ಪ್ರಸ್ತುತ ವೇಗದ ದಿನದಲ್ಲಿ ನಾವೆಲ್ಲರೂ ಹಲವಾರು ಒತ್ತಡಗಳಿಗೆ ಬಲಿಯಾಗುತ್ತಿದ್ದೇವೆ ನಾವೆಲ್ಲರೂ ಜೀವನದಲ್ಲಿ ಆರೋಗ್ಯವಾಗಿರಲು ಮತ್ತು ಸದಾ ಕ್ರಿಯಾಶೀಲರಾಗಿರಲು ಯೋಗಾಭ್ಯಾಸ ಬಹಳ ಸಹಾಯಕವಾಗುತ್ತದೆ ಸದ್ಯದ ಪ್ರಪಂಚದಲ್ಲಿ ಅತಿ ಹೆಚ್ಚು ಮನ್ನಣೆ ಗಳಿಸಿಕೊಳ್ಳುತ್ತಿರುವ ಯೋಗವನ್ನು ಆಧ್ಯಾತ್ಮಿಕ,ದೈಹಿಕ ಸಾಮರ್ಥ್ಯ,ಸಂಯಮ ಕಾಯ್ದುಕೊಳ್ಳಲು ಸಾಧನೆ ಮಾಡಲಾಗುವ ಉನ್ನತ ಜೀವನ ಶಿಕ್ಷಣ ಎಂದು ಗುರುತಿಸಲಾಗುತ್ತದೆ.
ಬಸವನ ಬಾಗೇವಾಡಿ ತಾಲ್ಲೂಕಿನ ವಡವಡಗಿ ಕ್ಲಸ್ಟರ್’ನ ಸರಕಾರಿ ಹಿರಿಯ ಪ್ರಾಥಮಿಕ ವಡವಡಗಿ ಬಡಾವಣೆ ಶಾಲೆಯಲ್ಲಿ 2023ನೇ ಸಾಲಿನ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು,ಪ್ರಭಾರಿ ಮುಖ್ಯ ಗುರುಮಾತೆಯರಾದ ಶ್ರೀಮತಿ ಎಲ್.ವಾಯ್. ಸಂಸಿ,ಸಹ ಶಿಕ್ಷಕರಾದ ಎಮ್.ಎಸ್.ನಾಡಗೌಡ,ಅತಿಥಿ ಶಿಕ್ಷಕರಾದ ಶ್ರೀ ಅಬ್ದುಲ್’ರಜಾಕ ಬಾಗವಾನ ಮತ್ತು ಶ್ರೀ ಸಿದ್ದು ದೊಡಮನಿ ಸೇರಿ ಎಲ್ಲರೂ ಕ್ರಿಯಾಶೀಲರಾಗಿ ಭಾಗವಹಿಸಿದ್ದರು.
ಸಹ ಶಿಕ್ಷಕರಾದ ಶ್ರೀ ಎಂ.ಎಸ್.ನಾಡಗೌಡ ಗುರುಗಳು ಯೋಗ ಬಲ್ಲವರಿಗೆ,ರೋಗ ಇಲ್ಲ ಎಂಬಂತೆ ಯೋಗದ ಅರ್ಥ ಯೋಗದ ಮಹತ್ವ,ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯ ಕುರಿತ ಸಂಪೂರ್ಣ ಮಾಹಿತಿಯನ್ನು ಮಕ್ಕಳಿಗೆ ತಿಳಿಸಿದರು.
ವರದಿ-ಉಸ್ಮಾನ ಬಾಗವಾನ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.