ದಾವಣಗೆರೆ:ಅನಾದಿಕಾಲದಿಂದಲೂ ಸಿನಿಮಾ ಕ್ಷೇತ್ರ ಕನ್ನಡ ಸಾಹಿತಿಗಳ ಸಾಹಿತ್ಯ ರಚನೆಯಿಂದ ಅತ್ಯಂತ ಶ್ರೀಮಂತ ವಾಗಿದೆ.ಕವಿ ಬರಹದಿಂದ ಸಿನಿಮಾ ಬೆಳೆದಿದೆ ಎಂದು ಅಂಚೆ ಇಲಾಖೆಯ ಶ್ರೀ ಶರತ್ ಎಚ್ ಎಸ್ ಅವರು ಹೇಳಿದರು ಸಂತೆಬೆನ್ನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಸದ ಮಾತು ಸಾಹಿತ್ಯದ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಸಿನಿಮಾ ರಂಗದಲ್ಲಿ ಕನ್ನಡ ಸಾಹಿತ್ಯ ಎನ್ನುವ ವಿಷಯ ಕುರಿತು ಉಪನ್ಯಾಸ ನೀಡಿದರು
ಕನ್ನಡ ಸಾಹಿತ್ಯ ಇಲ್ಲದೇ ಸಿನಿಮಾ ರಂಗವನ್ನು ಊಹಿಸಿಕೊಳ್ಳಲೂ ಸಾಧವಿಲ್ಲ ಮೂಕಿ ಚಿತ್ರಗಳ ಕಾಲದ ನಂತರ ಸಂಭಾಷಣೆ ಬಂದಾಗಿನಿಂದ ಅದರ ಗತಿ ಬದಲಾಯಿತು.
ಕು.ರಾ.ಸೀತಾರಾಮ ಶಾಸ್ತ್ರಿ,ಕರೀಮ್ ಖಾನರಿಂದ ಮೊದಲುಗೊಂಡು ಚಿ.ಉದಯಶಂಕರ್,ಆರ್ ಎನ್ ಜಯಗೋಪಾಲ್,ಭಂಗಿರಂಗ,ಕಲ್ಯಾಣ್, ಮನೋಹರ್,ನಾಗೇಂದ್ರ ಪ್ರಸಾದ್ ಹಂಸಲೇಖ ವರೆಗೂ ಸಂಗೀತ ಸಿನಿಮಾದಲ್ಲಿ ಮೆರೆಯಿತು.
ಹಾಡುಗಳಲ್ಲಿ ವಿಶೇಷತೆ ತರಲು ಕುವೆಂಪು, ಬೇಂದ್ರೆ, ಜಿಪಿರಾಜರತ್ನಂ, ದೊರಂಗೌ, ಜಿ.ಎಸ್ ಶಿವರುದ್ರಪ್ಪ , ನರಸಿಂಹ ಸ್ವಾಮಿ, ನಾಗತಿಹಳ್ಳಿ ಮುಂತಾದ ಸಾಹಿತಿ ಗಳ ಕವಿತೆಗಳು ಹಾಡಾಗಿ ಜನಪ್ರಿಯತೆ ಗಳಿಸಿದವು.
ದೋಣಿ ಸಾಗಲಿ
ಇಳಿದು ಬಾ ತಾಯಿ
ನೀ ಹೀಂಗ ನೋಡಬ್ಯಾಡ
ಕಾಣದ ಕಡಲಿಗೆ
…ಮುಂತಾದ ಹಾಡುಗಳು ಕನ್ನಡ ಪ್ರೇಕ್ಷಕರು ಮರೆಯಲಾರರು.
ಕತೆ, ಕಾದಂಬರಿಗಳು ಸಿನಿಮಾದಲ್ಲಿ ಬಳಕೆಯಾದವು. ನಾಗರಹಾವು, ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಮುಂತಾದ ಅನರ್ಘ್ಯ ಚಿತ್ರರತ್ನಗಳು ಇತಿಹಾಸ ನಿರ್ಮಿಸಿದ್ದು ಕನ್ನಡ ಪ್ರೇಕ್ಷಕರು ಸದಾ ಸ್ಮರಿಸುತ್ತಾರೆ.
ತರಾಸು, ಟಿಕೆ ರಾಮರಾವ್, ಎಂಕೆ ಇಂದಿರಾ, ಸಾಯಿಸುತೆ, ಸಾರಾ ಅಬೂಬಕ್ಕರ್ , ಮೊಯಿಲಿ, ನಾ.ಡಿಸೋಜ ಇತ್ಯಾದಿ ಕತೆಗಾರ- ಕಾದಂಬರಿಕಾರರ ಕೃತಿಗಳು ಸಿನಿ ಆಗಿ ಜನ ಮಾನಸದಲ್ಲಿ ಉಳಿದವು.
ಇಂದಿನ ಯುವ ಪೀಳಿಗೆ ಅಪಭ್ರಂಶ ಪದಪೋಣಿಸುವಿಕೆಯನ್ನೇ ಸಾಹಿತ್ಯ ಅಂದುಕೊಂಡು ಶುದ್ಧ ಸಾಹಿತ್ಯ ಮರೆತಿವೆ.
ಡಾ.ರಾಜ್ ಕುಮಾರ್ ಅವರ ಸಿನಿಮಾ ಹತ್ತಾದರೂ ಇಂದಿನ ಮಕ್ಕಳು ನೋಡಿದರೆ ಅಪ್ಪಟ ಕನ್ನಡ ಭಾಷೆ ಕಲಿತಾರು ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಗಾಯಕರಾದ ಗಫಾರ್, ಸಿದ್ದಪ್ಪ ,ಮಾರುತಿ ಕವಿಗಳ ಕವಿತೆಗಳು ಸಿನಿಮಾ ಕ್ಕೆ ಬಳಕೆಯಾದ ಹಾಡುಗಳನ್ನು ಹಾಡಿ ರಂಜಿಸಿದರು.
ಅಂಚೆ ಇಲಾಖೆ ಪ್ರಾಯೋಜಕತ್ವ ವಹಿಸಿಕೊಂಡಿತ್ತು.
ತೀರ್ಥ ಪ್ರಕಾಶ್, ಶಿವಮೂರ್ತಿ, ವೀರೇಶ್ ಪ್ರಸಾದ್ , ಅಬ್ದುಲ್ ವಾಹಿದ್, ಮನಸೂರು , ಕಮಲಜ್ಜಿ , ಜಕ್ಕಲಿಶಿವಮೂರ್ತಿ, ಇನ್ಶುರೆನ್ಸ್ ಮಂಜು , ಚಿಕ್ಕಬೆನ್ನೂರು ರುದ್ರೇಶ್, ಜಗನ್ನಾಥಾಚಾರ್, ಮಂಜುಳಾ, ನಾಗೇಂದ್ರಪ್ಪ ಮತ್ತಿತರರು ಹಾಜರಿದ್ದರು. ಸಾಹಿತಿ ಫೈಜ್ನಟ್ರಾಜ್ ಕಾರ್ಯಕ್ರಮ ನಡೆಸಿಕೊಟ್ಟರು.
ವರದಿ-ಮಂಜಪ್ಪ ಟಿ.ಆರ್.