ಹಾನಗಲ್:ಅಕ್ಕಿಆಲೂರಿನ ರೈತ ಸಂಪರ್ಕ ಕೇಂದ್ರಕ್ಕೆ ಶಾಸಕರಾದ ಮಾನೆ ಶ್ರೀನಿವಾಸ ಅವರು ಇಂದು ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ಗೈರು ಹಾಜರಿ ಕಂಡು ಗರಂ ಆದರು.
ಹಾಜರಾತಿ ಪುಸ್ತಕದಲ್ಲಿ ಮಾಹಿತಿ ನಮೂದಿಸದೇ ಅಧಿಕಾರಿಗಳು ಗೈರಾಗಿದ್ದರಿಂದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಕರೆ ಮಾಡಿ ವಿವರಣೆ ಪಡೆದರು.ಕೇಂದ್ರದ ನಾನಾ ವಿಭಾಗಗಳಿಗೆ ಖುದ್ದು ತೆರಳಿ ಪರಿಶೀಲಿಸಿ ಕೇಂದ್ರಕ್ಕೆ ಬಂದಿದ್ದ ರೈತರನ್ನು ಮಾತನಾಡಿಸಿ ಸಮಸ್ಯೆಗಳ ಬಗೆಗೆ ಕೇಳಿ ತಿಳಿದರು. ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ, ಕೇಂದ್ರ ರೈತ ಸ್ನೇಹಿಯಾಗುವಂತೆ ಕಾಳಜಿ ವಹಿಸಿ ಎಂದು ಸಿಬ್ಬಂದಿಗೆ ಮಾನೆ ಶ್ರೀನಿವಾಸ ಅವರು ಸೂಚಿಸಿದರು.
ವರದಿ ರವಿ ಓಲೆಕಾರ ಹಾನಗಲ್