ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಳಗಾನೂರ ಗ್ರಾಮಸ್ಥರಿಂದ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯಗಳು ಪವಿತ್ರ ರಂಜಾನ್ ತಿಂಗಳ ಮುಗಿದ ನಂತರ ಬರುವ ಹಬ್ಬವೆ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಮುಸ್ಲಿಂ ಪ್ರವಾದಿ ಇಬ್ರಾಹಿಂರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಈ ಹಬ್ಬವನ್ನು ಒಂದು ಸಲ ಪ್ರವಾದಿ ಇಬ್ರಾಹಿಮರಗೆ ಅಲ್ಲಾಹನು ಕನಸಿನಲ್ಲಿ ಬಂದು ನಿನ್ನ ಏಕೈಕ ಪುತ್ರ ಇಸ್ಮಾಯಿಲರನ್ನು ನನಗೆ ಬಲಿ ಕೊಡಬೇಕೆಂದು ಕೇಳಿದನೆಂದು ಪ್ರವಾದಿ ಇಬ್ರಾಹಿಮ ಒಂದು ಕತ್ತಿಯನ್ನು ತೆಗೆದುಕೊಂಡು ಮಗನನ್ನು ಕೊಲ್ಲಲು ಹೋದಾಗ ಅಲ್ಲಾಹನು ಪ್ರತ್ಯಕ್ಷವಾಗಿ ನನ್ನ ಮಾತಿಗೆ ತಕ್ಕನಾಗಿ ನಡೆದಿರುವೆ ಅದಕ್ಕೆ ನಿನ್ನ ಮಗನ ಬಲಿ ಕೊಡುವುದು ಬೇಡ ಬದಲಿಗೆ ಒಂದು ಕುರಿಯನ್ನು ಬಲಿಕೊಡು ಎಂದು ಹೇಳಿರುವ ಹಬ್ಬವೆ ಬಕ್ರೀದ್ ಹಬ್ಬವಾಗಿದೆ ಇನೋಂದು ರೀತಿಯಲ್ಲಿ ಇದು ಚಂದ್ರನ ದರ್ಶನ ಪಡೆದು ಹತ್ತು ದಿವಸದ ನಂತರ ಆಚರಿಸುತ್ತಾರೆ ಈ ಹಬ್ಬವನ್ನು ಬಳಗಾನೂರ ಗ್ರಾಮದ ಇಂದು ಮುಸ್ಲಿಂ ಬಂಧಗಳು ಭೇದ ಭಾವ ಇಲ್ಲದೆ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿದರು.ಅಂಜುಮನ್ ಅಧ್ಯಕ್ಷ ಅಲ್ಲಾಬಕ್ಷ ಬಿದರಿ ಹಾಗೂ ಉಪಾಧ್ಯಕ್ಷ ಬುಡ್ಡಾ ಬಾಗವಾನ,ಮತ್ತಣ್ಣಾ ವಾಲಿಕಾರ, ಬಂದ್ಗಿಸಾಬ ಮಕನಾದಾರ,ಮಹಮ್ಮದ್ ವಾಲಿಕಾರ,ಪಟಾನ ಬಾಗವಾನ, ಬಂಧು ಅವಟಿ ಕರುನಾಡ ಕಂದ ವರದಿಗಾರ ಉಸ್ಮಾನ ಬಾಗವಾನ ಹಾಗೂ ಇನ್ನೂ ಅನೇಕ ಮುಸ್ಲಿಂ ಬಂಧು ಬಳಗದವರ ಜೊತೆ ಸೇರಿಕೊಂಡು ಬಕ್ರೀದ್ ಹಬ್ಬದ ತ್ಯಾಗದ ಸಂಕೇತವಾಗಿರುವ ಈ ಹಬ್ಬವು ಮುಸ್ಲಿಂ ಬಾಂದವರಿಗೆ ಒಳ್ಳೆಯ ಮನಸ್ಸು ತ್ಯಾಗ ಭಾವೈಕ್ಯತೆಯನ್ನು ಆ ಅಲ್ಲಾಹನು ಕರುಣಿಸಿಲಿ ಎಂದು ಬಳಗಾನೂರ ಗ್ರಾಮದ ಎಲ್ಲಾ ಸಮುದಾಯದವರು ಶುಭಾಶಯ ಕೋರಿದರು.
ವರದಿ:ಉಸ್ಮಾನ ಬಾಗವಾನ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.