ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಅಭಿವೃದ್ಧಿ ವಿಷಯದಲ್ಲಿ ಪ್ರಗತಿ ಆಮೆಗತಿಯಲ್ಲಿದ್ದು ಅದರಲ್ಲೂ ಹಿಪ್ಪರಗಿ ಎಸ್ ಎನ್ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಓದಲು ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳ ಕೊರತೆ ಇದ್ದು ಇದು ಸುಮಾರು ವರ್ಷಗಳಿಂದ ಹಾಗೆ ಇದನ್ನು ಎಂ ಎಲ್ ಎ ಹಾಗೂ ಇತರ ನಾಯಕರ ಗಮನಕ್ಕೆ ತಂದರೂ ಯಾವುದೇ ರೀತಿಯ ಸುಧಾರಣೆ ಮಾಡದಿರುವುದು ವಿಪರ್ಯಾಸ.ಇದರಿಂದ
ವಿದ್ಯಾರ್ಥಿಗಳ ಕಲಿಕೆಗೆ ಆಪಾರ ನಷ್ಟ ಆಗುತ್ತಿರುವುದನ್ನು ಗಮನಿಸಿದ ರೈತರ ಸಂಘದ ರಾಜ್ಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಉಮ್ಮರಗಿ ಅವರು ನಿನ್ನೆ ಕೆ ಎಸ್ ಆರ್ ಟಿ ಸಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಜೊತೆ ಮಾತನಾಡಿದರು.ಇವರ ಸಮ್ಮುಖದಲ್ಲಿ ಕೆ ಕೆ ಆರ್ ಟಿ ಸಿ ಜಿಲ್ಲಾ ಅಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಬಸ್ಸು ತಡೆ ಆದೇಶ ಹಿಂಪಡೆದರು ರೈತರ ಸಂಘದ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ ಉಮ್ಮರಗಿ ಹಾಗೂ ಹಿಪ್ಪರಗಿ ಎಸ್ ಎನ್ ಗ್ರಾಮದ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.