ಲಿಂಗಸೂಗೂರ ತಾಲೂಕಿನ ಮಾನ್ಯ ಸಹಾಯಕ ಆಯುಕ್ತರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಇವರಿಗೆ ಮನವಿ ಸಲ್ಲಿಕೆ
ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಸಮೀಪವಿರುವ ಅಂಕಸಾಪುರ ಗ್ರಾಮದ ಹತ್ತಿರ ಪತ್ರಕರ್ತರ ಮೇಲೆ
ನಡೆದ ಭೀಕರ ಅಪಘಾತದ ನೆಪದಲ್ಲಿ ಕೊಲೆಯ ಸಂಚನ್ನು ರೂಪಿಸಿ
ದಿನಾಂಕ:- 4/6/2023 ರಾತ್ರಿ 11:00 ರಿಂದ 12:00 ಗಂಟೆ ಆಸು ಪಾಸಿನಲ್ಲಿ ಟಿಪ್ಪರ್ ಲಾರಿಯೊಂದು ಕರ್ನಾಟಕ
ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಹಾವೇರಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಲಲಿತಾ .ಬಿ.ಪಾಟೀಲ್ ಹಾಗೂ ಪ್ರಧಾನ
ಕಾರ್ಯದರ್ಶಿಗಳಾದ ಮಹಾಂತೇಶ ಗೌಡಗೇರಿ,ನಾಗರಾಜ್ ಬಾರ್ಕಿ ಹಾಗೂ ಮಾಲತೇಶ ಕುಂದ್ರಳ್ಳಿ ಇವರುಗಳು
ಪ್ರಯಾಣಿಸುತ್ತಿದ್ದ ವ್ಯಾಗನಾರ್ ಕಾರು ಸಂಪೂರ್ಣ ಎಡ ಭಾಗದಲ್ಲಿ ಚಲಿಸುತ್ತಿದ್ದರೂ ಕೂಡಾ ಟಿಪ್ಪರ್ ಲಾರಿಯೊಂದು ರಭಸವಾಗಿ
ಎದುರುಗಡೆಯಿಂದ ನುಗ್ಗಿದ ಪರಿಣಾಮ ಸ್ಥಳದಲ್ಲಿಯೇ ನಮ್ಮ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ
ಮಹಾಂತೇಶ್ ಗೌಡಗೇರಿ ಹಾಗೂ ಮಾಲತೇಶ ಕುಂದ್ರಳ್ಳಿಯವರು ಸ್ಥಳದಲ್ಲಿಯೇ ಸಾವನಪ್ಪಿದ್ದು ಉಳಿದಂತೆ ಜಿಲ್ಲಾಧ್ಯಕ್ಷರಾದ
ಶ್ರೀಮತಿ ಲಲಿತಾ ಬಿ.ಪಾಟೀಲ್ ಹಾಗೂ ನಾಗರಾಜ್ ಬಾರ್ಕಿ ಇವರುಗಳು ತೀವ್ರ ಗಾಯಗಳಿಂದ ದಾವಣಗೆರೆ ಎಸ್.ಎಸ್.
ಆಸ್ಪತ್ರೆಯಲ್ಲಿ ಪ್ರಸ್ತುತ ಚಿಕಿತ್ಸೆ ಹೊಂದಿ, ಚೇತರಿಸಿಕೊಳ್ಳುತ್ತಿದ್ದಾರೆ ರಾಣೆಬೆನ್ನೂರಿನ ಅನೇಕ ಪತ್ರಕರ್ತ ಮಿತ್ರರನ್ನು ಹಾಗೂ
ಸಾವನ್ನಪ್ಪಿರುವ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದ ಪತ್ರಕರ್ತ ಮಹಾಂತೇಶ್ ಗೌಡಗೇರಿ ಹಾಗೂ ಮಾಲತೇಶ
ಕುಂದಳ್ಳಿ ಕುಟುಂಬದವರ ಹಾಗೂ ಗ್ರಾಮಸ್ಥರನ್ನು ಈ ಘಟನೆ ಬಗ್ಗೆ ವಿಚಾರಿಸಿದಾಗ,ಇದೊಂದು ವ್ಯವಸ್ಥಿತ ಕೊಲೆ, ಕೊಲೆಗೆ ಹಳೆಯ ಟಿಪ್ಪರ್ ಲಾರಿಯನ್ನು ಬಳಸಿದ್ದು,ಕೆಲವೇ ದಿನಗಳ ಹಿಂದೆ ಈ ಹಳೆಯ ಟಿಪ್ಪರ್ ಲಾರಿಗೆ ವಿಮೆಯನ್ನು ಮಾಡಿಸಿ ಪೂರ್ವ ಯೋಜಿತವಾಗಿ ಈ ಕೊಲೆಯ ಸಂಚನ್ನು ರೂಪಿಸಿ ಪತ್ರಕರ್ತರು ಪ್ರಯಾಣಿಸುತ್ತಿದ್ದ ವ್ಯಾಗನಾರ್ ಕಾರು ಸಂಪೂರ್ಣವಾಗಿ ಎಡ ಭಾಗದಲ್ಲಿ ಚಲಿಸುತ್ತಿದ್ದರೂ ಉದ್ದೇಶಪೂರ್ವಕವಾಗಿ ದುರ್ಘಟನೆ ನಡೆದಿದ್ದು ಈ ಸಂಚಿನಲ್ಲಿ ಮರಳು ಮಾಫಿಯಾ ಹಾಗೂ ಎಫ್ ಸಿ ಐ ಅಕ್ಕಿ ಮಾಫಿಯಾದ ದುಷ್ಕರ್ಮಿಗಳು ಸ್ಪಷ್ಟವಾಗಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರುವ ಸಾಧ್ಯತೆ ಕಡಿಮೆ ಇದ್ದು ಈ ಪ್ರಕರಣವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸತ್ಯ ಹೊರ ತಂದು ದುಷ್ಕರ್ಮಿಗಳ ಎಡೆಮುರಿ ಕಟ್ಟಿ,ಕಾನೂನು ರೀತಿಯ ಕಠಿಣ ಕ್ರಮವಾಗಬೇಕೆಂದು ಹಾಗೂ ಈ ಘಟನೆಯಲ್ಲಿ ಮಡಿದಂತಹ ಪತ್ರಕರ್ತರ ಕುಟುಂಬಕ್ಕೆ ಹಾಗೂ ತೀವ್ರವಾಗಿ ಗಾಯಗೊಂಡ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಒದಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ,ಮಾನ್ಯ ಸಹಾಯಕ ಆಯುಕ್ತರು ಲಿಂಗಸೂಗೂರ ಇವರ ಮುಖಾಂತರ ಮನವಿ ಮಾಡಲಾಯಿತು
ಈ ಸಂದರ್ಭದಲ್ಲಿ ಲಿಂಗಸೂಗೂರಿನ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷರು ಶ್ರೀನಿವಾಸ ಮಧುಶ್ರೀ,ಉಪಾಧ್ಯಕ್ಷರಾದ ಕುಬೇರ ನಗನೂರ,ಪ್ರದಾನ ಕಾರ್ಯದರ್ಶಿ ಸಾದಿಕ್ ಶ್ಯಾಲಿ,ಅಬ್ದುಲ್ ರಶಿದ್ ತಾಲೂಕು ಖಜಾಂಚಿ,ಸಂಘದ ಸದಸ್ಯರು ಪಾಲ್ಗೊಂಡಿದ್ದರು.
-ಪುನೀತ್ ಕುಮಾರ್