ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಟಗೆರಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಲೈನ್ ಮ್ಯಾನ್ ಒಬ್ಬರು ಸಾವನ್ನಪ್ಪಿರುವ ಘಟನೆ ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಸಂತೋಷ್ ಗುಂಜಾ (28)ಜೇವರಗಿ ತಾಲೂಕಿನ ಹುಲ್ಲುರೂ ಗ್ರಾಮದ ನಿವಾಸಿ ಆಗಿದ್ದು ಇದಕ್ಕೆ ವಿದ್ಯುತ್ ವಿಭಾಗ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಚೌಡಾಪುರ್ ರಸ್ತೆ ಬಂದ್ ಮಾಡುವ ಮೂಲಕ ಮಾರ್ಗಮದ್ಯದಲ್ಲಿ ಪ್ರತಿಭಟಿಸಿದರು.
ವರದಿ:ಮಹಾದೇವ ವಿಶ್ವಕರ್ಮ