ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಜಾರಿಗೆ ತಂದಿರುವ 5 ಉಚಿತ ಯೋಜನೆಗಳಲ್ಲಿ ಒಂದಾದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಕರ್ಯ ಒದಗಿಸಿದ್ದು ಇದು ಅವೈಜ್ಞಾನಿಕವಾಗಿದೆ,ಇದರಿಂದ ಹಳ್ಳಿಗಳಲ್ಲಿ ಮಹಿಳೆಯರು ತುರ್ತು ಕೆಲಸಗಳಿಲ್ಲದಿದ್ದರೂ ಬಸ್ಸುಗಳಲ್ಲಿ ಹೆಚ್ಚಿನ ಪ್ರಯಾಣ ಮಾಡುತ್ತಿದ್ದಾರೆ ಇದರಿಂದ ಸರಕಾರಿ ಬಸ್ಸುಗಳಲ್ಲಿ ಕೂಡಲು ಆಸನ ಸಿಗದೆ ದಿನಾಲೂ ಬಸ್ಸಗಳು ಫುಲ್ ಇರುವ ಕಾರಣ ಬಾಗಿಲಿನಲ್ಲಿ ನಿಂತು ಪ್ರಯಾಣ ಮಾಡಿ ಎಷ್ಟೋ ಜನ ಪ್ರಾಣ ಬಿಟ್ಟ ಮತ್ತು ನೂಕುನುಗ್ಗಲು ಉಂಟಾಗಿ ಎಷ್ಟೋ ವಿದ್ಯಾರ್ಥಿಗಳು ಅಸ್ತವ್ಯಸ್ತವಾದ ಘಟನೆಗಳು ನಡೆದಿವೆ,ಬರಿ ಮಹಿಳೆಯರಿಂದಲೆ ಬಸ್ಸುಗಳು ಸಿಗದೆ ವಿದ್ಯಾರ್ಥಿಗಳು ಶಾಲೆ ಕಾಲೆಜುಗಳಿಗೆ ಗೈರು ಹಾಜರು ಆಗುವಂತಾಗಿದೆ,ಇದರಿಂದ ರಾಜ್ಯದ ಎಲ್ಲಾ ಜಿಲ್ಲೆಯ,ತಾಲೂಕು ಹಳ್ಳಿಗಳಿಂದ ಶಾಲೆ,ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಡೆತ ಬೀಳುತ್ತಿದೆ,ಕಾರಣ ಶಾಲಾ-ಕಾಲೇಜಿಗೆ ಹೋಗುವ ತಮ್ಮ ಮಕ್ಕಳ ವಿದ್ಯಾಭ್ಯಾಸದ ಅನಕೂಲಕ್ಕಾಗಿ ರಾಜ್ಯದ ಮಹಿಳೆಯರು ತುರ್ತು ಪರಸ್ಥಿತಿಯಲ್ಲಿ ಮಾತ್ರ ಬಸ್ ಪ್ರಯಾಣ ಮಾಡಬೇಕು,ಉಚಿತ ಬಸ್ ಪ್ರಯಾಣವನ್ನು ಕೆಲವು ಜನರು ಸ್ವಾಗತಿಸುತ್ತಿದ್ದಾರೆ,ಕೆಲವು ಜನರು ವಿರೋದಿಸುತ್ತಿದ್ದಾರೆ,ಕಾರಣ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಬಸ್ ಘಟಕಗಳಲ್ಲಿ ಈ ಯೋಜನೆಗೆ ಸಾಕಷ್ಟು ಬಸ್ಸುಗಳ ವ್ಯವಸ್ಥೆ ಇಲ್ಲ,ಈ ಯೋಜನೆ ಸಾಕಾರಗೊಳಿಸಲು ಸಾಕಷ್ಟು ಬಸ್ಸಗಳು ಇಲ್ಲದೆ ಮುಂದಾಲೋಚನೆ ಮಾಡದೆ ಈ ಯೋಜನೆ ಜಾರಿಗೆ ತಂದು ಮಾನ್ಯ ಮುಖ್ಯಮಂತ್ರಿಗಳು ತಪ್ಪು ನಿರ್ಧಾರ ಮಾಡಿದ್ದಾರೆ.ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ತರುವ ಬದಲು ರೈತರ ಸಾಲ ಮನ್ನಾ,ರೈತರು ಬೆಳೆಯುವ ಎಲ್ಲಾ ಬೆಳೆಗಳ ಬೆಂಬಲ ಬೆಲೆ,ರೈತರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಅರೋಗ್ಯದ ಜೊತೆ ಬಸ್ಸುಗಳಲ್ಲಿ
ರೈತ ಮಹಿಳೆಯರಿಗೆ,ಶಾಲೆ,ಕಾಲೇಜು ವಿದ್ಯಾರ್ಥಿನಿಯರಿಗೆ ಅಂಗವಿಕಲರಿಗೆ,ವಯಸ್ಕರಿಗೆ ಮಾತ್ರ ಉಚಿತ ಪ್ರಯಾಣ ಜಾರಿಗೆ ತರಬೇಕಿತ್ತು,ಇದರ ಬಗ್ಗೆ ರಾಜ್ಯದ ಎಲ್ಲಾ ರೈತರ ಏಳಿಗೆಗಾಗಿ ಮತ್ತೊಮ್ಮೆ ಪರಿಶೀಲನೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುತ್ತೇನೆ ಎಂದು ಮಲ್ಲಿಕಾರ್ಜುನ ಎಸ್ ಉಮ್ಮರ್ಗಿ ಕುಮ್ಮನಸಿರಸಗಿ,ರೈತ ಸಂಘ ರಾಜ್ಯಾಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.