ಕಲಬುರಗಿ/ಯಡ್ರಾಮಿ:ಕೊಣ್ಣೂರ ತಾಂಡದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ ಬಿಳವಾರ ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ ರಾಠೋಡ್ ಗಂಭೀರ ಆರೋಪ ಮಾಡಿದ್ದಾರೆ.
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೊಣ್ಣೂರು ತಾಂಡಾದಲ್ಲಿ ಇದುವರೆಗೂ ಒಂದು ಸಾರ್ವಜನಿಕ ಶೌಚಾಲಯ ಇರುವುದಿಲ್ಲ ಇದು ನಾಚಿಕೆಗೇಡಿತನದ ಸಂಗತಿ.ಹಲವಾರು ಜನಪ್ರತಿನಿಧಿಗಳು ನಮ್ಮ ಗ್ರಾಮಕ್ಕೆ ಬಂದು ಬಿಲ್ಡಪ್ ಕೊಟ್ಟು ಹೋಗಿದ್ದಾರೆ ಹೊರತು ನಮ್ಮ ಗ್ರಾಮದಲ್ಲಿ ಸಮಗ್ರ ರೀತಿಯಿಂದ ಯಾವುದೇ ರೀತಿಯ ಆಧುನಿಕ ಬದಲಾವಣೆಗಳು ಆಗಿಲ್ಲ ಸರಿಯಾದ ನೀರಿನ ಸೌಲಭ್ಯವಿಲ್ಲ ನಮ್ಮ ಗ್ರಾಮಕ್ಕೆ ಬಸ್ಸಿನ ಸೌಕರ್ಯವಿಲ್ಲ ಐದು ಕಿಲೋಮೀಟರ್ ಬಿಳವಾರ ಗ್ರಾಮಕ್ಕೆ ಹಿರಿಯರು,ಕಿರಿಯರು, ಶಾಲಾ ವಿದ್ಯಾರ್ಥಿಗಳು ನಡೆದುಕೊಂಡೆ ಹೋಗುತ್ತಾರೆ ಇಂಥ ಸಮಸ್ಯೆಗಳು ನಾವು ಯಾರ ಮುಂದೆ ಹೇಳಬೇಕ್ರಿ ನಮ್ಮ ಹಳ್ಳಿಯ ಗ್ರಾಮಸ್ಥರ ಗೋಳು ಕೇಳುವರು ಯಾರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿದ್ದೆಯ ಮಂಪರಿನಲ್ಲಿದ್ದಾರೆ ತಾಲೂಕಿನ ಶಾಸಕರು ಕೊಣ್ಣೂರು ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಕಲ್ಪಿಸುವರೋ ಇಲ್ಲವೋ ಕಾದುನೋಡಬೇಕಿದೆ ಎಂದು ಬಿಳವಾರ ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್ ರಾಠೋಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.