ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ನವೋದಯ ಗ್ರಾಮೀಣ ಅಭಿವೃದ್ದಿ ಮತ್ತು ಶೈಕ್ಷಣಿಕ ಸಂಸ್ಥೆಯು ಬೆಂಗಳೂರಿನ ಪ್ರಖ್ಯಾತ ಪ್ರತಿಷ್ಠಿತ ಸಪ್ತಗಿರಿ ಆಸ್ಪತ್ರೆ ಅವರ ಸಹಯೋಗದೊಂದಿಗೆ 25.06.2023 ರಂದು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ಮಟ್ಟದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.ಈ ಶಿಬಿರವನ್ನು ಎಲ್ಲರೊಂದಿಗೆ ಸಸಿ ನೆಡುವುದರ ಮೂಲಕ ಚಾಲನೆ ನೀಡಲಾಯಿತು.ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸುಮಾರು 250 ಕ್ಕೂ ಹೆಚ್ಚು ಅನಾರೋಗ್ಯ ಪೀಡಿತ ಶಿಬಿರಾರ್ಥಿಗಳು ಭಾಗವಹಿಸಿದ್ದರು.ಇದರಲ್ಲಿ ವಯೋವೃದ್ಧರು,ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು ಶಿಬಿರದೊಳಗೆ ನರರೋಗಕ್ಕೆ,ಥೈರಾಯಿಡ್,ಕೀಲು ನೋವು , ಸಂಧಿವಾತ,ಸ್ತ್ರೀ ರೋಗ ಕಿಡ್ನಿ ವೈಫಲ್ಯಕ್ಕೆ ಅಸ್ತಮಾ,ECG,ಶುಗರ್,BP ಇನ್ನೂ ಇತರ ಸಾಮಾನ್ಯ ಕಾಯಿಲೆಗಳಿಗೆ ನುರಿತ ವೈದ್ಯರು ಉಚಿತ ಆರೋಗ್ಯ ತಪಾಸಣಾ ಮಾಡಿದರು ಜೊತೆಗೆ ಸಂಬಂದಿಸಿದ ಹಾಗೆ ಮಾತ್ರೆಗಳನ್ನು ಸಹ ನೀಡಿದರು ಆಪರೇಶನ್ ಹಂತದ ದೊಡ್ಡ ಚಿಕಿತ್ಸೆಗಾಗಿ ಬೆಂಗಳೂರು ತಮ್ಮ ಸಪ್ತಗಿರಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿ ತಮ್ಮ ಚಿಕಿತ್ಸೆಗೆ ಸಹಕರಿಸುತ್ತೇವೆ ಎಂದರು.ಈ ಸಂದರ್ಭದಲ್ಲಿ ಸಪ್ತಗಿರಿ ಆಸ್ಪತ್ರೆ ಯ ವೈದ್ಯಾಧಿಕಾರಿಗಳಾದ ಸಚಿನ,ಅಭಿಷೇಕ್,ಶ್ರೀನಿವಾಸ ಮತ್ತು ನಿಂಗರಾಜು ಮತ್ತು ಭರತ್ ವಿನಯ್ ಪ್ರವೀಣ ಮತ್ತು ಪ್ರಸಾದ್ ಮತ್ತು ಸಂಸ್ಥೆಯ ಅಧ್ಯಕ್ಷರನ್ನು ಒಳಗೊಂಡಂತೆ ಎಲ್ಲಾ ಪದಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮದ ಹಿರಿಯರು ಮತ್ತು ಯುವಕ ಮುಖಂಡರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.