ಸಿಂಧನೂರಿನ ಅಮರ ಶ್ರೀ ಆಲದ ಮರದ ಅಂಗಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಸಿಂಧನೂರು ಹಾಗೂ ವನಸಿರಿ ಫೌಂಡೇಶನ್ (ರಿ.)ರಾಜ್ಯ ಘಟಕ ಸಿಂಧನೂರು ಇವರ ಸಹಯೋಗದೊಂದಿಗೆ ದಾರ್ಶನಿಕರ ಮಾಸಿಕ ಹಸಿರು ಕವಿಗೋಷ್ಠಿ ಸರಣಿ-16ರ ಸಂಚಿಕೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಸಿರು ಕವಿಗೋಷ್ಠಿ ಕಾರ್ಯಕ್ರಮ ನೆರವೇರಿತು.
ರವಿ ಕಾಣದ್ದನ್ನು ಕವಿ ಕಂಡ ಕವಿಗಳು ಗಿಡಮರಗಳ ಬೇರಿಗೆ ಭಾಷೆ ಭಾವನೆಗಳನ್ನು ತುಂಬಿದರೆ ಗಿಡಮರಗಳಿಗೆ ಜೀವತುಂಬುವ ಅಮರೇಗೌಡ ಮಲ್ಲಾಪೂರ ಅವರ ಕಾರ್ಯ ಶ್ಲಾಘನೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಅದ್ಯಕ್ಷರಾದ ಟಿ.ಹುಸೇನ್ ಸಾಬ್ ಅವರು ತಿಳಿಸಿದರು.
ಕಾರ್ಯಕ್ರಮವನ್ನು ಸಸಿಗಳಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಟಿ.ಹುಸೇನ್ ಸಾಬ್ ಅವರು ಮಾತನಾಡಿ ಎರಡು ಕ್ರೀಯಾಶೀಲ ಸಂಸ್ಥೆಗಳು ಎರಡು ಕ್ರಿಯಾಶೀಲ ಅಧ್ಯಕ್ಷರುಗಳ ಸಮ್ಮುಖದಲ್ಲಿ ಮರುಜೀವ ಪಡೆದ ಆಲದ ಮರದ ಅಂಗಳದಲ್ಲಿ ಈ ಆಲದ ಮರಕ್ಕೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡುವ ಸೌಭಾಗ್ಯ ನನ್ನದಾಗಿದೆ.ಈ ಕಾರ್ಯಕ್ರಮಕ್ಕೆ ಸಹೋದರತೆಯ ರೂಪ ಕೊಡಲು ನನ್ನನ್ನು ಉದ್ಘಾಟಕರಾಗಿ ಕರೆದಿರುವುದು ನನಗೆ ತುಂಬಾ ಸಂತೋಷವಾಯಿತು ಆಲದ ಮರಕ್ಕೆ ನೀರುಣಿಸಿದ್ದೇವೆ ಈ ಆಲದ ಮರದ ಜೊತೆಗೆ ಅಮರೇಗೌಡ ಮಲ್ಲಾಪೂರ ಅವರಂತಹ ಇನ್ನೊಂದು ಆಲದ ಮರ ಕೂಡಾ ದೊಡ್ಡದಾಗಲಿ ಮುಂದಿನ ಕವಿಗೋಷ್ಠಿಯನ್ನು ಆ ಆಲದ ಮರದ ಕೆಳಗಡೆ ಮಾಡುವಂತಾಗಲಿ ಎಂಬುದು ನನ್ನ ಆಸೆಯಾಗಿದೆ ಎಂದು ತಿಳಿಸಿದರು ರವಿಕಾಣದ್ದನ್ನ ಕವಿ ಕಂಡ ಎನ್ನುವಂತೆ ಈ ಹಸಿರು ಕವಿಗೋಷ್ಠಿಯಲ್ಲಿ ಆಲದ ಮರದ ಬೇರುಗಳಿಗೆ ಭಾಷೆಯನ್ನು,ಭಾವನೆಗಳನ್ನು ತುಂಬುವಂತಹ ಕಾರ್ಯವನ್ನು ಕವಿಗಳು ಕವಿಯತ್ರಿಯರು ಮಾಡಿದ್ದಾರೆ ಈ ಗಿಡಮರಗಳಿಗೆ ಜೀವ ತುಂಬುವ ಕಾರ್ಯವನ್ನು ಅಮರೇಗೌಡ ಮಲ್ಲಾಪೂರ ಅವರು ಮಾಡುತ್ತಿದ್ದಾರೆ ಅಮರೇಗೌಡ ಮಲ್ಲಾಪೂರ ಅವರ ಕಾರ್ಯ ತುಂಬಾ ಅದ್ಭುತವಾದದ್ದು,ಶಾಶ್ವತವಾದ ಕಾರ್ಯ ಪುಣ್ಯದ ಕಾರ್ಯ ಗಿಡಮರಗಳನ್ನು ಉಳಿಸುವ ಕಾರ್ಯದಲ್ಲಿ ತೊಡಗಿರುವ ಅಮರೇಗೌಡ ಮಲ್ಲಾಪೂರ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವ ಹೊಂದಿದ ಸದಸ್ಯರು,ತಾಲೂಕಿನ ಕವಿಗಳು, ಕವಿಯತ್ರಿಯರು,ಪರಿಸರ ಪ್ರೇಮಿಗಳು,ಸಾಹಿತಿಗಳು ಭಾಗವಹಿಸಿ ಪರಿಸರದ ಕುರಿತು ಸ್ವರಚಿತ ಕವನ ವಾಚನ ಹಾಗೂ ಸಂಗೀತ ಕಾರ್ಯಕ್ರಮಗಳು ನೆರವೇರಿದವು ನಂತರ ಪರಿಸರ ಕ್ಷೇತ್ರದಲ್ಲಿ ಅಗಾಧವಾದ ಸೇವೆ ಸಲ್ಲಿಸಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರು, ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರಿಗೆ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ಟಿ, ಹುಸೇನ್ ಸಾಬ್ ಅಧ್ಯಕ್ಷರು ಜಮಾಅತೆ ಇಸ್ಲಾಮೀ ಹಿಂದ್ ಸಿಂಧನೂರು ಅವರು ನೆರವೇರಿಸಿದರು,ಅಧ್ಯಕ್ಷತೆಯನ್ನು ಶ್ರೀ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಸಿಂಧನೂರು ಅವರು ವಹಿಸಿದ್ದರು
ಕವಿಗೋಷ್ಠಿ ಅಧ್ಯಕ್ಷತೆಯನ್ನು ಶ್ರೀ ಮತಿ ರಮಾದೇವಿ ಶಂಬೋಜಿ ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಸಿಂಧನೂರು ಅವರು ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ಶ್ರೀ ಅಮರೇಗೌಡ ಮಲ್ಲಾಪುರ ಸಂಸ್ಥಾಪಕ ಅಧ್ಯಕ್ಷರು ವನಸಿರಿ ಪೌಂಡೇಶನ್ ಸಿಂಧನೂರು,ಶ್ರೀ ಎಸ್ ದೇವೇಂದ್ರಗೌಡ ಸದಸ್ಯರು ಕಸಾಪ ಜಿಲ್ಲಾ ಘಟಕ ರಾಯಚೂರ,ಶ್ರೀ ಅಮರಯ್ಯಸ್ವಾಮಿ ಪತ್ರಿಮಠ ಶಿಕ್ಷಕರು ಸಿಂಧನೂರು,
ಶ್ರೀ ಎನ್.ಅಮರೇಶ ಕೇಂದ್ರ ಕಸಾಪ ಸಲಹಾ ಸಮಿತಿ ಸದಸ್ಯರು ಬೆಂಗಳೂರ,
ಶ್ರೀ ಎಚ್ ಎಪ್ ಮಸ್ಕಿ ಶಿಕ್ಷಕರು ಸಿಂಧನೂರು,ಶ್ರೀ ಇಸ್ಮಾಯಿಲ್ ಸಾಬ್ ರಂಗಭೂಮಿ ಕಲಾವಿದರು ಸಿಂಧನೂರು,
ವೀರೇಶ ಶಿವನಗುತ್ತಿ ಕೃಷಿ ಇಲಾಖೆ ಸಿಂಧನೂರು,ಶ್ರೀ ಸಂಗಪ್ಪ ಬಳ್ಳಾರಿ ಹಿರಿಯ ಕವಿಗಳು,ಶ್ರೀ ಶರಭಯ್ಯಸ್ವಾಮಿ ಹಿರೇಮಠ,ಶ್ರೀ ಅಮರೇಶ ಹೂಗಾರ ಶಿಕ್ಷಕರು,ಶ್ರೀ ಎಂ.ಸಂಗಪ್ಪ ಬಳ್ಳಾರಿ,ವೀರೇಶ ಶಿವನಗುತ್ತಿ ಕೃಷಿ ಇಲಾಖೆ,ಶಂಕರ ದೇವರು ಹಿರೇಮಠ ಶಿಕ್ಷಕರು,ವಿರೂಪಾಕ್ಷಪ್ಪ ಶಿಕ್ಷಕರು
ಮುಕೇಶ್ ಭೋಗಾಪೂರ,
ಶ್ರೀ ಮತಿ ಬಸಮ್ಮ ತಾಳಿಕೋಟಿ,
ಶ್ರೀ ಮತಿ ಶಾಂತಾ ಒಳಗಿನಮನಿ,ಶ್ರೀ ಮತಿ ಭಾರತಿ ತಿವಾರಿ,ಕುಮಾರಿ ದಾನೇಶ್ವರಿ ಅರಗಿನಮರ ಕ್ಯಾಂಪ್ ಹಾಗೂ ವನಸಿರಿ ಫೌಂಡೇಶನ್ ಸರ್ವ ಸದಸ್ಯರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಶಂಕರ ದೇವರು ಹಿರೇಮಠ ನಿರೂಪಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.