ಕೊಪ್ಪಳ:ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ವಿಜೇತರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರು ನಡೆದಾಡುವ ದೇವರು ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳನ್ನು ನಿನ್ನೆ ಭೇಟಿ ಮಾಡಿ ಆರ್ಶೀವಾದ ಪಡೆದರು.
ಈ ಸಂದರ್ಭದಲ್ಲಿ ಕೊಪ್ಪಳದ ಪರಮ ಪೂಜ್ಯರಾದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ ಉತ್ತರ ವಲಯದ ಪರಿಸರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಮರೇಗೌಡ ಮಲ್ಲಾಪೂರ ಅವರ ಕಾರ್ಯವನ್ನು ಗುರುತಿಸಿ ಕರ್ನಾಟಕ ಸರ್ಕಾರ ಪರಿಸರ ರಾಜ್ಯ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ,ಸರ್ಕಾರ ಇಂಥಹ ಕಾರ್ಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು,ಜಗತ್ತಿಗೆ ಪ್ರಕೃತಿ ಮಾತೆಯ ಕೊಡುಗೆ ಅಪಾರವಾದದ್ದು, ಪ್ರಕೃತಿಮಾತೆಯನ್ನು ನಾವುಗಳೆಲ್ಲರೂ ಉಳಿಸಿ ಬೆಳಸಿದರೆ ಪ್ರಕೃತಿ ಮಾತೆಯು ನಮ್ಮನ್ನು ಜೀವನದುದ್ದಕ್ಕೂ ಸಲಹುತ್ತಾಳೆ.
ಇಂತಹ ಒಂದು ಕಾರ್ಯದಲ್ಲಿ ಕರ್ನಾಟಕದ ಉತ್ತರ ವಲಯದಲ್ಲಿ ವನಸಿರಿ ಫೌಂಡೇಶನ್ ಮೂಲಕ ತಂಡವನ್ನು ಕಟ್ಟಿಕೊಂಡು ಗಿಡಮರಗಳನ್ನು ರಕ್ಷಣೆ ಮಾಡುತ್ತಿರುವ ಸಿಂಧನೂರಿನ ಅಮರೇಗೌಡ ಮಲ್ಲಾಪೂರ ಅವರಿಗೆ ಶುಭವಾಗಲಿ ಈ ಕಾರ್ಯ ಹೀಗೆಯೇ ಸದಾಕಾಲ ನಡೆಯಲಿ ಗಿಡಮರಗಳನ್ನು ಹೆಚ್ಚು-ಹೆಚ್ಚು ಬೆಳಸಲಿ ಆ ಗವಿಸಿದ್ದೇಶ್ವನ ಆರ್ಶೀವಾದ ಸದಾ ನಿಮ್ಮ ಮೇಲಿರಲಿ ಎಂದು ಆರ್ಶೀವದಿಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸದಸ್ಯರಾದ ಅಮರಯ್ಯ ಸ್ವಾಮಿ, ಮಹಾಂತೇಶ ಉಪ್ಪಾರ,ಪ್ರೀತಮ್ ಇನ್ನಿತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.