ಹನೂರು:ಲೊಕ್ಕನಹಳ್ಳಿ ಹೋಬಳಿಯ ಚಿಕ್ಕಮಾಲಪುರ ಗ್ರಾಮ ಪಂಚಾಯ್ತಿಯ ಕಗ್ಗಳಿ ಗುಂದ್ಧಿ ಆದಿವಾಸಿಗಳ ಗ್ರಾಮದಲ್ಲಿ ಅದೇ ಗ್ರಾಮದ ರಾಮ,ಲಲಿತಾ ದಂಪತಿಯ ಎರಡನೇ ಪುತ್ರಿ ಸುಶೀಲ ಎಂಬ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 6ವರ್ಷದ ಬಾಲಕಿಯು ತನ್ನ ಮನೆಯ ಮುಂದೆ ಇರುವ ಚಕೋತಾ ಹಣ್ಣಿನ ಮರದ ಹತ್ತಿರ ಆಟ ಆಡುತ್ತಿದ್ದ ಸಂದರ್ಭದಲ್ಲಿ ಕಾಡಿನಿಂದ ಬಂದಂತಹ ಚಿರತೆಯೊಂದು ಮಗುವನ್ನು ಕಚ್ಚಿಕೊಂಡು ಕಾಡಿನ ಕಡೆ ಎಳೆದುಕೊಂಡು ಹೋಗುವ ಸಂದರ್ಭದಲ್ಲಿ ಆಟ ಆಡುತಿದ್ದ ಮಗಳು ಇಲ್ಲ ಎಂದು ನೋಡಿದಾಗ ಅ ಸ್ಥಳದಲ್ಲಿ ಸುರಿದಿದ್ದ ರಕ್ತದ ಕಲೆಗಳನ್ನು ನೋಡಿ ಶಬ್ಧ ಮಾಡಿ ಗ್ರಾಮದ ಎಲ್ಲರೂ ಜೋರಾಗಿ ಕೂಗಿಕೊಂಡಾಗ ಕಾಡಿಗು ಗ್ರಾಮಕೂ ಮಧ್ಯ ತೋಡಲಾಗಿದ್ದ ಆನೆಯ ಗುಂಡಿಯೊಳಗೆ ಮಗುವನ್ನು ಬಿಟ್ಟು ಚಿರತೆ ಕಾಡಿನ ಒಳಗೆ ಓಡಿಹೋಗಿದೆ ನಂತರ ಗ್ರಾಮದವರೆಲ್ಲ ಸೇರಿ ಆಂಬುಲೆನ್ಸ್ ಮೂಲಕ ಸಮೀಪದ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಸಂಬಂಧ ಅರಣ್ಯ ಇಲಾಖೆಯವರು ಸೂಕ್ತ ಪರಿಹಾರ ನೀಡಲು ಹಾಗೂ ಚಿರತೆಯನ್ನು ಹಿಡಿಯಲು ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ಗ್ರಾಮದವರು ಒತ್ತಾಯಿಸಿದಾರೆ ಗ್ರಾಮಸ್ಥರ ಈ ಕೂಗಿಗೆ ಅರಣ್ಯ ಇಲಾಖೆ ಸ್ಪಂದಿಸುವುದೇ ಅಥವಾ ನಿರ್ಲಕ್ಷ ಮಾಡುವುದೇ ಕಾದು ನೋಡಬೇಕಾಗಿದೆ.
ವರದಿ:ಉಸ್ಮಾನ್ ಖಾನ್