ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿಡಿಲಿನ ಆರ್ಭಟಕ್ಕೆ ಬಲಿಯಾದ 19 ಕುರಿಗಳು

ಶಹಾಪುರ: ಶನಿವಾರ ಸಂಜೆ ಕುರಿ ಕಾಯುವ ಕಾರಿಗಾಹಿಗಳು ಮನೆ ಹಿಂದಿರುಗುವಾಗ ಗುಡುಗು ಸಿಡಿಲಿನ ಆರ್ಭಟಕ್ಕೆ ಅಪ್ಪಳಿಸಿ 120 ಕ್ಕೂ ಹೆಚ್ಚು ಕುರಿ ಹಿಂಡಿನಲ್ಲಿ 19 ಕುರಿಗಳು ಮೃತಪಟ್ಟಿದ್ದು, ಕುರಿ ಕಾಯುವ ಕಾರಿಗಾಹಿಗಳು ಬದುಕಿಗೆ ಕಷ್ಟವಾಗಿದೆ ಈ ಘಟನೆ ಹಳಪೇಟೆಯ ಬೆಟ್ಟದ ಹಿಂಬಾಗದಲ್ಲಿ ನಡೆದಿದೆ.
4 ಲಕ್ಷ ರೂಪಾಯಿ ಮೌಲ್ಯದ ಕುರಿಗಳು ಮಳೆಯ ನಡುವೆ ಸಿಡಿಲಿನ ಆರ್ಭಟಕ್ಕೆ ಬಲಿಯಾಗಿವೆ. ಸಂಗಪ್ಪ ತಂದೆ ಮಲ್ಲಪ್ಪ ಜಂಗಳಿ, ದೇವಪ್ಪ ತಂದೆ ನಾಗಪ್ಪ ವಗ್ಗನರ್ ಅವರಿಗೆ ಸೇರಿದಂತೆ, ಸಂಜೆ ವೇಳೆಗೆ ಸಿಡಿಲಿನ ಆರ್ಭಟ ಬೆಚ್ಚಿ ಬೀಳುವಂತೆ ಮಾಡಿತು. ಅದೃಷ್ಟವಶಾತ್ ಕುರಿ ಕಾಯುವವರು ಕಲ್ಲು ಬಂಡೆಗಳಲ್ಲಿ ನಿಂತು ತಮ್ಮ ಪ್ರಾಣವನ್ನು ಕಾಪಾಡಿಕೊಂಡರು.
ಬದುಕಿಗೆ ಬರೆ ಎಳೆದಂತಾಗಿದೆ:ಕುರಿಗಳನ್ನೇ ನಂಬಿ ಜೀವನ ಮಾಡುತ್ತಿರುವವರು ಮಳೆ ಇಲ್ಲದೆ ಮೇವಿಗಾಗಿ ಕುರಿಗಳ ಜೊತೆಗೆ ದೂರದ ಊರಿಗೆ ಹೋಗುವುದು ಮತ್ತು ಬೆಟ್ಟ ಗುಡ್ಡ ತಿರುಗಾಡುವ ಇವರಿಗೆ ಪ್ರಕೃತಿ ಇಂತದೊಂದು ಸಂಕಷ್ಟ ತಂದಿದ್ದಕ್ಕೆ ಕುಟುಂಬಸ್ಥರು ಆತಂಕದಲ್ಲಿದ್ದಾರೆ ತಕ್ಷಣವೇ ತಾಲೂಕ ದಂಡಾಧಿಕಾರಿಗಳು,ಸಂಬಂಧಪಟ್ಟ ಪಶು ವೈದ್ಯರು ಕೂಡಲೇ ಅಧಿಕಾರಿಗಳು ಸ್ಪಂದಿಸಿ ಸೂಕ್ತ ಪರಿಹಾರ ಕೊಡುವ ಕೆಲಸ ಮಾಡಬೇಕಾಗಿದೆ.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ