ಹಾವೇರಿ/ಶಿಗ್ಗಾವಿ:ಪುಣ್ಯಸ್ಮರಣೆಗಳಂತಹ ಕಾರ್ಯಕ್ರಮಗಳಲ್ಲಿಯೂ ವನಮಹೋತ್ಸವದಂತಹ ಕಾರ್ಯಕ್ರಮ ಹಮ್ಮಿಕೊಂಡು ಪುಣ್ಯ ಪುರುಷರ ಹೆಸರನ್ನು ಪರಿಸರ ಖಾಳಜಿಯ ಜೊತೆಗೆ ಅಜರಾಮರ ಮಾಡುವ ಸುರೇಶ ಯಲಿಗಾರ ಅವರ ಕಾರ್ಯ ನಿಜಕ್ಕೂ ಮಾದರಿ ಕಾರ್ಯ ಎಂದು ಗೋಟಗೋಡಿ ಕರ್ನಾಟಕ ಜಾನಪದ ವಿವಿಯ ಕುಲಪತಿಗಳಾದ ಪ್ರೋ.ಟಿ ಎಂ ಭಾಷ್ಕರ್ ಹೇಳಿದರು.
ಪಟ್ಟಣದ ಯಲಿಗಾರ ಲೇಔಟ್‌ನಲ್ಲಿ ಮಾತೋಶ್ರೀ ಅನಸೂಯಾ ಫಕ್ಕೀರಪ್ಪ ಯಲಿಗಾರ ಸೇವಾ ಸಂಸ್ಥೆಯಿಂದ ದಿ. ಫಕ್ಕೀರಪ್ಪ ಯಲಿಗಾರ ಅವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಭಾರತದ ಜನಪದ ಸಂಸ್ಕೃತಿಯಲ್ಲಿ ವನಮಹೋತ್ಸವಕ್ಕೆ ವಿಶೇಷವಾದ ಮಹತ್ವವಿದ್ದು ನಮ್ಮ ಹಿರಿಯರು ಪ್ರಕೃತಿಯನ್ನು ಬೆಳೆಸಲು ಮುಂದಾಗಿದ್ದಾರೆ,ಸಸ್ಯಗಳು ಪ್ರಕೃತಿಯ ಜೀವನಾಡಿಯಾಗಿದ್ದು ಪ್ರಕೃತಿಯಲ್ಲಿ ಆಮ್ಲಜನಕವನ್ನು ಮಳೆಯನ್ನು ಸಮತೋಲನವಾಗಿ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಆದ್ದರಿಂದ ಕೇವಲ ಗಿಡಗಳನ್ನು ನೆಟ್ಟರೆ ಮಾತ್ರ ಸಾಲದು ಅವುಗಳನ್ನು ನಾವು ಮಕ್ಕಳನ್ನು ಜೋಪಾನ ಮಾಡುವಂತೆ ಸಕಾಲಕ್ಕೆ ನೀರು,ಗೊಬ್ಬರ ಹಾಕಿ ಪೋಷಿಸಬೇಕು ಕಾಡನ್ನು ಉಳಿಸಿ ಬೆಳೆಸುವ ಮೂಲಕ ಪ್ರಕೃತಿಯಲ್ಲಿನ ಮೂಕ ಜೀವರಾಶಿಗಳಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಇಂತಹ ಒಂದು ಕಾರ್ಯಕ್ರಮವನ್ನು ಸರ್ಕಾರಿ,ಅರೆ ಸರ್ಕಾರಿ, ಶಿಕ್ಷಣ ಸಂಸ್ಥೆಗಳು ಮತ್ತು ಸೇವಾ ಸಂಸ್ಥೆಗಳ ಪ್ರಜ್ಞಾವಂತರು ಮುಂಚೂಣಿಯಲ್ಲಿ ನಿಂತು ಕಾರ್ಯಕ್ರಮಗಳನ್ನು ಯಶಸ್ವಿ ಮಾಡಿಕೊಡಬೇಕು ಇದರಿಂದ ಪ್ರಕೃತಿಯ ಸಮತೋಲನ ಸಾಧ್ಯವಾಗುತ್ತದೆ ಇಂಥ ಒಂದು ಮಹತ್ಕಾರ್ಯವನ್ನು ಸುರೇಶ್ ಯಲಿಗಾರ ಅವರು ತಮ್ಮ ತಂದೆಯ ದ್ವಿತೀಯ ಪುಣ್ಯಸ್ಮರಣೆ ಸ್ಮರಣಾರ್ಥ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸುಮಾರು ೫೦ ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು,ಅನುಸೂಯಾ ಯಲಿಗಾರ ಅವರು ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಕುಲಪತಿಗಳಾದ ಪ್ರೊ.ಟಿ ಎಂ ಬಾಸ್ಕರ್ ಹಾಗೂ ಕುಲಸಚಿವರಾದ ಪ್ರೊ. ಸಿ ಟಿ ಗುರುಪ್ರಸಾದ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಗೋಟಗೋಡಿ ಕರ್ನಾಟಕ ಜಾನಪದ ವಿವಿಯ ಚಂದ್ರಪ್ಪಾ ಸೊಗಟಿ,ಶರೀಫ ಮಾಕಾಪೂರ,ಸಂಸ್ಥೆಯ ಅಧ್ಯಕ್ಷ ಸುರೇಶ್ ಯಲಿಗಾರ,ಜಿ ಎನ್ ಯಲಿಗಾರ,ಸಿ ವಿ ಮತ್ತಿಗಟ್ಟಿ,ಚನ್ನಪ್ಪ ಯಲಿಗಾರ,ನಾಗಣ್ಣ ಯಲಿಗಾರ,ಈರಣ್ಣ ನವಲಗುಂದ,ಬಸವರಾಜ ಯಲಿಗಾರ, ನಿಂಗಪ್ಪ ಯಲಿಗಾರ,ಸಂಜೀವ ಯಲಿಗಾರ, ಅರುಣ ಯಲಿಗಾರ,ಪ್ರಶಾಂತ ಪಾಟೀಲ, ಲತಾ ಯಲಿಗಾರ,ಮಾಲತಿ ಯಲಿಗಾರ, ಗೌರಮ್ಮ ಯಲಿಗಾರ,ಶೃತಿ ಯಲಿಗಾರ ಸೇರಿದಂತೆ ಇತರರು ಇದ್ದರು.
-ಮಂಜುನಾಥ ಪಾಟೀಲ,ಶಿಗ್ಗಾಂವ್