ವಿಜಯನಗರ/ಕೊಟ್ಟೂರು ತಾಲ್ಲೂಕಿನಲ್ಲಿ ಪ್ರಸ್ತುತ 11 ಗ್ರಾ.ಪಂ.ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿನ ಕೂಲಿಕಾರರಿಗೆ ವರ್ಷಕ್ಕೆ ೧೦೦ ದಿನ ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಯೋಜನೆಯಡಿ ಹಳ್ಳ-ಕೊಳ್ಳ-ಹಗರಿ-ಚೆಕ್‌ಡ್ಯಾಂ-ಕೆರೆಗಳಲ್ಲಿನ ಹೂಳು ತೆಗೆಯುವ ಕೆಲಸಕ್ಕೆ ಕೋಟ್ಯಾಂತರ ಹಣ ವೆಚ್ಚ ಮಾಡುತ್ತಿದೆ ಕೆರೆಗಳು ಸಣ್ಣ ನೀರಾವರಿ ಇಲಾಖೆಯಡಿ ಬರುವುದರಿಂದ ಸದರಿ ಇಲಾಖೆ ತನ್ನ ಅನುದಾನದಡಿ ಕೆಲಸ ಮಾಡಬಹುದಾಗಿದೆ ಆದರೆ ಉದ್ಯೋಗ ಖಾತ್ರಿ ಯೊಜನೆಯಲ್ಲಿ ಕೆರೆ ಹೂಳು ತೆಗೆಯುವಾಗ ಒಂದು ನಿರ್ಧಿಷ್ಟ ರೂಪುರೇಷೆಗಳನ್ನು ಗೊತ್ತು ಮಾಡದೆ ಎಲ್ಲೆಂದರಲ್ಲಿ ಗುಂಡಿ ತೆಗೆದು ಅದರಿಂದ ಮಣ್ಣನ್ನು ಕೂಡಾ ಸರಿಯಾಗಿ ವಿಲೇವಾರಿ ಮಾಡದಿರುವುದು ಆದ್ದರಿಂದ ಸಂಬಂಧಿಸಿದ ತಾಲ್ಲೂಕು ಆಡಳಿತಾಧಿಕಾರಿ ಮತ್ತು ಈ ಭಾಗದ ಶಾಸಕರು ನಿರ್ಧಿಷ್ಠ ಸ್ಥಳ ಆಯ್ಕೆ ಮತ್ತು ಸಂಪೂರ್ಣ ಕೆಲಸ ಶಾಶ್ವತವಾಗಿ ಆಗುವಂತಹ ಗುರಿ ಹೊಂದಿ ಕೆಲಸ ಮಾಡಬೇಕಿದೆ ಇಲ್ಲ ಅಂದರೆ ಅಧಿಕಾರಿಗಳು ತಮ್ಮ ಭ್ರಷ್ಟತೆಗೋಸ್ಕರ ಪ್ರಜೆಗಳನ್ನು ಕೂಡಾ ಸರ್ಕಾರಿ ಬ್ರಷ್ಠರನ್ನಾಗಿ ಮಾಡುತ್ತಿರುವುದು ಖೇದಕರ ಸಂಗತಿ.
ಇತ್ತೀಚಿನ ದಿನಗಳಲ್ಲಿ ಕೆ ಅಯ್ಯನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಮೇಟಿ ಅವರಿಂದ ಸುಳ್ಳು ಉದ್ಯೋಗ ಖಾತ್ರಿಗಳನ್ನು ಸೃಷ್ಟಿಸಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಪರಿಹಾರ:
೧) ತಾಲ್ಲೂಕಿನ ಮುಖ್ಯ ನೀರಿನ ಮೂಲ ಹಳ್ಳ-ಹಗರಿ-ಕೊಳ್ಳ-ಚೆಕ್ ಡ್ಯಾಂಗಳನ್ನು ನಿರ್ಧಿಷ್ಟವಾಗಿ ಆಯ್ಕೆ ಮಾಡಿಕೊಂಡು ಸಂಪೂರ್ಣ ಕೆಲಸ ಮುಗಿಸುವ ಯೋಜನೆ ರೂಪಿಸುವುದು
೨) ಹಳ್ಳ-ಹಗರಿ-ಕೊಳ್ಳಗಳಲ್ಲಿ ನೀರು ನಿಲ್ಲುವಂತಹ ವ್ಯವಸ್ಥೆಗಾಗಿ ನಿರ್ಧಿಷ್ಠ ಅಂತರಗಳಲ್ಲಿ ಮರುಳಿನ ಚೀಲ-ಸ್ಥಳದಲ್ಲಿ ಲಭ್ಯವಾಗುವ ಕಲ್ಲು ಮಣ್ಣುಗಳಿಂದ ತಡೆಗೋಡೆ ನಿರ್ಮಾಣ
ಇನ್ನಾದರೂ ಅಧಿಕಾರಿವರ್ಗ/ಇಲಾಖೆಗಳು ಸ್ವಲ್ಪ ಪ್ರಾಮಾಣಿಕ ಮನಸ್ಸು ಮಾಡಲಿ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಪಗಾರ-ಟಿ.ಎ./ಡಿ.ಎ. ಪಿಂಚಣಿಗೋಸ್ಕರ ಕೆಲಸ ಮಾಡದೇ ದೇಶದ ಗಡಿ ಕಾಯುವ ಯೋಧರ ಪರಿಶ್ರಮ ಸಾರ್ಥಕತೆ ಹೊಂದಲು ಅಧಿಕಾರಿವರ್ಗ-ರಾಜಕೀಯವರ್ಗ-ಸ್ವಾರ್ಥಕತೆ ನಿಲ್ಲಿಸಲಿ.
ಎಂದು ರೈತ ಮುಖಂಡರಾದ ಸುರೇಶ್ ,ಮಂಜುನಾಥ್,ಕೊಟ್ರೇಶ್ ಪತ್ರಿಕೆಗೆ ತಿಳಿಸಿದ್ದಾರೆ.