ಯಾದಗಿರಿ:ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಯೋಗಾ ಮಾಡುವುದರಿಂದ ಅನಿವಾರ್ಯ ಎಂದು ಶ್ರೀಮತಿ ರೇಣುಕಾ ಪಾಟೀಲ್ ಬಿ.ಆರ್.ಸಿ.ಸಿ ಸಲಹೆ ನೀಡಿದರು.
ಶ್ರೀ ಸೂಗುರೇಶ್ವರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳಿಗ್ಗೆ ಒಂಬತ್ತನೇ ಅಂತರಾಷ್ಟೀಯ ಯೋಗ ದಿನಾಚರಣೆ
ಆಯೋಜಿಸಲಾಗಿತ್ತು ಜೂನ್ 21 ಬಂದಾಗ ಮಾತ್ರ ಆಚರಿಸದೇ ದಿನ ನಿತ್ಯ ಯೋಗ ಮಾಡಿದಾಗ ಮನುಷ್ಯ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿ ನೆಮ್ಮದಿ ಜೀವನ ಸಾಗಿಸುಲು ಸಾಧ್ಯ ಎಂದರು.
ಯೋಗ ಶಿಕ್ಷಕರಾದ ಅಂಬ್ರೆಶ್ ದಿಗ್ಗಿ ಅವರು ಯೋಗ ಅಭ್ಯಾಸ ಮಕ್ಕಳಿಗೆ ಹೇಳಿ ಕೊಟ್ಟರು ಇದೆ ಸಂದರ್ಭದಲ್ಲಿ ಶ್ರೀಮತಿ ರೇಣುಕಾ ಪಾಟೀಲ್ ಬಿ.ಆರ್.ಸಿ.ಸಿ.ಶಹಾಪುರ, ವೀರಭದ್ರಯ್ಯ ಸಿ.ಆರ್.ಪಿ ದಕ್ಷಿಣ ವಲಯ ಆಯೋಜಕರು ಹಾಗೂ ಯೋಗ ಶಿಕ್ಷಕರಾದ ಅಂಬ್ರೆಶ್ ದಿಗ್ಗಿ,ಸೂಗುರೇಶ್ವರ ಶಾಲೆಯ ಮುಖ್ಯ ಗುರುಗಳಾದ ಕುಮಾರಿ.ರೂಪಾ ಪಾಟೀಲ್,ಶಾಲಾ ಸಿಬ್ಬಂದಿ ಶೈಲಜಾ, ಶಾಂತಾ,ನಾಗರತ್ನ,ವಿಜಯಲಕ್ಷ್ಮಿ,ಶೋಭಾ, ತ್ರಿವೇಣಿ,ಲಕ್ಷ್ಮಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ್