ಕಲಬುರಗಿ/ಅಫಜಲಪುರ:ರಾಜ್ಯ ಸರ್ಕಾರ ಸ್ತ್ರೀ ಶಕ್ತಿ ಯೊಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಒದಗಿಸಿರುವುದರಿಂದ ಭಾನುವಾರದಂದು ಅಮವಾಸ್ಯೇಯ ದಿನವಾದ ನಿನ್ನೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ತುಂಬಿ ಬರುವಂತೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಬರುವ ಸುಕ್ಷೆತ್ರ ಘತ್ತರಗಿ ಭಾಗ್ಯವಂತಿ ದೇವಿಯ ದರ್ಶನಕ್ಕೆ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕುಟುಂಬ ಸಮೇತವಾಗಿ ತಂಡೋಪ ತಂಡವಾಗಿ ಅಗಮಿಸಿರುವುದು ಕಂಡು ಬಂದಿತು ಪ್ರಯಾಣಿಕರ ಸಂಖ್ಯೆ ಅಧಿಕ ವಾಗಿದ್ದರಿಂದ ಸಾರಿಗೆ ಸಂಸ್ಥೆಯವರಿಗೆ ಹಾಗೂ ಪೊಲೀಸ್ ಸಿಬ್ಬಂದಿ ಅವರು ಜನರನ್ನು ನಿಯಂತ್ರಿಸಲು ಹರ ಸಾಹಸ ಪಡಬೇಕಾಯಿತು ಜೊತೆಗೆ ಬಿರು ಬಿಸಿಲಿನ ಬೇಗುದಿಯಿಂದ ಬಸ್ಸಿನಲ್ಲಿ ನೂಕುನುಗ್ಗಲಿನಿಂದ ಜನರು ಪರಿತಪಿಸಿದ್ದು ಕೂಡಾ ಕಂಡು ಬಂದಿತು.
ವರದಿ-ಮಹಾದೇವ ವಿಶ್ವಕರ್ಮ