ಇಂಡಿ:ತಾಲೂಕಾ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ ಉಪವಿಭಾಗ ಇಂಡಿಯಲ್ಲಿ ಬಾಬು ಜಗಜೀವನ್ ರಾಮ್ ಅವರ ಫೋಟೋ ವನ್ನು ಗೋಡೆ ಮೇಲಿಂದ ತೆಗೆದು ಉದ್ದೇಶ ಪೂರಕವಾಗಿ ಕಸ ಸಂಗ್ರಹಣೆ ಮಾಡುವ ಸ್ಥಳದಲ್ಲಿ ಸುಮಾರು ಎರಡು ತಿಂಗಳು ಫೋಟೋ ಇಟ್ಟು ದಲಿತ ಬಾಂಧವರಿಗೆ ನೇರವಾಗಿ ಅವಮಾನ ಮಾಡಿರುವ ಇಂಡಿ ತಾಲೂಕ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಚಂದ್ರಶೇಖರ ಕೊಲ್ಲೂರು ಅವರಿಗೆ ಅಮಾನತ್ತು ಮಾಡಬೇಕು ಎಂದು ಪವನ.ನಾ. ಕೊಡಹೊನ್ನ ರಾಷ್ಟ್ರೀಯ ಚರ್ಮಕಾರ ಮಹಾ ಸಂಘ ರಾಜ್ಯ ಅಧ್ಯಕ್ಷರು ಆಗ್ರಹಿಸಿದರು.
ಕಂಪ್ಯೂಟರ್ ಆಪರೇಟರ್ ಆಗಿರುವ ಆರ್. ಎ.ತಡ್ಲಿಗಿ ಇವರಿಗೆ ಕೇಳಿದಾಗ ಆ ಫೋಟೋವನ್ನು ಇಟ್ಟು ಕೇವಲ 4 ದಿನವಾಗಿದೆ ಏಂದು ಹೇಳಿ ದಲಿತ ಮಾಧ್ಯಮದವರಿಗೆ ಹಾರಿಕೆಯ ಉತ್ತರ ನೀಡಿರುತ್ತಾರೆ ಅಷ್ಟೇ ಅಲ್ಲದೆ ಅವರ ತಾಲೂಕಾ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಸೋಮಶೇಖರ್ ಕೊಲ್ಲುರ ಇವರಿಗೆ ಕರೆ ಮಾಡಿದ ದಲಿತ ನಾಯಕ ಪವನ್ ಕೊಡಹೋನ ಅವರು ಮಾತನಾಡಿದಾಗ ಫೋಟೋ ಇಟ್ಟಿರೋದು ಏನ್ ದೊಡ್ ವಿಷಯ ಸರ್ ಹೋಗ್ಲಿ ಬಿಡಿ ಅಂತ ದಲಿತರನ್ನು ಕೀಳಾಗಿ ಮಾತನಾಡಿದ್ದಾರೆ.
ಇದನ್ನು ಖಂಡಿಸಿ ರಾಷ್ಟ್ರೀಯ ಚರ್ಮಕಾರ ಮಹಾಸಂಘ ಹಾಗು ಕಾ.ನಿ.ಪ ಧ್ವನಿ ಸಂಘ ಇಂಡಿ ಜಂಟಿಯಾಗಿ ಎಲ್ಲರೂ ಕೂಡಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದಾರೆ.
ಮೇಲಾಧಿಕಾರಿಗಳು ಸೂಕ್ತವಾದ ತನಿಖೆ ಮಾಡಿ ಕೂಡಲೇ ವಿಸ್ತರಣಾಧಿಕಾರಿ ಚಂದ್ರಶೇಖರ್ ಕೊಲ್ಲೂರ ಅವರಿಗೆ ಅಮಾನತ್ತು ಮಾಡಲು ಆಗ್ರಹಿಸಿದ್ದಾರೆ.
ವರದಿ:ಅರವಿಂದ್ ಕಾಂಬಳೆ ಇಂಡಿ