ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸೋಮವಾರ ಮಕ್ಕಳು ಕಲಿಕಾ ಹಬ್ಬವನ್ನು ವಿವಿಧ ಆಯಾಮಗಳಿಂದ ತಾವು ಕಲಿತಿರುವ ಅಕ್ಷರಗಳನ್ನು ವಿಧವಿಧವಾಗಿ ಕ್ರಿಯಾತ್ಮಕತೆಯಲ್ಲಿ ಬಳಸಿ ಉತ್ತಮ ಪ್ರದರ್ಶನ ಮಕ್ಕಳು ಪ್ರದರ್ಶನ ನೀಡಿದರು ಕೃಷಿ ,ವಿಜ್ಞಾನ,ಗಣಿತ,ಪರಿಸರ ಹೀಗೆ ವಿವಿಧ ರೀತಿಯಲ್ಲಿ ಮಕ್ಕಳು ಪೇಪರ್ ಹಾಗೂ ಇನ್ನಿತರ ಸಲಕರಣೆಗಳನ್ನು ಬಳಸಿ ನಲಿ ಕಲಿ ಕಲಿಕಾ ಮೇಳದಲ್ಲಿ ಬಳಸಿ ಪ್ರದರ್ಶನ ನೀಡಿ ಗ್ರಾಮದಲ್ಲಿ ಗಮನ ಸೆಳೆದಿದ್ದು ಅಚ್ಚರಿ ಮೂಡಿಸಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಶರಣೆಗೌಡ , ಪ್ರಾಥಮಿಕ ಶಾಲೆ ಸಂಘದ ಪ್ರಧಾನ ಕಾರ್ಯದರ್ಶಿಯವಾರದ ರುದ್ರಗೌಡ , ಶಾಲೆಯ ಮುಖ್ಯೋಪಾಧ್ಯಾಯಿನಿ ಶಿವಮ್ಮ,ಶಾಲೆಯ ಎಸ್ಡಿಎಂಸಿ ಅದ್ಯಕ್ಷರಾದ ವೀರಪ್ಪ ಬಡಿಗೇರ ನಲಿ ಕಲಿ ಶಿಕ್ಷಕಿಯಾದ ಮಂಜುಳಾ ಸಹಶಿಕ್ಷಕರು ಗ್ರಾಮದ ಹಿರಿಯರಾದ ಮಹೀಬೂಬ,ವೀರೇಶಪ್ಪ , ಹಸೇನ ಸಾಬ ಯುವಕರಾದ ಉಮೇಶ , ಲಿಂಗರಾಜ ಹಾಗೂ ಗ್ರಾಮದ ಹಿರಿಯರು ಶಾಲೆಯಸಹಾ ಶಿಕ್ಷಕರು,ಶಿಕ್ಷಕಿಯರು, ಪಾಲಕರು ಮಕ್ಕಳು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.