ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೇನಕನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೀವನ ಶಾಲೆ ಕಾರ್ಯಕ್ರಮ ಆಯೋಜಿಸಿತ್ತು ಈ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿಬಾ ಜಿಲಿಯನ್ ಶಹಾಪುರ,ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಗೂ ಮಕ್ಕಳ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕೆಂದು ತಿಳಿಸಿದರು ಜ್ಞಾನ ಸಂಪಾದನೆ ಮತ್ತು ವಿದ್ಯಾಭ್ಯಾಸವನ್ನು ಇಷ್ಟ ಪಟ್ಟು ಮಾಡಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಒಳ್ಳೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಜೀವನ ಶಾಲೆಯ ಕಾರ್ಯಕ್ರಮವು ಮಕ್ಕಳಲ್ಲಿ ಮೌಲ್ಯವನ್ನು ಕಲಿಸುವಂತಹ ಐದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಕೊಳ್ಳೂರು,ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಕನ್ನೆಕೊಳ್ಳೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉರ್ದು ಮಾಧ್ಯಮ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೇನಕನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಿಂದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ,ಮಕ್ಕಳು ಗುರು ಹಿರಿಯರಿಗೆ ಗೌರವಿಸುವುದು ಸಹಬಾಳ್ವೆಯಿಂದ ಇರುವುದು ಪರಿಸರ ಸಂರಕ್ಷಣೆ ಮಾಡುವುದು ಮತ್ತು ಮುಂತಾದ ವಿಷಯಗಳ ಬಗ್ಗೆ ಕಲಿಸುವುದು ಈ ಕಾರ್ಯಕ್ರಮದ ಉದ್ದೇಶ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯಿಂದ ಸ್ಮಾರ್ಟ್ ಟಿವಿಯನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಲಬಾವಿ ಮಕ್ಕಳಿಗಾಗಿ ಶಾಲೆಯ ಮುಖ್ಯ ಗುರುಗಳಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ರೋಮಾ ಆರ್ ಪ್ರೋ ಗ್ರಾಮಕೋ ಅಡಿನೇಟರ್ ಸುಪ್ರೀಮ್ ಜಾಯಿ ಫೈನಾನ್ಸ್ ಕೊ-ಅಡಿನೇಟರ್ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಗುರುಗಳು ಮಲ್ಲಣ್ಣ ಸರ್,ಹಾಗೂ ಸಿಹಿ ಶಿಕ್ಷಕರು ಎಸ್.ಡಿ.ಎಂ.ಸಿ.ಸದಸ್ಯರು ಮಕ್ಕಳು ಹಾಗೂ ಪಾಲಕರು ಮತ್ತು ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ