ಹನೂರು:ಪಟ್ಟಣದ ಕನಕದಾಸ ಸಮುದಾಯ ಭವನದಲ್ಲಿ ಕುರುಬ ಸಮಾಜದ ವತಿಯಿಂದ ಶಾಸಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಸರ್ವ ಜನಾಂಗದವರು ನನ್ನ ನಂಬಿ ಈ ಬಾರಿ ಕೈ ಹಿಡಿದಿದ್ದಾರೆ ಈ ನಂಬಿಕೆಗೆ ನಾನು ಋಣಿಯಾಗಿರುತ್ತೇನೆ ಅಲ್ಲದೇ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಈಗಾಗಲೇ ನಾನು ಸಂಬಂಧ ಪಟ್ಟವರ ಗಮನಕ್ಕೆ ತಂದಿದ್ದು ಸದ್ಯದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಅದಕ್ಕೆ ತಮ್ಮೆಲ್ಲರ ಸಹಕಾರ ಬೇಕು ಅಲ್ಲದೇ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸಲು ಶ್ರಮಿಸಿ ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದರು.
ಇದೆ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರಾದ ಶಿವಪ್ಪ, ಶಿವರಾಮ್,ಶಿವಮೂರ್ತಿ,ಜಗನ್ನಾಥ, ಮಲ್ಲು,ನಾಗರಾಜು,ವೆಂಕಟೇಗೌಡ, ಪುಟ್ಟಸ್ವಾಮಿ,ಯಾರಂಬಾಡಿ ಹುಚ್ಚಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್