ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹೊಟ್ಟೆ ತುಂಬಿದವರಿಗೆ ಹಸಿದವರ ಮನೆಯ ತಟ್ಟೆಗಳು ಮಾನವಿಯತೆ ಎಚ್ಚರಿಸುವ ಕನ್ನಡಿಯಾಗಲಿ

ಕಾಂಗ್ರೆಸ್ ಪಕ್ಷದವರು ತನ್ನ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದಾಗ ಬಹಳಷ್ಟು ಜನ ಅದನ್ನ ವಿರೋಧಿಸಿದರು.
ಜನ ಸೊಂಬೇರಿಗಳಾಗುತ್ತಾರೆ ಎಂದು ಹಂಗಿಸಿದರು10 ಕೆಜಿ ಅಕ್ಕಿ ನೀಡಿದರೆ ಜನ ಕೂಲಿ ಕೆಲಸಕ್ಕೆ ಬರುತ್ತಾರಾ.?ಎಂದು ಪ್ರಶ್ನಿಸಿದರು ಪ್ರಶ್ನಿಸಲಿ ಪ್ರಶ್ನೆ ಮಾಡುವುದು ತಪ್ಪಲ್ಲ ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ ಆದರೆ,ಅದೇ ಬಿಜೆಪಿ ‘5 ಕೆಜಿ ಅಕ್ಕಿ ಐದು ಕೆಜಿ ಸಿರಿಧಾನ್ಯಗಳನ್ನು ನೀಡುತ್ತೆವೆ’ ಎಂದಾಗ ಅದನ್ನು ಪ್ರಶ್ನೆ ಮಾಡದೆ ಸುಮ್ನೆ ಕುಳಿತರು ಅದು ಯಾವ ಕಾರಣಕ್ಕೆ ಎಂದು ತಿಳಿಯುತ್ತಿಲ್ಲ ಅಂತಹ ಜನಗಳಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳ ಬಯಸುತ್ತೇನೆ…ಅಕ್ಕಿಯನ್ನು ಕಾಂಗ್ರೆಸ್ ನವರು ನೀಡಿದರೆ ಮಾತ್ರ ತಪ್ಪೆ.?ಅಥವಾ ನಿಮ್ಮ ದ್ವೇಷ ಕಾಂಗ್ರೆಸ್ನವರ ಮೇಲೋ ಅಥವಾ ಹಸಿದವರ ಮೇಲೋ.?ನಿಮ್ಮಲ್ಲಿ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಬಹುದು ಎಂಬ ಕಳಕಳಿಯಿದ್ದಿದ್ದರೆ ಬಿಜೆಪಿ ಅವರು ನೀಡುತ್ತೇವೆ ಎಂದಾಗ ಏಕೆ ಪ್ರಶ್ನಿಸಲಿಲ್ಲ.? ಕಾಂಗ್ರೆಸ್ನವರು ನಿಮ್ಮ ಸಿದ್ದಾಂತಕ್ಕೆ ವಿರುದ್ಧವಾಗಿರಬಹುದು ಆದರೆ ಸಿದ್ಧಾಂತಕ್ಕಾಗಿ ಹಸಿದವರ ಹೊಟ್ಟೆಯ ಮೇಲೆ ಹೊಡೆಯುವ ಯತ್ನ ಯಾಕೆ.?ಕಾಂಗ್ರೆಸ್ ಪಕ್ಷದವರು ಚುನಾವಣೆ ಗೆಲ್ಲುವ ಕಾರಣಕ್ಕಾಗಿಯೇ ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಭರವಸೆಯನ್ನ ಜನರ ಮುಂದಿಟ್ಟರು ಎಂದು ಇಟ್ಟುಕೊಳ್ಳಿ ಆದರೆ ಇದರಿಂದ ತಮ್ಮ ನಾಡಿನ ಜನರ ಹೊಟ್ಟೆ ತುಂಬುತ್ತದೆ ಹಾಗಾಗಿ ಇದರಿಂದ ಜನರಿಗಾಗುವ ಹಲವು ರೀತಿಯ ಲಾಭವನ್ನು ಏಕೆ ನೀವು ನೋಡುತ್ತಿಲ್ಲ.?ರಾಜ್ಯದ ಜನ ಯಾರೂ ಹಸಿವಿನಿಂದ ಸಾಯದೆ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡಿದರೆ ಅದು ನಾವು ಹೆಮ್ಮೆ ಪಡುವ ವಿಚಾರವಲ್ಲವೇ,ಜನ ಹೊಟ್ಟೆ ತುಂಬಾ ಊಟ ಮಾಡುವುದನ್ನು ಹಂಗಿಸುವ ಪ್ರಯತ್ನವೇಕೆ.? ಇದು ಕಾಂಗ್ರೆಸ್ ನವರು ಜಾರಿ ಮಾಡಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ಈ ರೀತಿಯಲ್ಲಿ ಮಾನವಿಯತೆಯೆ ಇಲ್ಲದಂಗೆ ಆಡಿಕೊಳ್ಳೊದು ಎಷ್ಟು ಸರಿ.?ನಾವು ಈ ವಿಷಯವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸೋಣ ಈ ಯೋಜನೆಯನ್ನು ವಿರೋಧಿಸುತ್ತಿರುವ ಜನರು ಯಾರೆಂದು ತಿಳಿಯೋಣ ಹಸಿದವರು ಇದನ್ನು ವಿರೋಧಿಸಿದರೆ,ರೈತರು ಇದನ್ನು ವಿರೋಧಿಸಿದರೆ,ಕೂಲಿ ಕಾರ್ಮಿಕರು ವಿರೋಧಿಸಿದರೆ,ಇರಲು ಸೂರಿಲ್ಲದೇ ಗುಡಿಸಲಿನಲ್ಲಿ ವಾಸಿಸುತ್ತಿರುವವರು ವಿರೋಧಿಸಿದರೇ?ಇಲ್ಲಾ..ಇವರಾರು ಇದನ್ನು ವಿರೋಧಿಸಲಿಲ್ಲ ಇದನ್ನು ವಿರೋಧಿಸುತ್ತಿರುವ ಜನ ಲಕ್ಷಗಟ್ಟಲೇ ಸಂಬಳ ತೆಗೆದುಕೊಂಡು ಹವಾ ನಿಯಂತ್ರಿತ ಕೋಣೆಯಲ್ಲಿ ಕೆಲಸ ಮಾಡುವವರು ಮಹಾನಗರಗಳಲ್ಲಿ ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಿರುವವರು ಈ ಜನಗಳಿಗೆಕೆ ಹಸಿದವರ ಮೇಲೆ ದ್ವೇಷ. ಇದೇ ಕಾರಣಕ್ಕಾಗಿ ನಮ್ಮ ಹಳ್ಳಿ ಕಡೆ ಒಂದು ಮಾತು ಹೇಳುತ್ತಾರೆ “ಹೊಟ್ಟಿ ತುಂಬಿದವಂಗ್ ಏನು ಗೊತ್ತ ಅನ್ನದ ಬೆಲಿ” ಅಂತಾ ಈ ಮಾತು ಈಗ ಸತ್ಯವೆನಿಸುತ್ತಿದೆ ಕೇಂದ್ರ ಸರ್ಕಾರ ದೊಡ್ಡ ದೊಡ್ಡ ಉದ್ಯಮಿಗಳ 12 ಲಕ್ಷ ಎನ್. ಪಿ.ಎ ಮನ್ನಾ ಮಾಡಿದಾಗ ಈ ಜನ ಎಲ್ಲಿ ಹೋಗಿದ್ದರು ಎಂದು ತಿಳಿಯುತ್ತಿಲ್ಲ.?ನನಗೆ ಶ್ರೀಮಂತರ ಬಗ್ಗೆ ಯಾವುದೇ ಸಿಟ್ಟಿಲ್ಲ ಆದರೆ ಬಡ ಜನರಿಗೆ ಅನ್ನ ನೀಡಲು ಹೊರಟಾಗ ಅದನ್ನೇಕೆ ನೀಡುತ್ತಿರಿ ಎಂದು ಪ್ರಶ್ನಿಸಿದಕ್ಕೆ ನೋವಿದೆ ನಮ್ಮಿಂದ ನಾಲ್ಕು ಜನರಿಗೆ ಸಹಾಯವಾಗದಿದ್ದರೂ ಪರವಾಗಿಲ್ಲ ಸಹಾಯ ಮಾಡುವ ಕೈಗಳನ್ನು ದೂರಬೇಡಿ ಮತ್ತು ದ್ವೇಷಿಸಬೇಡಿ ದಯವಿಟ್ಟು ಸಿದ್ಧಾಂತ ಮತ್ತು ಪಕ್ಷವನ್ನು ಪಕ್ಕಕ್ಕಿಟ್ಟು ಹಳ್ಳಿಗಳಲ್ಲಿರುವ ಹಸಿದ ಹೊಟ್ಟೆಗಳನ್ನು ಒಮ್ಮೆ ನೋಡಿ ದಾಸೋಹ ಪರಂಪರೆಯನ್ನು ಹೇಳಿಕೊಟ್ಟ ಬಸವಣ್ಣನ ನಾಡಿನಲ್ಲಿದ್ದುಕೊಂಡು ಬಡವರಿಗೆ ಅಕ್ಕಿ ನೀಡುವುದನ್ನ ವಿರೋಧಿಸಿ ಪಾಪಕ್ಕೆ ಗುರಿಯಾಗಬೇಡಿ.

-ದೇವರಾಜ ವನಗೇರಿ (ಇಳಕಲ್)
ಪತ್ರಿಕೋದ್ಯಮ ವಿದ್ಯಾರ್ಥಿ
ಮಾನಸ ಗಂಗೋತ್ರಿ,ಮೈಸೂರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ