ಯಾದಗಿರಿ:ನಿನ್ನೆ ನಿಹಾರಿಕಾ ಸೇವಾ ಸಂಸ್ಥೆ ವತಿಯಿಂದ ಒಂದು ದಿನದ ಉಚಿತ ಕಿವಿಯ ತಪಾಸಣೆ ಚಿರಂಜೀವಿ ಶಾಲೆ ಹತ್ತಿರ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಬದಲ್ಲಿ ಶ್ರವಣ ತಜ್ಞರಾದ ಅವಿನಾಶ ಪಾಟೀಲ್ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಈ ಆಧುನಿಕ ಜೀವನ ಶೈಲಿಯಲ್ಲಿ ನಿತ್ಯ ಹೆಡ್ ಫೋನ್, ಹಿಯರ ಫೋನ, ಬಳಸುತ್ತಿರುವುದು ಸರ್ವೆ ಸಾಮಾನ್ಯ ಆದರೆ ಇದರ ಅತಿಯಾದ ಬಳಕೆಯಿಂದ ಎಲ್ಲಾ ವಯಸ್ಕರಿಗೂ ಶ್ರವಣ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಸರಿಯಾದ ಸಂದರ್ಭದಲ್ಲಿ ಜಾಗೃತರಾಗಿ ಶ್ರವಣ ಪರೀಕ್ಷೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು. ನಿಹಾರಿಕಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ರಮೇಶ ಕಟ್ಟಿಮನಿ ಮಾತನಾಡಿ ಶ್ರವಣ ಪರೀಕ್ಷೆ ಮಾಡಿಕೊಳ್ಳಬೇಕು.
ಇದರಿಂದ ಮುಂದೆ ಆಗುವ ಶ್ರವಣ ಪ್ರಮಾಣ ಕಡಿಮೆಯಾಗುವುದು ತಪ್ಪುತ್ತದೆ. ಹಾಗೂ ಜಾಗೃತರಾಗಿ ಇರಬಹುದು ಎಂದು ತಿಳಿಸಿದರು.
ಈ ಸಮಯದಲ್ಲಿ ಮಾಳಪ್ಪ ಯಾದವ, ಶ್ರೀಶೈಲ್ ಹಾರ್ಮೊನಿ, ಬಸವರಾಜ ಬಲವಂತ, ಅಶೋಕ ಕರಾಟೆ, ಮಂಜುನಾಥ ನಾಯ್ಕಲ್, ಸಾಬರೆಡ್ಡಿ, ಮಹೇಶ, ಕಿರಣ, ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ