ಶಹಾಪುರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ಶಹಾಪುರ, ಯಾದಗಿರಿ ಜಿಲ್ಲಾ ವತಿಯಿಂದ 5 ರಿಂದ 18 ವರ್ಷದ ಮಕ್ಕಳಿಗೆ ವಿಶೇಷ ಪ್ರಜ್ಞಾ ಯೋಗಾ ಶಿಬಿರ ಇಂದು ಪೂರ್ಣಗೊಳಿಸಲಾಯಿತು
ಮಕ್ಕಳು ಕಣ್ಣು ಮುಚ್ಚಿ ಚಿತ್ರ ಬಿಡಿಸುವುದು, ಬಣ್ಣಗಳನ್ನು, ಗುರುತಿಸುವುದು ಅಂಕಿಗಳನ್ನು ಕೇಳುವುದು ಮುಂತಾದ ಪ್ರಯೋಗಗಳಿಂದ ನೆರೆದಿದ್ದ ಪ್ರೇಕ್ಷಕರ ಮತ್ತು ಪಾಲಕರನ್ನು ಆಶ್ಚರ್ಯಗೊಳಿಸಿದರು.
ಈ ಒಂದು ಕಾರ್ಯಕ್ರಮವನ್ನು ಸಾದ್ವಿ ವಾಣಿಶ್ರೀ ರಾವ್ ಜಿ ಯವರು ನೆರವೇರಿಸಿ ಕೊಟ್ಟರು. ಈ ಒಂದು ಸಂದರ್ಭದಲ್ಲಿ ಜಿಲ್ಲಾ ಸಂಯೋಜಕರಾದ ಶ್ರೀ ಎಸ್ ಹೆಚ್ ರೆಡ್ಡಿ ಜಿ ಹಾಗೂ ಸ್ವಯಂ ಸೇವಕರಾದ ಗಂಗಾ ತುಂಬಗಿ, ಪ್ರಮೀಳಾ, ಶಾರದಾ ಪಡಿಶೆಟ್ಟಿ ಪಾರ್ವತಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ