ಮೈಸೂರು:ಸಂಸದ ಪ್ರತಾಪ್ ಸಿಂಹ ರವರು ವೀರಶೈವ ಲಿಂಗಾಯತ ಸಮಾಜದ ಹಿರಿಯ ನಾಯಕರು ಹಾಗೂ ಹಾಲಿ ಸಚಿವರಾದ ಎಂ. ಬಿ.ಪಾಟೀಲ್ ಅವರ ಬಗ್ಗೆ ಮಾತನಾಡುವಾಗ ವೀರಶೈವ ಲಿಂಗಾಯತ ಸಮಾಜದ ಹೆಸರನ್ನು ಹಿಡಿದು ಹಗುರವಾಗಿ ಮಾತನಾಡಿರುವುದಕ್ಕೆ ಸಮಾಜದ ಯುವ ನಾಯಕ ತೇಜಸ್ವಿ ನಾಗಲಿಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಾಪ್ ಸಿಂಹರವರೆ ನೀವು ರಾಜಕಾರಣಿಗಳು ಪ್ರತಿಪಕ್ಷಗಳ ವಿರುದ್ಧ ಮಾತನಾಡುವುದು ಸಹಜ ಆದರೆ ವೈಯಕ್ತಿಕವಾಗಿ ವೀರಶೈವ ಲಿಂಗಾಯತ ಸಮಾಜದ ಜಾತಿ ಹಿಡಿದು ನೀವು ನಿಜವಾದ ವೀರಶೈವ ಲಿಂಗಾಯತರೇ ಎಂದು ನಮ್ಮ ಸಮಾಜದ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಮಾತನಾಡಿರುವುದು ಅಕ್ಷಮ್ಯ ಅಪರಾಧ ಎಂದು ತೇಜಸ್ವಿ ಹೇಳಿದ್ದಾರೆ ಕಳೆದ ಕೆಲವು ದಿನಗಳಿಂದ ತಾವು ವೀರಶೈವ ಲಿಂಗಾಯತ ಸಮಾಜದ ಹಿರಿಯ ನಾಯಕರುಗಳಾದ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ,ಜಗದೀಶ್ ಶೆಟ್ಟರ್ ರವರ ವಿರುದ್ದ ವಿನಾ ಕಾರಣ ಟೀಕಿಸುತ್ತಿರುವುದನ್ನು ವೀರಶೈವ ಲಿಂಗಾಯತರು ಸೂಕ್ಷ್ಮವಾಗಿ ಗಮನಿಸಿದ್ದಾರೆ.
ಕಳೆದ ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ನಾಯಕರುಗಳನ್ನು ನಿಮ್ಮ ಪಕ್ಷದ ವರಿಷ್ಠರು ನಡೆಸಿಕೊಂಡ ರೀತಿಗೆ ರಾಜ್ಯಾದ್ಯಂತ ವೀರಶೈವ ಬಂಧುಗಳು ತಕ್ಕ ಉತ್ತರ ನೀಡಿದ್ದಾರೆ.ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು ಇದೆ ರೀತಿ ಸಮಾಜದ ನಾಯಕರುಗಳ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ಮೈಸೂರು ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಬಂಧುಗಳು ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.ನಿಮ್ಮ ಈ ರೀತಿಯ ಹೇಳಿಕೆಗಳಿಂದ ವೀರಶೈವ ಲಿಂಗಾಯಿತ ಸಮುದಾಯಕ್ಕೆ ನೋವುಂಟಾಗಿದೆ ಆದ ಕಾರಣ ಕೂಡಲೇ ಸಮಾಜದ ನಾಯಕರೂ ಹಾಗೂ
ಸಚಿವರಾದ ಎಂ.ಬಿ.ಪಾಟೀಲ್ ರವರಲ್ಲಿ ಕ್ಷಮೆಯಾಚಿಸಬೇಕೆಂದು ಪ್ರತಾಪ್ ಸಿಂಹ ಅವರಿಗೆ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.