ಬಸ್ ಗಾಗಿ ಕಾಯುತ್ತಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ಮುಂದೆ ನಿಂತು ನಮ್ಮನ್ನು ಕರೆದುಕೊಂಡು ಹೋಗಿ ಕಂಡಕ್ಟ್ರೆ ನಾವು ಶಾಲೆ-ಕಾಲೇಜಿಗೆ ಹೋಗಿ ಶಿಕ್ಷಣ ಕಲಿಬೇಕು ಅನ್ನೋ ಮಾತುಗಳು ಇವತ್ತು ಬಹು ದೊಡ್ಡ ಧ್ವನಿಯಲ್ಲಿ ಕೇಳಿದಂತೆ ಇತ್ತು.
ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಹಲವಾರು ಗ್ರಾಮದ ಹಳ್ಳಿಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಬರುತಿದ್ದು ಆದರೆ ಎರಡೇ ಗ್ರಾಮದಲ್ಲಿ ಬಸ್ ತುಂಬಿಕೊಂಡು ಬರುತ್ತಿದ್ದು ಉಳಿದ ಗ್ರಾಮದ ವಿದ್ಯಾರ್ಥಿಗಳು ಕಾಲೇಜಿಗೆ ಸರಿಯಾದ ಸಮಯಕ್ಕೆ ಕಾಲೇಜುಗೆ ಹೋಗದ ಕಾರಣ ಬಸ್ ತಡೆದು ನಮ್ಮನ್ನು ಕರೆದು ಕೊಂಡು ಹೋಗಿ ಅಂತ ಬಸ್ ಮುಂದೆ ನಿಂತು ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಸ್ಯೆ ದಿನಾಲೂ ನಡೆಯುತ್ತಿದ್ದು ಸಂಬಂಧ ಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇನ್ನೂ ಬಗೆಹರಿಯದ ಸಮಸ್ಯೆಯಾಗಿ ನಾಗರಹಾಳ ಮತ್ತು ಆನೆಹೊಸೂರು ಮಾರ್ಗವಾಗಿ ಲಿಂಗಸೂಗೂರ ಪಟ್ಟಣಕ್ಕೆ ಬರುವ ಎಲ್ಲಾ ಹಳ್ಳಿಗಳ ವಿದ್ಯಾರ್ಥಿಗಳ ಮತ್ತು ಪೋಷಕರ ಗೋಳು ಕೇಳಿದರೂ ಕೂಡಾ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಅಂತ ಹೇಳಬಹುದು,ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಿಂಗಸೂಗೂರು ಪಟ್ಟಣಕ್ಕೆ ಬರುವ ನಾಗರಾಳ,ನರಕಲದಿನ್ನಿ,ಚಿತ್ತಾಪುರ, ಬೆಂಡೋಣಿ,ಆನೆಹೊಸೂರು,ನೀರಲಕೇರಿ ಮಾರ್ಗದಲ್ಲಿ ಸುಮಾರು ನೂರಾರು ಕಾಲೇಜು ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಪ್ರತಿದಿನ ಬಸ್ ಮೂಲಕ ಲಿಂಗಸೂಗೂರ ಕಾಲೇಜಿಗೆ ಬರುತ್ತಿದ್ದು,ಆದರೆ ಸರಿಯಾದ ಸಮಯಕ್ಕೆ ಬಸ್ ಇಲ್ಲದ ಕಾರಣ,ಕಾಲೇಜ್ ಗೆ ತಡವಾಗಿ ಹೋಗುತ್ತಿದ್ದು ಇದರಿಂದ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲು ಆಗದೆ ಇದರಿಂದ ಶಿಕ್ಷಕರಿಗೂ ನಮ್ಮಿಂದ ದೊಡ್ಡ ಸಮಸ್ಯೆ ಆಗಿದೆ ಹಾಗೂ ವಿದ್ಯಾಭ್ಯಾಸ ಕುಂಠಿತವಾಗಿ ಸರಿಯಾಗಿ ನಮ್ಮ ಮಕ್ಕಳು ಶಿಕ್ಷಣಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಪೋಷಕರು ಚಿಂತೆಯಲ್ಲಿದ್ದಾರೆ.
ಪ್ರತಿ ವರ್ಷ ಹೆಚ್ಚಿನ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಬರುತ್ತಿದ್ದ ಕಾರಣ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸಬೇಕೆಂದು ಒತ್ತಾಯ ಮಾಡಿದರು ಕೂಡಾ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾಲೇಜು ವಿದ್ಯಾರ್ಥಿಗಳ ಪಾಲಕರು ಆರೋಪ ಮಾಡಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಿರುವ ಹಿನ್ನಲೆ ಗ್ರಾಮದ ಮಹಿಳೆಯರು ಇವಾಗ ಬಸ್ ನಲ್ಲೆ ಹೆಚ್ಚು ಪ್ರಯಾಣ ಮಾಡುತ್ತಿದ್ದು ಇದಕ್ಕೆ ಕಾರಣವಾಗಿದೆ ಇದರಿಂದ ನಾವು ಕಾಲೇಜ್ ಗೆ ಹೋಗಲು ತುಂಬಾ ಸಮಸ್ಯೆಗಳು ಆಗ್ತಾ ಇದಾವೆ ಅಂತ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು
ಉಚಿತ ಬಸ್ ಪ್ರಯಾಣ ಬಿಟ್ರೆ ಸಾಲದು ಯಾರಿಗೂ ತೊಂದರೆ ಆಗದಂತೆ ಹೆಚ್ಚಿನ ಬಸ್ಸಿನ ವ್ಯವಸ್ಥೆ ಕೂಡಾ ಸರ್ಕಾರ ಮಾಡಬೇಕು ಅಂದಾಗ ಮಾತ್ರ್ ನಿಮ್ಮ ಯೋಜನೆಗಳು ಯಶಸ್ವಿ ಆಗುತ್ತೆ ಅಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಕ್ಕೆ ಮನವಿ ಮಾಡಿದರು ಏನೇ ಆಗ್ಲಿ ಈ ಸಮಸ್ಯೆಗೆ ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಸ್ಪಂದನೆ ಮಾಡಿ ಸಮಸ್ಯೆ ಬಗೆಹರಿಸುತ್ತಾರಾ ಕಾದು ನೋಡಬೇಕು…
ವರದಿ:ಪುನೀತಕುಮಾರ