ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಹಡಪದ ಸಮಾಜದವರು ಬಸವಣ್ಣನವರ ಕಾಲಘಟ್ಟದಿಂದ ಕ್ಷೌರಿಕ ವೃತ್ತಿಯನ್ನು ತಮ್ಮ ಕುಲಕಸುಬನ್ನಾಗಿ ಮಾಡಿಕೊಂಡು ಬಂದಿದ್ದಾರೆ ಅಂಥವರಿಗೆ ಹೊರ ರಾಜ್ಯದ ಕ್ಷೌರಿಕರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಬಸವ ಪ್ರಿಯ ಹಡಪದ ಅಪ್ಪಣ್ಣ ಅಭಿವೃದ್ಧಿ ಸೇವಾ ಸಂಘದ ವತಿಯಿಂದ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಿವಪುತ್ರ ನಾವಿ,ಪಟ್ಟಣದಲ್ಲಿ ಹಡಪದ ಸಮಾಜದ 20 ಕ್ಕೂ ಹೆಚ್ಚು ಕುಟುಂಬಗಳು ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಬಂದಿವೆ ಈಗ ಪಟ್ಟಣದಲ್ಲಿ ರಾಜಸ್ಥಾನ,ಯುಪಿ ಹಾಗೂ ದೆಹಲಿ ಮೂಲದವರು ಬಂದು ನಮ್ಮ ಪಟ್ಟಣದಲ್ಲಿ ಕಟಿಂಗ್ ಸಲೂನ್ ಗಳನ್ನು ತೆಗೆಯಲು ಹುನ್ನಾರ ನಡೆಸುತ್ತಿದ್ದಾರೆ ಇದರಿಂದ ಸ್ಥಳೀಯ ಕ್ಷೌರಿಕರ ಜೀವನ ದುಸ್ತರಕ್ಕೆ ಸಿಲುಕುವ ಸಾಧ್ಯತೆ ಇದ್ದು,ಹೊರ ರಾಜ್ಯಗಳಿಂದ ಬಂದು ನಮ್ಮ ಪಟ್ಟಣದಲ್ಲಿ ಸಲೂನ್ ಅಂಗಡಿಗಳನ್ನು ಹಾಕವವರಿಗೆ ಪರವಾನಿಗೆ ನೀಡಬಾರದೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವಪುತ್ರ ನಾವಿ,ಲಕ್ಷ್ಮಣ ನಾವಿ,ಸಂಗಪ್ಪ ನಾವಿ,ಸಂಗಮೇಶ ಯಾದವಾಡ,ಸಿದ್ದರಾಮ ನಾವಿ,ಬಸವರಾಜ್ ನಾವಿ,ಬಸವರಾಜ್ ಯಾದವಾಡ,ಆಕಾಶ್ ನಾವಿ,ವಿನಾಯಕ ನಾವಿ,ಯಲ್ಲಾಲಿಂಗ ನಾವಿ,ಸಚಿನ್ ನಾವಿ,ಬೀರಪ್ಪ ನಾವಿ,ಸಾತ್ವೀರ್ ನಾವಿ,ರಾಜು ನಾವಿ,ಹನುಮಂತ ನಾವಿ,ರವಿ ನಾವಿ,ಮಾರುತಿ ಚಿಂಚಣಿ,ವಿಠ್ಠಲ್ ಚಿಂಚನಿ, ಬಸಲಿಂಗ ಮುಗಳಿ ಹಾಗೂ ಸಂತೋಷ್ ನಾವಿ ಉಪಸ್ಥಿತರಿದ್ದರು.
ವರದಿ-ಉಮೇಶ್ ಯರಡತ್ತಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.