ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಿಕ್ಷಣ ಪ್ರೇಮಿ,ನೂತನ ಶಾಸಕರಿಂದ (RMSA) ಸರಕಾರಿ ಪ್ರೌಢಶಾಲೆ ಹಿರೇನಗನೂರು ಶಾಲಾ ಕೊಠಡಿ ಉದ್ಘಾಟನೆ


ಲಿಂಗಸೂಗೂರ ತಾಲೂಕಿನ
ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರು ಗ್ರಾಮದಲ್ಲಿ 2021-22 ನೇ ಸಾಲಿನ ಕೆಕೆಆರ್ಡಿಬಿ ಯೋಜನೆಯಲ್ಲಿ ನಿರ್ಮಾಣವಾದ ನೂತನ ಆರು ಶಾಲಾ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮವನ್ನು ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನಪ್ಪ ಡಿ ವಜ್ಜಲ್ ಅವರು ರಿಬ್ಬಿನ್ ಕತ್ತರಿಸುವ ಮೂಲಕ ನೂತನ ಶಾಲಾ ಕೊಠಡಿಗಳಿಗೆ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಪ್ರಥಮ ಆದ್ಯತೆಯನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಲಿಂಗಸುಗೂರು ಶಾಸಕರಾದ ಮಾನಪ್ಪ ದೊಡ್ಡಿ ವಜ್ಜಲ್ ಮಾತನಾಡಿದರು.
ರಾಜಕೀಯ ಹಿರಿಯರು ಆದ ಬಸವರಾಜ ಪಟೇಲ ಅನ್ವರಿ ಮಾತನಾಡಿ ಪಂಚಾಯತಿಯ ವ್ಯಾಪ್ತಿಯ ಗ್ರಾಮಗಳನ್ನು ಮರೆಯಬೇಡಿ ಎಂದು ಶಾಸಕರಿಗೆ ಈ ಕಿವಿ ಮಾತು ಹೇಳಿದರು.ಕುಡಿಯುವ ನೀರು,ಶೌಚಾಲಯ, ರಸ್ತೆ ಒಳಗೊಂಡು ಮೂಲಸೌಕರ್ಯಗಳನ್ನು ನೂತನ ಪ್ರೌಢ ಶಾಲೆಗೆ ಒದಗಿಸಲು ಶಾಸಕರಲ್ಲಿ ವಿನಂತಿಸಿ ಮಾತನಾಡಿದ ನಂತರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಿನ್ನಪ್ಪ ಕೊಟ್ರಿಕಿ ಜನತೆಯ ಅತ್ಯವಶ್ಯಕ ಬೇಡಿಕೆಗಳಿಗೆ ಸೂಕ್ತವಾದ ಸ್ಪಂದನೆ ನೀಡಲು ಶಾಸಕರಲ್ಲಿ ಕೇಳಿಕೊಂಡರು.ಕಾರ್ಯಕ್ರಮನ ಉದ್ದೇಶ ಮಾತನಾಡಿದ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಹನುಮಂತಪ್ಪ ಕೊಳಗೇರಿ ಮಾತನಾಡಿ ಯಾವ ದೇಶದಲ್ಲಿ ಶಿಕ್ಷಣದ ಮಟ್ಟ ಹೆಚ್ಚಾಗಿದೆಯೋ
ಆ ದೇಶ ಸಮೃದ್ಧಿಯಾಗಿರುತ್ತದೆ ಹಾಗೂ ಆ ದೇಶ ಸಂಪತ್ತಿನಿಂದ ಕೂಡಿರುತ್ತದೆ ಅದೇ ರೀತಿಯಾಗಿ ಭಾರತ ದೇಶದ ಸಂವಿಧಾನದ ಪ್ರಕಾರವಾಗಿ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿದೆ.6 ರಿಂದ16 ವಯಸ್ಸಿನ ಮಕ್ಕಳು ಹೆಣ್ಣಿರಲಿ ಗಂಡಿರಲಿ ಕಡ್ಡಾಯವಾಗಿ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.ಸಂವಿಧಾನದ ಆಶಯದಂತೆ ಇವತ್ತು ಸರಕಾರ
ಪ್ರತಿಯೊಂದು ಮಗು ಕೂಡಾ ಶಾಲೆಯಲ್ಲಿರಬೇಕು ಶಾಲೆಯಲ್ಲಿ ದಾಖಲಾಗಿರಬೇಕು ಒಳ್ಳೆಯ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎನ್ನುವಂತಹ ಹಿನ್ನೆಲೆಯಲ್ಲಿ ಸರಕಾರ ಉಚಿತ ಪಠ್ಯಪುಸ್ತಕ, ಉಚಿತ ಸಮವಸ್ತ್ರ,ನಂತರ ಬೆಳಗ್ಗೆ ಕ್ಷೀರ ಭಾಗ್ಯ ಹಾಗೂ ಮಧ್ಯಾಹ್ನದ ಬಿಸಿ ಊಟ ಯೋಜನೆ,ಸೈಕಲ್ ಭಾಗ್ಯ,
ಶೂ ಸಾಕ್ಸ್ ಇವೆಲ್ಲವನ್ನೂ ಯಾತಕ್ಕೆ ಕೊಡುತ್ತದೆ ಎಂದು ಕೇಳಿದರೆ ಎಲ್ಲಾ ಮಕ್ಕಳು ಬಡವರಾಗಿರಲಿ ಶ್ರೀಮಂತರಾಗಿರಲಿ ಬಡವ ಬಲ್ಲಿದ ಹೆಣ್ಣುಗಂಡು ಎಂಬ ಭೇದವಿಲ್ಲದೆ ಎಲ್ಲಾ ಮಕ್ಕಳು ಕೂಡಾ ಶಾಲೆಯಲ್ಲಿ ದಾಖಲಾಗಿ ಉನ್ನತ ಶಿಕ್ಷಣ ಪಡೆಯಬೇಕು ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮ ಇದಾಗಿದೆ. ಎಂದು ಹೇಳಿದರು ಹಿರೇನಗನೂರು ಗ್ರಾಮದಲ್ಲಿ ಇಲ್ಲಿಯವರೆಗೂ ಶಾಲೆಯ ಕೊಠಡಿಗಳ ಕೊರತೆ ಇತ್ತು ಅದಕ್ಕೆ ಮಾನ್ಯ ಶಾಸಕರು ಇವತ್ತು ಉದ್ಘಾಟನೆ ಮಾಡಿ ಮಕ್ಕಳಿಗೆ ಓದಲಿಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಆ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರು ತಾಯಂದಿರಲ್ಲಿ ನಾನು ವಿನಂತಿ ಮಾಡುತ್ತೇನೆ ಎಲ್ಲಾ ಮಕ್ಕಳನ್ನು ಕಡ್ಡಾಯವಾಗಿ ಮೊದಲು ಶಾಲೆಗೆ ಕಳಿಸಬೇಕು ಯಾವ ಮಗು ಕೂಡ ಶಾಲೆಯಿಂದ ಹಾಗೂ ಶಿಕ್ಷಣದಿಂದ ವಂಚಿತರಾಗಬಾರದು ನಮ್ಮ ಶಿಕ್ಷಕರು ಒಳ್ಳೆಯ ರೀತಿಯಲ್ಲಿ ಶಿಕ್ಷಣವನ್ನು ನೀಡಿ ಮಕ್ಕಳ ಒಂದು ಶಿಕ್ಷಣದ ಗುಣಮಟ್ಟ ಬೆಳೆಸಲಿಕ್ಕೆ ತಾವು ಕೂಡಾ ಶ್ರಮವಹಿಸಬೇಕೆಂದು ಹೇಳಿದರು. ಹಿರೇನಗನೂರು ಚಿಕ್ಕನಟ್ಟಿ ಗ್ರಾಮದ ಯುವಕರು ಗ್ರಾಮದ ಅನೇಕ ಸಮಸ್ಯೆಗಳನ್ನು ಬರೆದು ಶಾಸಕರಿಗೆ ಮನವಿ ಪತ್ರ ನೀಡಿದರು.
ಕಾರ್ಯಕ್ರಮದಲ್ಲಿ ಚೆನ್ನಪ್ಪ ಕೊಡ್ರಿಕಿ ಎಸ್ ಡಿ ಎಂ ಸಿ ಅಧ್ಯಕ್ಷರು,ಭೂದಾನಿಗಳಾದ ಶ್ರೀಮತಿ ಶಂಕರಮ್ಮಗಂಡ ದಿವಂಗತ ಗೌಡ ರೆಡ್ಡಪ್ಪ ಗೌಡ,ಬಸವರಾಜಪ್ಪ ಕುರುಗೋಡು, ಪ್ರೌಢಶಾಲೆಯ ಮುಖ್ಯ ಗುರುಗಳು ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ,ಗ್ರಾ.ಪಂ ಸದಸ್ಯರಾದ ದಾದಾಪೀರ್ ಬೊಮ್ಮನಹಳ್ಳಿ,ನಿಂಗಪ್ಪ ಹುಬ್ಬಳ್ಳಿ,ಶಿವನಗೌಡ ನಗರ,ಎಸ್ ಡಿ ಎಂ ಸಿ ಅಧ್ಯಕ್ಷ ದೇವಪ್ಪ ಮಿಂಚೇರಿ,ತಿಮ್ಮನಗೌಡ ಪಟೇಲ್.,ಗೋಪಾಲ್ ರೆಡ್ಡಿ
ಎ ಇ ಇ.
ಪಿ ಡಿ ಓ
ಜ್ಯೋತಿ ಡಿ ಭವಾನಿ ಆನ್ವರಿ,ಶಂಕ್ರಪ್ಪ ಎನ್ ಸಕ್ರಿ ಮುಖ್ಯ ಗುರುಗಳು,ಆನ್ವರಿ
ಮೌನದ್ದೀನ್ ಬೂದಿನಾಳ ಶಿಕ್ಷಣ ಪ್ರೇಮಿಗಳು,ಶಂಕರಗೌಡ ಬಳಗನೂರ್, ಹನುಮಂತರೆಡ್ಡಿ ಬೋವಿ ಹಾಗೂ ಪ್ರೌಢಶಾಲೆಯ ಮುಖ್ಯ ಗುರುಗಳು ಮತ್ತು ಸಹ ಶಿಕ್ಷಕರು ಗ್ರಾಮದ ಹಿರಿಯರು ಶಾಲಾ ಮಕ್ಕಳು ಭಾಗವಹಿಸಿದ್ದರು.
ವರದಿ-ಪುನೀತಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ