ಉತ್ತರ ಕನ್ನಡ/ಮುಂಡಗೋಡ:ಸಾಕಷ್ಟು ವರ್ಷಗಳಿಂದ ಮುಂಡಗೋಡ ನಗರದ ಅಕ್ಷರಪ್ರೇಮಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತಿನಿತ್ಯ ದಿನಪತ್ರಿಕೆ ಹಾಗೂ ಸಾಹಿತ್ಯ ಹಿನ್ನೆಲೆಯ ಪುಸ್ತಕಗಳನ್ನು ಓದಲು ಅವಕಾಶ ಮಾಡಿಕೊಟ್ಟಿರುವ ಪಟ್ಟಣ ಪಂಚಾಯ್ತಿ ಆವರಣದಲ್ಲಿನ ಜಿಲ್ಲಾ ಕೇಂದ್ರ ಗ್ರಂಥಾಲಯ ಅಪ್ಡೇಟ್ ಆಗದೆ ಕೇವಲ ಹಳೆಯ ಪುಸ್ತಕಗಳು,ಕಥೆ ಕವನಗಳ ಪುಸ್ತಕಗಳನ್ನು ಹಾಗೂ ದಿನಪತ್ರಿಕೆಗಳ ಸೇವೆಯನ್ನಷ್ಟೆ ಸಾರ್ವಜನಿಕರಿಗೆ ನೀಡುತ್ತಿದ್ದು, ಮುಂಡಗೋಡ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕರ ಸಂಖ್ಯೆ ಹೆಚ್ಚಿದ್ದು,ದುಡ್ಡು ಕೊಟ್ಟು ಪುಸ್ತಕಗಳನ್ನು ಕೊಳ್ಳುವಷ್ಟು ಕೆಲವರು ಸ್ಥಿತಿವಂತರಾಗಿರುವುದಿಲ್ಲ ಹಾಗೂ ಪ್ರತಿಭೆ ಜ್ಞಾನ ಇದ್ದರೂ ದೂರದ ಧಾರವಾಡ,ಬೆಳಗಾವಿ ಗಳಲ್ಲಿ ರೂಂ ಮಾಡಿ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಿದ್ಧತೆ ನಡೆಸುತ್ತಿರುವ ಅದೆಷ್ಟೋ ಯುವಕರಿಗೆ ನೆರವಾಗಲು ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿಗಳು ಪಟ್ಟಣ ಪಂಚಾಯ್ತಿ ಆವರಣದಲ್ಲಿನ ಗ್ರಂಥಾಲಯಕ್ಕೆ ಆದಷ್ಟು ಒಳ್ಳೆಯ ಗುಣಮಟ್ಟದ ಲೇಖಕರು ಬರೆದಿರುವ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ತರಿಸಿ,ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರವೊಂದನ್ನು ಸರ್ಕಾರದ ಸಹಭಾಗಿತ್ವದಲ್ಲಿ ತೆರೆದರೆ ಸಾಕಷ್ಟು ಯುವಕರಿಗೆ ಇದರಿಂದ ಪ್ರಯೋಜನವಾಗಲಿದೆ,ಹತ್ತಿರದಲ್ಲೇ ಇಂದಿರಾ ಕ್ಯಾಂಟೀನ್ ಕೂಡ ಇರುವುದರಿಂದ ಊಟದ ಸಮಯದ ನಂತರ ಮತ್ತೊಮ್ಮೆ ಅಧ್ಯಯನ ನಡೆಸಲು ಸಾಧ್ಯ ವಾಗುತ್ತದೆ,ಆದ ಕಾರಣ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತು ವಿಚಾರ ಮಾಡುವ ಅಗತ್ಯವಿದೆ ಹಾಗೂ ಸತತ ಅಧ್ಯಯನ ನಡೆಸುವ ಸ್ಪರ್ಧಾಕಾoಕ್ಷಿಗಳಿಗೆ ನೆರವಾಗಬಲ್ಲದು ಹಾಗೂ ಮುಂಡಗೋಡ ನಿವಾಸಿಗಳಿಂದ ಮನೆ ತೆರಿಗೆ ಪಾವತಿಸಿಕೊಳ್ಳುವ ವೇಳೆ 120/- ರೂಪಾಯಿಗಳನ್ನು ಲೈಬ್ರರಿ ಸೆಸ್ ರೂಪದಲ್ಲಿ ಪಡೆಯುವ ಸರ್ಕಾರ ಓದುಗರಿಗೆ ಗುಣಮಟ್ಟದ ಪುಸ್ತಕಗಳನ್ನು ನೀಡುವುದು ಸರ್ಕಾರದ ಕರ್ತವ್ಯ ಕೂಡಾ ಆಗಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.