಪಡಿಶೆಟ್ಟಿ,ಅನುರಾಧ ಫಿರಂಗಿ,ಪ್ರಮೀಳಾ,ವಿದ್ಯಾಧರ ಆನೆಗುಂದಿ,ಸಂತೋಷ ಬೋನರ್ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆ ಶ್ರೀ ಮಲ್ಲಿಕಾರ್ಜುನ ಜಾಕ ಮತ್ತು ವಂದನಾರ್ಪಣೆ ಎಸ್.ಎಚ್.ರಡ್ಡಿ ನೇರವೇರಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್